ಕರ್ನಾಟಕ

karnataka

ETV Bharat / entertainment

ಮೈಸೂರು ಸೆಲೆಬ್ರಿಟಿ ಮ್ಯೂಸಿಯಂನಲ್ಲಿ ಇರಿಸಿದ್ದ ನಟ ಪ್ರಭಾಸ್ ಹೋಲುವ​ ಮೇಣದ ಪ್ರತಿಮೆ ತೆರವು - ಈಟಿವಿ ಭಾರತ ಕನ್ನಡ

ಮೈಸೂರಿನ ಮ್ಯೂಸಿಯಂನಲ್ಲಿ ಇರಿಸಲಾಗಿದ್ದ ನಟ ಪ್ರಭಾಸ್​ ಹೋಲುವ ಮೇಣದ ಪ್ರತಿಮೆಯನ್ನು ಸೋಮವಾರ ತೆರವುಗೊಳಿಸಲಾಗಿದೆ.

The wax statue of actor Prabhas
The wax statue of actor Prabhas

By ETV Bharat Karnataka Team

Published : Sep 26, 2023, 10:38 PM IST

Updated : Sep 26, 2023, 11:00 PM IST

ಮೈಸೂರು: ನಗರದ ಮ್ಯೂಸಿಯಂನಲ್ಲಿ ನಟ ಪ್ರಭಾಸ್ ಹೋಲುವ ಮೇಣದ ಪ್ರತಿಮೆಯನ್ನು ಇರಿಸಲಾಗಿತ್ತು. ಇದೀಗ 'ಬಾಹುಬಲಿ' ಸಿನಿಮಾ ನಿರ್ಮಾಪಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮ್ಯೂಸಿಯಂನಲ್ಲಿ ಇಡಲಾಗಿದ್ದ ಪ್ರಭಾಸ್​ ಹೋಲುವ ಆ ಮೇಣದ ಪ್ರತಿಮೆಯನ್ನು ಸೋಮವಾರ ತೆರವುಗೊಳಿಸಲಾಗಿದೆ.

ಮೈಸೂರಿನ ಚಾಮುಂಡಿ ಬೆಟ್ಟದ ಕೆಳಭಾಗದಲ್ಲಿರುವ ಮ್ಯೂಸಿಯಂನಲ್ಲಿ ನಟ ಪ್ರಭಾಸ್ ಅವರನ್ನು ಹೋಲುವ ಮೇಣದ ಪ್ರತಿಮೆಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇತ್ತೀಚೆಗೆ ಈ ಮ್ಯೂಸಿಯಂಗೆ ಅನೇಕರು ಭೇಟಿ ನೀಡಿದ್ದಾರೆ. ಅವರಲ್ಲಿ ಪ್ರವಾಸಿಗರೊಬ್ಬರು ಈ ಮೇಣದ ಪ್ರತಿಮೆಯ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದನ್ನು ಗಮನಿಸಿದ 'ಬಾಹುಬಲಿ' ನಿರ್ಮಾಪಕ ಶೋಬು ಯಾರ್ಲಗಡ್ಡ, ಈ ಪ್ರತಿಮೆ ನುರಿತ ಕಲಾವಿದರು ಮಾಡಿದಂತಿಲ್ಲ. ಜೊತೆಗೆ ಇದನ್ನು ಪ್ರದರ್ಶಿಸಲು ಅನುಮತಿ ಪಡೆದಿಲ್ಲ ಎಂದು ಮ್ಯೂಸಿಯಂಗೆ ಕರೆಮಾಡಿ ಪ್ರಭಾಸ್​ ಹೋಲುವ ಮೇಣದ ಪ್ರತಿಮೆಯನ್ನು ತೆರವುಗೊಳಿಸುವಂತೆ ಕೇಳಿಕೊಂಡಿದ್ದರು. ಅದರಂತೆ, ಸೋಮವಾರ ಆ ಪ್ರತಿಮೆ ತೆರವುಗೊಳಿಸಿದ್ದೇವೆ ಎಂದು ಮ್ಯೂಸಿಯಂನ ಸಿಬ್ಬಂದಿ ಭಾಸ್ಕರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ:ಶಾರುಖ್​ ಖಾನ್​ 'ಡಂಕಿ'- ಪ್ರಭಾಸ್​ 'ಸಲಾರ್​' ಥಿಯೇಟರ್​ನಲ್ಲಿ ಮುಖಾಮುಖಿಯಾಗೋದು ಡೌಟ್​!

