ಕರ್ನಾಟಕ

karnataka

ETV Bharat / entertainment

ಯುವ ನಟ ಸತೀಶ್ ಹತ್ಯೆ ಪ್ರಕರಣ : ಬಾಮೈದ ಸೇರಿ ಇಬ್ಬರ ಬಂಧನ - ನಟ ಸತೀಶ್ ವಜ್ರ ಕೊಲೆ ಪ್ರಕರಣದಲ್ಲಿ ಬಾಮೈದನ ಬಂಧನ

ಯುವ ನಟ ಸತೀಶ್ ವಜ್ರ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ..

two-arrested-in-actor-satish-murder-case
ಯುವ ನಟ ಸತೀಶ್ ಹತ್ಯೆ ಪ್ರಕರಣ: ಬಾಮೈದ ಸೇರಿ ಇಬ್ಬರ ಬಂಧನ

By

Published : Jun 18, 2022, 9:08 PM IST

ಬೆಂಗಳೂರು : ಯುವ ನಟ ಸತೀಶ್ ವಜ್ರ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸತೀಶ್ ಬಾಮೈದ ಸುದರ್ಶನ್ ಹಾಗೂ ಆತನ ಸಹೋದರ ಸಂಬಂಧಿ ನಾಗೇಂದ್ರ ಬಂಧಿತ ಆರೋಪಿಗಳು.

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಸತೀಶ್ ಪತ್ನಿ ಸುಧಾ ಇತ್ತೀಚೆಗೆ ಸಾವನ್ನಪ್ಪಿದ್ದಳು. ತಂಗಿಗೆ ಸರಿಯಾಗಿ ಚಿಕಿತ್ಸೆ ಕೊಡಿಸಿಲ್ಲ ಅಂತಾ ಬಾವ ಸತೀಶ್ ಮೇಲೆ ಅಂದಿನಿಂದಲೂ ಸುದರ್ಶನ್ ಕೋಪಗೊಂಡಿದ್ದ. ಅಲ್ಲದೇ ಸುಧಾ ಸಾವನ್ನಪ್ಪಿದ ಬಳಿಕ ಮಗು ಯಾರ ಬಳಿ ಇರಬೇಕು ಎಂಬ ವಿಚಾರಕ್ಕೆ ಬಾವ-ಬಾಮೈದನ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.

ಬಂಧಿತ ಆರೋಪಿಗಳು

ಶುಕ್ರವಾರ ರಾತ್ರಿ 10.30ರ ಸುಮಾರಿಗೆ ತನ್ನ ಸಂಬಂಧಿ ನಾಗೇಂದ್ರನ ಜೊತೆ ಸತೀಶ್ ಮನೆಗೆ ಬಂದಿದ್ದ ಸುದರ್ಶನ್, ಸಹೋದರಿಯ ಸಾವಿನ ವಿಚಾರವಾಗಿ ಮತ್ತೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸುದರ್ಶನ್ ತನ್ನ ಬಾವನನ್ನೇ ಚಾಕುವಿನಿಂದ ಹಲ್ಲೆಗೈದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶವಿವಾರ ಬೆಳಗ್ಗೆ ಘಟನೆ ಬಯಲಾಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳಿಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆ ಮುಂದುವರೆದಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಸ್ಯಾಂಡಲ್​ವುಡ್​ ಯುವ ನಟನ ಬರ್ಬರ ಹತ್ಯೆ

ABOUT THE AUTHOR

...view details