ಕರ್ನಾಟಕ

karnataka

ETV Bharat / entertainment

ಸ್ಟೆತೋಸ್ಕೋಪ್ ಹಿಡಿದ ಗೋಲ್ಡನ್ ಸ್ಟಾರ್.. ಇದು ಗಣಿಯ ಸಕ್ಸಸ್ ಕಹಾನಿಯ ಸೀಕ್ರೆಟ್ - ನಟ ಗೋಲ್ಡನ್ ಸ್ಟಾರ್ ಗಣೇಶ್

ಕಾಮಿಡಿ ಜೊತೆಗೆ ನೋಡುಗರ‌‌ ಕಣ್ಣಲ್ಲಿ ಕಣ್ಣೀರು ತರಿಸುವ ಹಾಗೆ ಮನೋಜ್ಞವಾಗಿ ನಟಿಸುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಬಲ್ ರೈಡಿಂಗ್ ಚಿತ್ರದ ಆಫೀಶಿಯಲ್ ಟ್ರೇಲರ್ ಬಿಡುಗಡೆಯಾಗಿದೆ.

Triple Riding movie trailer release  Godden star Ganesh acting movie  Triple Riding movie release date  ಸ್ಟೆತೋಸ್ಕೋಪ್ ಹಿಡಿದ ಗೋಲ್ಡನ್ ಸ್ಟಾರ್  ಗಣಿಯ ಸಕ್ಸಸ್ ಕಹಾನಿಯ ಸೀಕ್ರೇಟ್  ಕಾಮಿಡಿ ಜೊತೆಗೆ ನೋಡುಗರ‌‌ ಕಣ್ಣಲ್ಲಿ ಕಣ್ಣೀರು  ನಟ ಗೋಲ್ಡನ್ ಸ್ಟಾರ್ ಗಣೇಶ್  ತ್ರಿಬಲ್ ರೈಡಿಂಗ್ ಚಿತ್ರದ ಆಫೀಶಿಯಲ್ ಟ್ರೇಲರ್
ಸ್ಟೆತೋಸ್ಕೋಪ್ ಹಿಡಿದ ಗೋಲ್ಡನ್ ಸ್ಟಾರ್

By

Published : Nov 17, 2022, 11:34 AM IST

ಕಾಮಿಡಿ ಜೊತೆಗೆ ನೋಡುಗರ‌‌ ಕಣ್ಣಲ್ಲಿ ಕಣ್ಣೀರು ತರಿಸುವ ಹಾಗೆ ಮನೋಜ್ಞವಾಗಿ ನಟಿಸುವ ನಟ ಗೋಲ್ಡನ್ ಸ್ಟಾರ್ ಗಣೇಶ್. ಈ ಮಾತನ್ನ ಹಿರಿಯ ನಟ ಅನಂತ್ ನಾಗ್ , ರಂಗಾಯಣ ರಘು ಅಂತಹ ದಿಗ್ಗಜ ನಟರು ಗಣಿ ಆಕ್ಟಿಂಗ್ ಬಗ್ಗೆ ಆಗಾಗ ವೇದಿಕೆ ಮೇಲೆ‌ ಹೇಳುತ್ತಲೇ ಇರುತ್ತಾರೆ. ಈ ಮಾತನ್ನ ಮತ್ತೊಮ್ಮೆ‌ ನಿಜ‌ ಮಾಡೋದಕ್ಕೆ ಗೋಲ್ಡನ್ ಗಣೇಶ್ ಮೂರು ಜನ‌ ಚೆಂದುಳ್ಳಿ ಚೆಲುವೆಯರ ಜೊತೆ ತ್ರಿಬಲ್ ರೈಡಿಂಗ್ ಹೋಗುತ್ತಾ ಇರೋದು ಗೊತ್ತಿರುವ ವಿಷ್ಯ. ಸದ್ಯ ಹಾಡುಗಳಿಂದ ಕನ್ನಡ ಚಿತ್ರರಂಗದ ದೊಡ್ಡ ಮಟ್ಟದ ಅಭಿಮಾನಿಗಳ ಕ್ರೇಜ್ ಹುಟ್ಟಿಸಿರೋ ತ್ರಿಬಲ್ ರೈಡಿಂಗ್ ಚಿತ್ರದ ಆಫೀಶಿಯಲ್ ಟ್ರೇಲರ್ ಅನಾವರಣ ಆಗಿದೆ.

ಸ್ಟೆತೋಸ್ಕೋಪ್ ಹಿಡಿದ ಗೋಲ್ಡನ್ ಸ್ಟಾರ್

ಡಾಕ್ಟರ್ ಆದರೆ ಲವ್ ಮಾಡಬಾರದಾ, ಬರೀ ಪೇಷಂಟ್ ನೋಡ್ಕೊಂಡೆ ಇರೋದು, ಅವರಿಗೆ ಹಾರ್ಟ್ ಇರೋಲ್ವಾ ಅಂತಾ ಪಂಚಿಂಗ್ ಡೈಲಾಗ್​ನಿಂದ‌ ಶುರುವಾಗುವ ತ್ರಿಬಲ್ ರೈಡಿಂಗ್ ಚಿತ್ರದ ಟ್ರೇಲರ್ ನಿಜಕ್ಕೂ ಈ ವರ್ಷದ ಹಿಟ್ ಸಿನಿಮಾಗಳ ಸಾಲಿಗೆ ಸೇರಿಕೊಳ್ಳುವ ಎಲ್ಲ ಲಕ್ಷಣಗಳು ಕಾಣ್ತಾ ಇದೆ. ಚಮಕ್‌ ಚಿತ್ರ ಆದ್ಮಲೇ ಗಣೇಶ್ ಸ್ಟೆತೋಸ್ಕೋಪ್ ಮತ್ತೆ ಹಿಡಿದಿದ್ದಾರೆ.