2015ರಲ್ಲಿ ಬಿಡುಗಡೆಯಾಗಿ ಚಿತ್ರಮಂದಿರದಲ್ಲಿ ಧೂಳೆಬ್ಬಿಸಿರುವ 'ಬಾಹುಬಲಿ : ದಿ ಬಿಗಿನಿಂಗ್' ಸಿನಿಮಾ ಸೌತ್ ಸೂಪರ್​ ಸ್ಟಾರ್ ಪ್ರಭಾಸ್ ಅವರ ವೃತ್ತಿಜೀವನದ ಪಥವನ್ನೇ ಬದಲಾಯಿಸಿತು. ಎಸ್​​ಎಸ್​ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ಭಾರತದಲ್ಲಿ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯಿತು. ಎರಡು ವರ್ಷಗಳ ನಂತರ ಬಂದ ಬಾಹುಬಲಿ 2 ಪ್ಯಾನ್ ಇಂಡಿಯಾ ತಾರೆಯಾಗಿ ಪ್ರಭಾಸ್​ ಅವರ ಸ್ಥಾನವನ್ನು ಭದ್ರಪಡಿಸಿತು.

ನಿರ್ದೇಶಕ ರಾಜಮೌಳಿ ಅವರು ಈ ಮೂಲಕ ತಮ್ಮದೇ ಆದ ದಾಖಲೆಗಳನ್ನು ಮುರಿದರು. ಈ ಚಿತ್ರವು ಪ್ರಪಂಚದಾದ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ವಿಶೇಷವಾಗಿ ಜಪಾನ್ ಮತ್ತು ಚೀನಾದಲ್ಲಿ ಜನಪ್ರಿಯತೆಯನ್ನು ಗಳಿಸಿತು. ಈ ಚಿತ್ರವು ಕಾಲ್ಪನಿಕ ಸಾಮ್ರಾಜ್ಯವಾದ ಮಾಹಿಷ್ಮತಿಯ ಸಿಂಹಾಸನಕ್ಕಾಗಿ ಇಬ್ಬರು ಸೋದರ ಸಂಬಂಧಿಗಳ ನಡುವಿನ ಪೈಪೋಟಿಯ ಬಗ್ಗೆ ತಿಳಿಸುವ ಚಿತ್ರವಾಗಿದೆ.

ಇನ್ನು ಪ್ರಭಾಸ್​ ಅವರ ಮುಂಬರುವ ಚಿತ್ರಗಳ ಬಗ್ಗೆ ನೋಡುವುದಾದರೆ,​ ಸಲಾರ್​ ಸಿನಿಮಾ ಸಲುವಾಗಿ ಅವರು ಸುದ್ದಿಯಲ್ಲಿದ್ದಾರೆ. ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​​ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದಾದ ಬಳಿಕ ಕಲ್ಕಿ 2898 ಎಡಿ ಸಿನಿಮಾ ಇವರ ಕೈಯಲ್ಲಿದೆ. ಬಿಗ್​ ಸ್ಟಾರ್ ಕಾಸ್ಟ್ ಹೊಂದಿರುವ ಈ ಚಿತ್ರ ಬಿಗ್​ ಬಜೆಟ್​ನಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ಎರಡೂ ಚಿತ್ರಗಳು ಮುಂದಿನ ವರ್ಷ ಬಿಡುಗಡೆಯಾಗಲಿವೆ.

ಇದನ್ನೂ ಓದಿ:'ಆ ಸೂಪರ್​ ಸ್ಟಾರ್ ನಟಿಯೊಂದಿಗೆ ಅಭಿನಯಿಸುವ ಕನಸು ಈಡೇರಿತು': ಡಾರ್ಲಿಂಗ್​ ಪ್ರಭಾಸ್

Last Updated : Sep 26, 2023, 11:00 PM IST

ABOUT THE AUTHOR

...view details