ಕರ್ನಾಟಕ

karnataka

ETV Bharat / entertainment

'ಟೈಗರ್​ 3' ಚಿತ್ರದ ಆ್ಯಕ್ಷನ್​ ಸೀನ್​ಗಾಗಿ ನಟಿ ಕತ್ರಿನಾ ಕೈಫ್​ ತಯಾರಿ - ವಿಡಿಯೋ ನೋಡಿ.. - ಈಟಿವಿ ಭಾರತ ಕನ್ನಡ

Tiger 3: 'ಟೈಗರ್​ 3' ಚಿತ್ರಕ್ಕಾಗಿ ನಟಿ ಕತ್ರಿನಾ ಕೈಫ್​ ಹೆಚ್ಚಿನ ತರಬೇತಿ ಪಡೆದಿದ್ದಾರೆ. ಸಾಹಸ ದೃಶ್ಯಕ್ಕಾಗಿ ಸಖತ್​ ವರ್ಕೌಟ್​ ಮಾಡಿದ್ದಾರೆ.

Tiger 3: Katrina Kaif opens up pushing herself for demanding action sequences and challenging towel fight scene
'ಟೈಗರ್​ 3' ಚಿತ್ರದ ಆಕ್ಷನ್​ ಸೀನ್​ಗಾಗಿ ನಟಿ ಕತ್ರಿನಾ ಕೈಫ್​ ತಯಾರಿ - ವಿಡಿಯೋ ನೋಡಿ..

By ETV Bharat Karnataka Team

Published : Nov 6, 2023, 7:07 PM IST

ಈ ವರ್ಷದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ 'ಟೈಗರ್​ 3' ಕೂಡ ಒಂದು. ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್ ನಟನೆಯ ಚಿತ್ರದ ಮೇಲೆ ಕುತೂಹಲ ಹೆಚ್ಚಿದೆ. ಆ್ಯಕ್ಷನ್​ ಪ್ಯಾಕ್ಡ್​ ಸಿನಿಮಾಕ್ಕಾಗಿ ನಟಿ ಕತ್ರಿನಾ ಕೈಫ್​ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರೆ. 'ಟೈಗರ್​ 3'ಗಾಗಿ ಹೆಚ್ಚಿನ ತರಬೇತಿಯನ್ನು ಪಡೆದಿದ್ದಾರೆ. ಸಾಹಸ ದೃಶ್ಯಕ್ಕಾಗಿ ಸಖತ್​ ವರ್ಕೌಟ್​ ಮಾಡಿದ್ದಾರೆ. ಈ ಕುರಿತ ವಿಡಿಯೋವನ್ನು ಕ್ಯಾಟ್​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ​

ಇಂತಹ ಆ್ಯಕ್ಷನ್​ ದೃಶ್ಯಕ್ಕಾಗಿ ಅವರು ಯಾವ ರೀತಿ ತರಬೇತಿ ಪಡೆದಿದ್ದಾರೆ ಎಂಬುದರ ವಿಡಿಯೋ ತುಣುಕನ್ನು ಶೇರ್​ ಮಾಡಿದ್ದಾರೆ. ಅದಕ್ಕೆ, "ನನಗೆ, ಟೈಗರ್​ ಸಮಯ ಬಂದಾಗ, ಅದು ನನ್ನ ಮಿತಿಗಳನ್ನು ತಳ್ಳುವುದು, ನನ್ನ ಸಹಿಷ್ಣುತೆಯನ್ನು ಪರೀಕ್ಷಿಸುವುದು ಮತ್ತು ಶಕ್ತಿಯನ್ನು ಕಂಡುಹಿಡಿಯುವುದು. ಯಾರೋ ಒಮ್ಮೆ ನನಗೆ ಹೇಳಿದರು... ನೋವು ಮತ್ತೊಂದು ಭಾವನೆಯಾಗಿದೆ. ಅದಕ್ಕೆ ಹೆದರಬೇಡ, ನೋವಿನಿಂದ ಓಡಬೇಡ" ಎಂದು ಬರೆದುಕೊಂಡಿದ್ದಾರೆ.

