ಕರ್ನಾಟಕ

karnataka

ETV Bharat / entertainment

Mahesh Babu Daughter Dance: ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿರುವ ಮಹೇಶ್​ ಬಾಬು ಪುತ್ರಿ! - ಸಾಯಿ ಪಲ್ಲವಿ ಹಾಡಿಗೆ ಡ್ಯಾನ್ಸ್

Mahesh Babu Daughter Sitara Dance: ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮಗಳು ಬಾಲ್ಯದಿಂದಲೂ ಬಹುಮುಖ ಪ್ರತಿಭೆಯನ್ನು ತೋರಿಸುತ್ತಾ ಬರುತ್ತಿದ್ದಾರೆ. ಸಿತಾರಾ ಈಗಾಗಲೇ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡುತ್ತಿರುವ ವಿಡಿಯೋಗಳ ಮೂಲಕ ಜನಪ್ರಿಯರಾಗಿದ್ದಾರೆ. ಸಾಯಿ ಪಲ್ಲವಿ ಹಾಡಿಗೆ ಡ್ಯಾನ್ಸ್ ಮಾಡಿರುವ ಇತ್ತೀಚಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗ್ತಿದೆ.

Mahesh Babu Daughter Sitara Dance  Tollywood star Mahesh Babu  Sitara Dance Dance for saranga dariya song  Tollywood actor Mahesh Babu Daughter  Sitara Brand Ambassador  Guntur Kaaram Cast  ಸಿತಾರಾ ಎಂಬ ಹೆಸರು ಟಾಲಿವುಡ್ ಸ್ಟಾರ್ ಮಕ್ಕಳ  ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮಗಳು  ಸಾಯಿ ಪಲ್ಲವಿ ಹಾಡಿಗೆ ಡ್ಯಾನ್ಸ್  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿರುವ ಮಹೇಶ್​ ಬಾಬು ಪುತ್ರಿ

By

Published : Jun 16, 2023, 8:21 AM IST

ಹೈದರಾಬಾದ್​, ತೆಲಂಗಾಣ:ಸಿತಾರಾ ಎಂಬ ಹೆಸರು ಟಾಲಿವುಡ್ ಸ್ಟಾರ್ ಮಕ್ಕಳಲ್ಲಿ ಬಹುಮುಖ್ಯವಾಗಿ ಕೇಳು ಬರುತ್ತಿರುವ ಹೆಸರು ಅಂದ್ರೆ ಅದು ಮಹೇಶ್​ ಬಾಬು ಪುತ್ರಿ ಸಿತಾರಾ (Mahesh Babu Daughter Sitara Dance). ಅನೇಕ ಯೂಟ್ಯೂಬ್ ಸಂದರ್ಶನಗಳು ಮತ್ತು ವಿಡಿಯೋಗಳಿಂದ ಜನಪ್ರಿಯವಾಗಿರುವ ಸಿತಾರಾ ಈಗಾಗಲೇ Instagram ನಲ್ಲಿ ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಗಳಿಸಿದ್ದಾರೆ.

ಸಿತಾರಾ ಆಗಾಗ್ಗೆ ಇನ್ಸ್ಟಾದಲ್ಲಿ ತನ್ನ ತಂದೆ ಮಹೇಶ್ ಬಾಬು ಅಥವಾ ಇತರ ಚಲನಚಿತ್ರಗಳ ಹಾಡುಗಳಿಗೆ ನೃತ್ಯ ಮಾಡಿದ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಸಿತಾರಾ ಲವ್ ಸ್ಟೋರಿ ಚಿತ್ರದ ‘ಸಾರಂಗದರಿಯಾ’ ಎಂಬ ಸಾಂಗ್​ಗೆ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಇದಲ್ಲದೇ, ಈ ಹಾಡಿನಲ್ಲಿ ಅವರ ಅಭಿನಯದ ಬಗ್ಗೆ ನೆಟಿಜನ್‌ಗಳು ಸಹ ಫಿದಾ ಆಗುತ್ತಿದ್ದಾರೆ.