ಗಣಿಯ ಸಿನಿಮಾ ಸಕ್ಸಸ್ ಕಹಾನಿಯ ಸೀಕ್ರೆಟ್ಸ್​​ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಗಣಿ ಚಮಕ್ ಸಿನಿಮಾದಲ್ಲಿ ಡಾಕ್ಟರ್ ಪಾತ್ರದಲ್ಲಿ ಪ್ರೇಕ್ಷಕರಿಗೆ ಹೃದಯ ಕದಿಯುವ ಮೂಲಕ ಕಣ್ಣೀರು ತರಿಸಿದರು. ಇದೀಗ ತ್ರಿಬಲ್ ರೈಡಿಂಗ್ ಚಿತ್ರ ಕೂಡ ಅದೇ ರೇಸ್​ನಲ್ಲಿದೆ.

ಎರಡು ನಿಮಿಷ 45‌‌ ಸೆಕೆಂಡ್​​ ಇರುವ ತ್ರಿಬಲ್ ರೈಡಿಂಗ್ ಟ್ರೈಲರ್​ನಲ್ಲಿ ಲವ್, ಕಾಮಿಡಿ, ಥ್ರಿಲ್ಲಿಂಗ್ ಜೊತೆಗೆ ಎಮೋಷನ್​ನಿಂದ‌ ಕೂಡಿದೆ. ಗಣಿ ಜೊತೆಗೆ ಮೇಘಾ ಶೆಟ್ಟಿ, ಅದಿತಿ ಪ್ರಭುದೇವ ಹಾಗೂ ರಚನಾ ಇಂದರ್ ಸಖತ್ತಾಗೆ ರೊಮ್ಯಾನ್ಸ್ ಮಾಡಿದ್ದಾರೆ. ಇದರ ಜೊತೆ ರಂಗಾಯಣ ರಘು, ಸಾಧು ಕೋಕಿಲ, ರವಿಶಂಕರ್ ಗೌಡ, ಶರತ್ ಲೋಹಿತಾಶ್ವ, ರವಿಶಂಕರ್,‌ ಕುರಿ ಪ್ರತಾಪ ಹೀಗೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ.

ಚಿತ್ರರಂಗದಲ್ಲಿ ಕೂಲೆಸ್ಟ್ ನಿರ್ದೇಶಕ ಅಂತಾ ಕರೆಯಿಸಿಕೊಂಡಿರುವ ಮಹೇಶ್ ಗೌಡ ತ್ರಿಬಲ್ ರೈಡಿಂಗ್ ಚಿತ್ರವನ್ನ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸಾಯಿ ಕಾರ್ತೀಕ್‌ ಸಂಗೀತ ನೀಡಿದ್ದಾರೆ. ಚಿತ್ರರಂಗದಲ್ಲಿ ಎರಡು ದಶಕಗಳ‌‌ ಕಾಲ‌ ಕ್ಯಾಮರಾಮ್ಯಾನ್ ಆಗಿ ಕೆಲಸ‌ ಮಾಡಿರೋ‌ ಛಾಯಾಗ್ರಹಕ ಜೈ ಆನಂದ್ ತ್ರಿಬಲ್ ರೈಡಿಂಗ್ ಚಿತ್ರದ ರಿಚ್​ನೆಸ್ ಮತ್ತಷ್ಟು ಹೆಚ್ಚಿಸಿದ್ದಾರೆ. ಅನ್ ಲಿಮಿಟೆಡ್ ಫನ್ ಇರುವ ಸಿನಿಮಾವನ್ನ ಬಹುಕೋಟಿ ವೆಚ್ಚದಲ್ಲಿ ವೈಎಂ ರಾಮ್ ಗೋಪಾಲ್ ನಿರ್ಮಾಣ ಮಾಡಿದ್ದಾರೆ.

ಸದ್ಯಕ್ಕೆ ತ್ರಿಬಲ್ ರೈಡಿಂಗ್ ಚಿತ್ರದ ಟ್ರೈಲರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಒಂದು‌ ಮಿಲಿಯನ್ ಗಟ್ಟಲೆ ಜನ‌ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಚಿತ್ರ ಪ್ರೇಕ್ಷಕರ ಹೃದಯ ಗೆಲ್ಲುವುದು ಪಕ್ಕಾ ಅಂತಾ ಟ್ರೇಲರ್ ನೋಡಿದವರು ಹೇಳ್ತಾ ಇದ್ದಾರೆ. ಇದೇ ನವೆಂಬರ್ 25ಕ್ಕೆ ಗಣಿ ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ತ್ರಿಬಲ್ ರೈಡಿಂಗ್ ಬರ್ತಾ ಇದ್ದಾರೆ, ಮಿಸ್ ಮಾಡಿಕೊಳ್ಳಬೇಡಿ.

ಓದಿ:ಯಟ್ಟ..ಯಟ್ಟ..ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಾಂಗ್​ ರಿಲೀಸ್

ABOUT THE AUTHOR

...view details