ಕರ್ನಾಟಕ

karnataka

ETV Bharat / entertainment

Vijay Deverakonda: ಕೊನೆಗೂ ಮದುವೆ ಬಗ್ಗೆ ಮಾತನಾಡಿದ ವಿಜಯ್​ ದೇವರಕೊಂಡ - ವಧು ಯಾರು?

Vijay Deverakonda on Marriage: ಮದುವೆ ಬಗ್ಗೆ ನಟ ವಿಜಯ್​ ದೇವರಕೊಂಡ ಮಾತನಾಡಿದ್ದಾರೆ.

Vijay Deverakonda
ವಿಜಯ್​ ದೇವರಕೊಂಡ

By

Published : Aug 9, 2023, 8:15 PM IST

'ಕುಶಿ' 2023ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಶಿವ ನಿರ್ವಾಣ ಅವರು ಆ್ಯಕ್ಷನ್​ ಕಟ್​ ಹೇಳಿರುವ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಸೌತ್ ಸುಂದರಿ ಸಮಂತಾ ರುತ್ ಪ್ರಭು ಮತ್ತು ದಕ್ಷಿಣ ಚಿತ್ರರಂಗದ ಸ್ಟಾರ್​ ನಟ ವಿಜಯ್​ ದೇವರಕೊಂಡ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ಸೆಪ್ಟೆಂಬರ್​ 1 ರಂದು ತೆರೆಕಾಣುತ್ತಿದೆ. ಹೀಗಾಗಿ ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ. ಕುಶಿ ಪ್ರಮೋಶನ್​ ಭಾಗವಾಗಿ ಇಂದು ಹೈದರಾಬಾದ್​ನಲ್ಲಿ ಗ್ರ್ಯಾಂಡ್​ ಟ್ರೇಲರ್ ರಿಲೀಸ್​ ಈವೆಂಟ್​​ ನಡೆಯಿತು.

ಟ್ರೇಲರ್ ರಿಲೀಸ್​ ಈವೆಂಟ್​ನಲ್ಲಿ ಚಿತ್ರಕಥೆ ಬರಹಗಾರ, ನಿರ್ದೇಶಕ ಶಿವ ನಿರ್ವಾಣ ಮತ್ತು ನಾಯಕ ನಟ ವಿಜಯ್​ ದೇವರಕೊಂಡ ಉಪಸ್ಥಿತರಿದ್ದರು. ನಾಯಕ ನಟಿ ಸಮಂತಾ ರುತ್​ ಪ್ರಭು ಕಾರ್ಯಕ್ರಮಕ್ಕೆ ಗೈರಾಗಿದ್ದರು. ನಟಿ ತಮ್ಮ ಆರೋಗ್ಯ ಚೇತರಿಕೆಗಾಗಿ ಸಿನಿಮಾಗಳಿಂದ ಸಣ್ಣ ಬ್ರೇಕ್​ ಪಡೆದಿದ್ದಾರೆ. ಈ ಸಿನಿಮಾ ಸಂಪೂರ್ಣ ಪ್ರೇಮಕಥೆ ಆಧರಿಸಿದ್ದು, ಮದುವೆ ಬಳಿಕ ದಂಪತಿ ಎದುರಿಸುವ ಸವಾಲುಗಳ ಮೇಲೆ ಕಥೆ ಹೆಣೆಯಲಾಗಿದೆ. ಈವೆಂಟ್​ನಲ್ಲಿ ಮದುವೆ ಬಗ್ಗೆ ಸೆನ್ಸೇಶನಲ್​ ಸ್ಟಾರ್ ವಿಜಯ್​ ದೇವರಕೊಂಡ ಅವರಿಗೆ ಪ್ರಶ್ನೆ ಎದುರಾಯಿತು.