Tollywood actor Mahesh Babu Daughter: ಮೂಲತಃ ಸಿತಾರ ಆಯ್ಕೆ ಮಾಡಿಕೊಂಡಿದ್ದು ಜಾನಪದ ಗೀತೆ. ಸಿನಿಮಾದಲ್ಲಿ ಸಾಯಿ ಪಲ್ಲವಿ ಮಾಡಿದಂತೆ ಈ ಹಾಡಿಗೆ ಡ್ಯಾನ್ಸ್ ಮಾಡುವುದು ತುಂಬಾ ಕಷ್ಟ. ಆದರೆ, ಇದನ್ನು ಪ್ರಯತ್ನಿಸಿದ ಸಿತಾರಾ.. ವೃತ್ತಿಪರತೆಗಿಂತ ಮೋಹಕವಾಗಿ ಅಭಿನಯಿಸಿದ್ದಾರೆ. ಅಲ್ಲದೇ, ಈ ಹಾಡಿಗೆ ಅವರು ತೊಟ್ಟಿದ್ದ ಲಂಗಾವೋಣಿ ವೇಷಭೂಷಣಗಳು ಪರಿಪೂರ್ಣವಾಗಿದ್ದವು. ಅಲ್ಲದೇ ಬಾಲ್ಯದಿಂದಲೂ ನೃತ್ಯ ಕಲಿಯುತ್ತಿರುವ ಸಿತಾರಾಗೆ ಈ ಸಾರಂಗದಾರಿಯ ಹಾಡನ್ನು ಕಲಿಸಿದ್ದು ಅನಿ ಮೇಷ್ಟ್ರು ಎಂದು ಹೇಳಿಕೊಂಡಿದ್ದಾರೆ. ಇದಲ್ಲದೇ, ಸಿತಾರಾ ಅವರ ಡ್ಯಾನ್ಸ್ ವಿಡಿಯೋ ಕೇವಲ ಒಂದು ಗಂಟೆಯಲ್ಲಿ ಸುಮಾರು ಒಂದು ಲಕ್ಷ ಲೈಕ್‌ಗಳನ್ನು ಪಡೆದುಕೊಂಡಿರುವುದು ಗಮನಾರ್ಹ..

ಸಿತಾರಾಗೆ ಮುಂದೆ ನಾಯಕಿಯಾಗುವ ಅವಕಾಶಗಳು ಸಾಕಷ್ಟಿವೆ. ಈಗಿನಿಂದಲೇ ಆ ನಿಟ್ಟಿನಲ್ಲಿ ತರಬೇತಿಯನ್ನು ತೆಗೆದುಕೊಳ್ಳಲಾಗುತ್ತಿದೆಯಂತೆ. ಇದಲ್ಲದೇ, ಸಿತಾರಾ ಅವರ ತಂದೆ ಮಹೇಶ್ ಬಾಬು ಅಭಿನಯದ ಸರ್ಕಾರಿವಾರಿ ಪಟ ಚಿತ್ರದ ಪೆನ್ನಿ ಹಾಡಿನ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದರು. ತನ್ನ ತಂದೆಯೊಂದಿಗೆ ನೃತ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಿತಾರಾ ತನ್ನ ಸ್ವಾಭಾವಿಕತೆಯಿಂದ ಪ್ರಭಾವಿತರಾದರು.

Guntur Kaaram Cast: ಮಹೇಶ್​ಬಾಬು ಅವರ ಸಿನಿಮಾಗಳ ಬಗ್ಗೆ ಹೇಳುವುದಾದರೆ.. ಗುಂಟೂರು ಕಾರಂ ಸದ್ಯಕ್ಕೆ ತ್ರಿವಿಕ್ರಮ್ ನಿರ್ದೇಶನ ಮಾಡುತ್ತಿದ್ದಾರೆ. ಹರಿಕಾ ಮತ್ತು ಹಾಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿ ಚೈನಾಬಾಬು ನಿರ್ಮಿಸಿದ್ದು, ಪೂಜಾ ಹೆಗಡೆ ಮತ್ತು ಶ್ರೀಲೀಲಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ತಮನ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಜಗಪತಿ ಬಾಬು, ಸುನೀಲ್, ರಮ್ಯಕೃಷ್ಣ, ಪ್ರಕಾಶ್ ರಾಜು, ರಘುಬಾಬು, ಮಹೇಶ್ ಆಚಂತ, ಜಯರಾಂ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

Sitara Brand Ambassador: ಸಿತಾರಾ ಅವರು ಇತ್ತೀಚೆಗೆ ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಪ್ರಸಿದ್ಧ ಪ್ರೀಮಿಯಂ ಆಭರಣ ಬ್ರ್ಯಾಂಡ್‌ಗೆ ರಾಯಭಾರಿಯಾಗಿ ಸಹಿ ಮಾಡಿದ್ದಾರೆ. ಇದು ಅತಿ ದೊಡ್ಡ ಜಾಹೀರಾತು ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ಭಾರತೀಯ ಆರಂಭಿಕ ಸ್ಟಾರ್​ಕಿಡ್​. ಈ ಒಪ್ಪಂದದ ಭಾಗವಾಗಿ ಕಂಪನಿಯಿಂದ ಸಿತಾರಾ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ, ಎಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲ. ಆ್ಯಡ್ ಫಿಲಂ ಕೂಡ ಸುಮಾರು ಮೂರು ದಿನಗಳ ಕಾಲ ರಹಸ್ಯ ಸ್ಥಳದಲ್ಲಿ ಚಿತ್ರೀಕರಣ ನಡೆಸಲಾಗಿದೆ ಎನ್ನಲಾಗಿದೆ.

ಓದಿ:Project K: ಅತೀ ಶೀಘ್ರದಲ್ಲೇ 'ಪ್ರಾಜೆಕ್ಟ್​ ಕೆ'​ಗೆ ಕಮಲ್​ ಹಾಸನ್​ ಎಂಟ್ರಿ; ಶೂಟಿಂಗ್​ ಡೇಟ್​ ಫಿಕ್ಸ್​

ABOUT THE AUTHOR

...view details