ಕತ್ರಿನಾ ಕೈಫ್​ ತಮ್ಮ ಕಠಿಣ ತರಬೇತಿಯ ಮತ್ತು ವರ್ಕೌಟ್​ಗಳ ಸಮಯದಲ್ಲಿ ಆಯಾಸ ಮತ್ತು ಮಾನಸಿಕ ಅಡೆತಡೆಗಳನ್ನು ತೊಡೆದು ಹಾಕಲು ಏನು ಮಾಡಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. "ಹಲವು ದಿನಗಳು, ನಾನು ತುಂಬಾ ದಣಿದಿದ್ದೆ; ಈ ಬಾರಿ ಅದು ವಿಭಿನ್ನವಾಗಿದೆ .. ಕಠಿಣವಾಗಿದೆ. ನನ್ನ ದೇಹವು ನೋಯುತ್ತಿತ್ತು. ಆದರೆ, ನಾನು ಅದನ್ನು ಸವಾಲಾಗಿ ತೆಗೆದುಕೊಂಡು ಇಂದು ಅದೆಲ್ಲವನ್ನೂ ಎದುರಿಸಿದ್ದೇನೆ. ತರಬೇತಿ ಸಮಯದಲ್ಲಿ ಒಂದು ದೃಢತೆಯನ್ನು ಬೆಳೆಸಿಕೊಂಡೆ. ಹಾಗಾಗಿ ನಾನು ದಣಿದಿದ್ದರೂ, ಅವಳು ಸುಸ್ತಾಗಿರಲಿಲ್ಲ. ಅವಳು ಯುದ್ಧಕ್ಕೆ ಹೋಗುತ್ತಿದ್ದಳು" ಎಂದು ಅನುಭವ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಟೈಗರ್​ ಈಸ್​​ ಬ್ಯಾಕ್​: ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ ಸಲ್ಲು ಕ್ಯಾಟ್​ ಸಿನಿಮಾದ ಹೊಸ ವಿಡಿಯೋ

"ಒಮ್ಮೆ ನೀವು ನಿರ್ಧರಿಸಿ, ಅದಕ್ಕೆ ಬದ್ಧರಾಗಿ ಮತ್ತು ಮಾಡಿ ತೋರಿಸಿ. ಅದು ಏನೇ ಆಗಿರಲಿ!. ಆ ಕೆಲಸ ಎಂದಿಗೂ ಯೋಗ್ಯವಾಗಿರುತ್ತದೆ. ನಾನು ಮೊದಲಿಗಿಂತ ಹೆಚ್ಚು ಕ್ರೀಯಾತ್ಮಳಾದೆ. ಅದು ಯಾವಾಗಲೂ ನಮ್ಮ ಉದ್ದೇಶವೂ ಆಗಿರುತ್ತದೆ. ಈಗ ಜಗತ್ತಿನೊಂದಿಗೆ ಟೈಗರ್​ 3 ಹಂಚಿಕೊಳ್ಳಲು ಕಾಯುತ್ತಿದ್ದೇನೆ. ಆತಂಕ ಮತ್ತು ಉತ್ಸುಕಳಾಗಿದ್ದೇನೆ. ಇನ್ನೇನು ಕೆಲವೇ ದಿನ..." ಎಂದು ವಿಡಿಯೋಗೆ ಕ್ಯಾಪ್ಶನ್​ ನೀಡಿದ್ದಾರೆ. ​

ಮನೀಶ್ ಶರ್ಮಾ ನಿರ್ದೇಶನದ 'ಟೈಗರ್ 3' ಅನ್ನು ಯಶ್ ರಾಜ್ ಫಿಲ್ಮ್ಸ್ ಮೂಲಕ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್ ಮತ್ತು ಪಠಾಣ್​​ ಬಳಿಕ ಬಿಡುಗಡೆ ಆಗುತ್ತಿರುವ ಯಶ್​ ರಾಜ್​ ಫಿಲ್ಮ್ಸ್​ ನಿರ್ಮಾಣದ ಸ್ಪೈ ಯೂನಿವರ್ಸ್‌ನಲ್ಲಿ 5ನೇ ಚಿತ್ರ ಇದು. 'ಪಠಾಣ್​' ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ಸಲ್ಮಾನ್​ ಖಾನ್​ ಅತಿಥಿ ಪಾತ್ರ ಮಾಡಿದ್ದರು. ಇದೀಗ ಟೈಗರ್​ 3ನಲ್ಲಿ ಕಿಂಗ್​ ಖಾನ್​ ಎಂಟ್ರಿಯೂ ಇರಲಿದೆ. ಚಿತ್ರದಲ್ಲಿ ಇಮ್ರಾನ್​ ಹಶ್ಮಿ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:'ಟೈಗರ್​ 3' ಮುಂಗಡ ಬುಕ್ಕಿಂಗ್​ನಲ್ಲಿ ದಾಖಲೆ; ಸಿನಿಮಾ ಟಿಕೆಟ್​ ಶರವೇಗದಲ್ಲಿ ಮಾರಾಟ

ABOUT THE AUTHOR

...view details