ಕರ್ನಾಟಕ

karnataka

ETV Bharat / entertainment

'ನೈನ್ ತಾ ಹೀರೆ'ಸಾಂಗ್​ ರಿಲೀಸ್​​​: ಹೇಗಿದೆ ನೋಡಿ ವರುಣ್​​, ಕಿಯಾರಾ ಸ್ಟೈಲಿಶ್ ಲುಕ್​ - ನೈನ್ ತಾ ಹೀರೆ ಹಾಡು ಬಿಡುಗಡೆ

ವರುಣ್ ಧವನ್ ಮತ್ತು ಕಿಯಾರಾ ಅಡ್ವಾಣಿ ನಟನೆಯ ಬಹು ನಿರೀಕ್ಷಿತ ಚಿತ್ರ 'ಜುಗ್​ ಜುಗ್​ ಜಿಯೋ' ಬಿಡುಗಡೆಗೆ ಸಜ್ಜಾಗಿದ್ದು, 'ನೈನ್ ತಾ ಹೀರೆ' ಹಾಡು ರಿಲೀಸ್​ ಆಗಿದೆ.

ವರುಣ್ ಧವನ್ ಮತ್ತು ಕಿಯಾರಾ ಅಡ್ವಾಣಿ
ವರುಣ್ ಧವನ್ ಮತ್ತು ಕಿಯಾರಾ ಅಡ್ವಾಣಿ

By

Published : Jun 18, 2022, 7:21 AM IST

ಮುಂಬೈ: ಬಾಲಿವುಡ್​ ನಟ ವರುಣ್​ ಧವನ್​, ಕಿಯಾರಾ ಅಡ್ವಾಣಿ ಹಾಗೂ ಅನಿಲ್​ ಕಪೂರ್​ ನಟನೆಯ ಬಹು ನಿರೀಕ್ಷಿತ ಫ್ಯಾಮಿಲಿ ಎಂಟರ್ಟೈನ್ಮೆಂಟ್​ ಸಿನಿಮಾ 'ಜುಗ್​ ಜುಗ್​ ಜಿಯೋ'ದ 'ನೈನ್ ತಾ ಹೀರೆ' ಹಾಡು ಬಿಡುಗಡೆಯಾಗಿದ್ದು, ಸಾಂಗ್​ ರಿಲೀಸ್ ಕಾರ್ಯಕ್ರಮದಲ್ಲಿ​ ವರುಣ್ ಹಾಗೂ ಕಿಯಾರಾ ಸ್ಟೈಲಿಶ್ ಆಗಿ ಕಾಣಿಸಿಕೊಂಡರು.

'ನೈನ್ ತಾ ಹೀರೆ' ಹಾಡಿಗೆ ವಿಶಾಲ್ ಶೆಲ್ಕೆ ಸಂಯೋಜನೆ ಮಾಡಿದ್ದು, ಗುರು ರಾಂಧವಾ ಮತ್ತು ಅಸೀಸ್ ಕೌರ್ ಹಾಡಿದ್ದಾರೆ. ಇನ್ನು ಸಾಂಗ್​ ಬಿಡುಗಡೆ ಕಾರ್ಯಕ್ರಮಕ್ಕೆ ವಿಶ್ವದ ಅತ್ಯಂತ ಚಿಕ್ಕ ಗಾಯಕ ಅಬ್ದು ರೋಜಿಕ್ ಸಹ ಭಾಗಿಯಾಗಿದ್ದು, ಎಲ್ಲರ ಗಮನ ಸೆಳೆದರು.

ನೈನ್ ತಾ ಹೀರೆ ಹಾಡು ಬಿಡುಗಡೆ

'ನೈನ್ ತಾ ಹೀರೆ' ಸಾಂಗ್​ ಬಿಡುಗಡೆಗಿಂತಲೂ ಮುನ್ನ 'ದಿ ಪಂಜಾಬನ್ ಸಾಂಗ್', 'ರಂಗೀಸಾರಿ' ಹಾಡು​ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಅಭಿಮಾನಿಗಳ ಮನ ಸೆಳೆದಿದೆ. 'ಜುಗ್​ ಜುಗ್​ ಜಿಯೋ'ದಲ್ಲಿ ಅನಿಲ್ ಕಪೂರ್, ನೀತು ಕಪೂರ್, ಮನೀಶ್ ಪಾಲ್, ಪ್ರಜಕ್ತಾ ಕೋಲಿ, ಎಲ್ನಾಜ್ ನೊರೌಜಿ ಮತ್ತು ಟಿಸ್ಕಾ ಚೋಪ್ರಾ ಕೂಡ ನಟಿಸಿದ್ದಾರೆ. ರಾಜ್ ಮೆಹ್ತಾ ನಿರ್ದೇಶನದ ಈ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದೆ. ಇದೇ ಜೂನ್​ 24 ರಂದು ಸಿನಿಮಾ ತೆರೆಕಾಣಲಿದೆ.

ಇದನ್ನೂ ಓದಿ:ಜುಗ್​ ಜುಗ್​ ಜಿಯೋ ಪ್ರೊಮೋಶನ್​ : ಮೆಟ್ರೋ ಏರಿದ ಬಾಲಿವುಡ್​ ಸ್ಟಾರ್​ಗಳು

ABOUT THE AUTHOR

...view details