ಟ್ರೇಲರ್ ಲಾಂಚ್​​​​ ಈವೆಂಟ್​ನಲ್ಲಿ ವಿಜಯ್​ ದೇವರಕೊಂಡ ಅವರಲ್ಲಿ ಮದುವೆ ಬಗ್ಗೆ ಪ್ರಶ್ನಿಸಲಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟ ಶೀಘ್ರವೇ ಪರಿಗಣಿಸಬೇಕಾದ ವಿಷಯ ಎಂದು ತಿಳಿಸಿದರು. ಮದುವೆ ಬಗ್ಗೆ ಭಯ ಹೊಂದಿದ್ದೀರಾ ಎಂಬ ಪ್ರಶ್ನೆ ಎದುರಾದಾಗ, ಇಲ್ಲ ಎಂದು ಬಹಳ ವಿಶ್ವಾಸದಿಂದ ಉತ್ತರಿಸಿದರು. 34 ವರ್ಷದ ಯಂಗ್​ ಹೀರೋ, ವಿಷಯವನ್ನು ಅರ್ಥ ಮಾಡಿಕೊಂಡಿದ್ದೇನೆ, ಸಾಕಷ್ಟು ಆರಾಮದಾಯಕವಾಗಿದ್ದೇನೆ ಎಂದು ವಿವರಿಸಿದರು.

ಈ ಹಿಂದಿನ ದಿನಗಳಲ್ಲಿ ವಿಜಯ್​ ದೇವರಕೊಂಡ ಅವರಿಗೆ ಮದುವೆ ಕಾನ್ಸೆಪ್ಟ್​ ಕೊಂಚ ಕಿರಿಕಿರಿ ಎನಿಸುತ್ತಿತ್ತು. ಆದ್ರೀಗ ನಟ ಮದುವೆ ಕುರಿತ ಮಾತುಕತೆಗಳಲ್ಲಿ ತೊಡಗುತ್ತಾರೆ. ಸ್ನೇಹಿತರ ಯಶಸ್ವಿ ಮತ್ತು ಸವಾಲುಗಳುಳ್ಳ ವೈವಾಹಿಕ ಪ್ರಯಾಣವನ್ನು ನೋಡಲು ಸಂತೋಷ ಪಡುತ್ತೇನೆ. ಏಕೆಂದರೆ ಪತೀ ಅಂಶಗಳೂ ಕುತೂಹಲಕಾರಿಯಾಗಿರುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:Kushi: ಕುಶಿ ಟ್ರೇಲರ್ ಅನಾವರಣ - ಅದ್ಭುತ ಪ್ರೇಮಕಥೆ ಹೇಳಲು ಸಜ್ಜಾದ ಸಮಂತಾ, ವಿಜಯ್​ ದೇವರಕೊಂಡ

ಮಾತು ಮುಂದುವರಿಸಿದ ಸ್ಟೈಲಿಶ್​​ ಸ್ಟಾರ್, ನಾನು ಸ್ವಂತ ವೈವಾಹಿಕ ಜೀವನ ಹೊಂದಲು ಬಯಸುತ್ತೇನೆ. ಏಕೆಂದರೆ ಇದು ಪ್ರತಿಯೊಬ್ಬರೂ ಎದುರಿಸಬೇಕಾದ ಹಂತ. ಅನುಭವಗಳನ್ನು ಹೊಂದುವ ಒಂದು ಅಧ್ಯಾಯವಾಗಲಿದೆ. ಇನ್ನೂ ಭಯಪಡುವ ಅಂಶಗಳ ಮೇಲೆ ವಾಸಿಸುವ ಬದಲು ನಮ್ಮ ಗಮನವನ್ನು ಸಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀರಿಸುವುದು ಉತ್ತಮ. ಮಹತ್ವದ ಹೆಜ್ಜೆ ಇಡುವೆ ವೇಳೆ ದಾಂಪತ್ಯದೊಳಗಿನ ಸೌದರ್ಯವನ್ನು ಅನುಭವಿಸುವುದು ಅಗತ್ಯ ಎಂದು ತಿಳಿಸಿದರು. ಇನ್ನೂ ವಿಜಯ್​ ದೇವರಕೊಂಡ ಅವರ ಹೆಸರು ಬಹುಭಾಷಾ ನಟಿಯೊಂದಿಗೆ ಆಗಾಗ್ಗೆ ಸದ್ದು ಮಾಡುತ್ತವೆ. ಈ ಹಿನ್ನೆಲೆಯಲ್ಲಿ ನಟ ಯಾರೊಂದಿಗೆ ವೈವಾಹಿಕ ಜೀವನ ಆರಂಭಿಸಲಿದ್ದಾರೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ:Mahesh Babu: ಟಾಲಿವುಡ್​ ಪ್ರಿನ್ಸ್ ಮಹೇಶ್​ ಬಾಬು ಕುರಿತ ಇಂಟ್ರೆಸ್ಟಿಂಗ್​ ವಿಚಾರಗಳು

ABOUT THE AUTHOR

...view details