ಕನ್ನಡದ ಜನಪ್ರಿಯ ರಿಯಾಲಿಟಿ ಶೋ ''ಬಿಗ್ ಬಾಸ್ ಸೀಸನ್ 10'' ಉತ್ತಮ ವೀಕ್ಷಣೆ ಪಡೆದುಕೊಳ್ಳುತ್ತಿದೆ. ದಿನಕ್ಕೊಂದು ಟ್ವಿಸ್ಟ್, ಹೊಸ ಕಥೆ, ಪ್ರೀತಿ ಸ್ನೇಹ, ಮನಸ್ತಾಪ ಜೊತೆಗೆ ಸಿಕ್ಕಾಪಟ್ಟೆ ಮನರಂಜನೆ ಹೀಗೆ ನಾನಾ ವಿಷಯಗಳ ಸಲುವಾಗಿ ಬಿಗ್ ಬಾಸ್ ಸಖತ್ ಸದ್ದು ಮಾಡುತ್ತಿದೆ.
'ವಾರದ ಕಥೆ ಕಿಚ್ಚನ ಜೊತೆ'... ಕನ್ನಡ ಬಿಗ್ ಬಾಸ್ ಸೀಸನ್ 10ರ ನಾಲ್ಕನೇ ವಾರವೂ ಪೂರ್ಣಗೊಂಡಿದೆ. ಶನಿವಾರ ವೀಕೆಂಡ್ ಎಪಿಸೋಡ್ ಕೂಡ ಪ್ರಸಾರವಾಗಿದೆ. ಭಾನುವಾರದ ಸಂಚಿಕೆಗೆ ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ. ಮನೆಯಿಂದ ಯಾರು ಹೊರ ಹೋಗುತ್ತಾರೆಂಬುದು ಕಿಚ್ಚನ ಸೂಪರ್ ಸಂಡೆಯಲ್ಲಿ ಗೊತ್ತಾಗಲಿದೆ. 'ವಾರದ ಕಥೆ ಕಿಚ್ಚನ ಜೊತೆ' ಎಪಿಸೋಡ್ನಲ್ಲಿ ಕಿಚ್ಚನ ಕಿಚ್ಚು ಜೋರಾಗಿದೆ. ಯಾಕೆ ಅಂತೀರಾ?. ವರ್ತೂರು ಸಂತೋಷ್ ಅವರು ಸೇಫ್ ಆದ್ರೂ ಕೂಡ ಮನೆಯಿಂದ ಹೊರ ನಡೆಯುತ್ತೇನೆ ಎಂದು ತಿಳಿಸಿದ್ದು ಕಿಚ್ಚನಿಗೆ ಹಿಡಿಸಿಲ್ಲ.
ಸುದೀಪ್ ಬೇಸರ..ಹೌದು, 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಎಲಿಮಿನೇಷನ್ ಕೂಡ ನಡೆಯುತ್ತೆ. ಮನೆಯಿಂದ ಓರ್ವ ಸ್ಪರ್ಧಿ ಹೊರ ನಡೆಯುತ್ತಾರೆ. ಅದು ಯಾರು? ಎಂದು ತಿಳಿದುಕೊಳ್ಳಲು ಮನೆಯ ಸ್ಪರ್ಧಿಗಳ ಜೊತೆ ಪ್ರೇಕ್ಷಕರು ಕೂಡ ಕಾತರರಾಗಿರುತ್ತಾರೆ. ಎಲಿಮಿನೇಷನ್ಗೂ ಮುನ್ನ ಸೇಫ್ ಆದ ಸ್ಪರ್ಧಿಗಳ ಹೆಸರು ಬರುತ್ತದೆ. ಆ ಪ್ರಕಾರ ನಿರೂಪಕ ಸುದೀಪ್, ವರ್ತೂರು ಸಂತೋಷ್ ಹೆಸರನ್ನು ತೆಗೆದುಕೊಂಡಿದ್ದಾರೆ. ಆದ್ರೆ ನಾನು ಮನೆಯಿಂದ ಹೊರ ಹೋಗುತ್ತೇನೆಂದು ಸೇಫ್ ಆದ ವರ್ತೂರು ಸಂತೋಷ್ ಕಣ್ಣೀರಿಟ್ಟಿದ್ದಾರೆ. ಸೇಫ್ ಆದ್ರೂ ಕೂಡ ಹೊರ ಹೋಗುವ ವರ್ತೂರು ಸಂತೋಷ್ ನಿರ್ಧಾರ ಕೇಳಿ ಮನೆ ಮಂದಿಗೆ ಶಾಕ್ ಆಗಿದೆ. ನಟ ಸುದೀಪ್ ಕೂಡ ಅಸಮಾಧಾನಗೊಂಡಿದ್ದಾರೆ.