ಕರ್ನಾಟಕ

karnataka

ETV Bharat / entertainment

ಗಂಡು ಮಗುವಿಗೆ ಜನ್ಮ ನೀಡಿದ ಸೋನಂ.. ಅಜ್ಜನಾದ ಖುಷಿಯಲ್ಲಿ ಅನಿಲ್ ಕಪೂರ್​

ಬಾಲಿವುಡ್ ನಟಿ ಸೋನಂ ಕಪೂರ್ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಇನ್​​​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Etv Bharat
Etv Bharat

By

Published : Aug 20, 2022, 6:22 PM IST

ಉದ್ಯಮಿ ಆನಂದ್ ಅಹುಜಾ ಜೊತೆ 2018ರಲ್ಲಿ ಸಪ್ತಪದಿ ತುಳಿದಿದ್ದ ಬಾಲಿವುಡ್ ಬೆಡಗಿ, ಅನಿಲ್ ಕಪೂರ್ ಮಗಳು ಸೋನಂ ಕಪೂರ್​ ಇಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷದ ವಿಷಯವನ್ನು ಇನ್​ಸ್ಟಾಗ್ರಾಮ್​ ಮೂಲಕ ಬಹಿರಂಗಪಡಿಸಿದ್ದಾರೆ. ಸೋನಂ ಕಪೂರ್ ಅವರ ತಾಯಿ ಸುನೀತಾ ಕಪೂರ್ ಅವರು ಸಹ ಈ ವಿಷಯ ಹಂಚಿಕೊಂಡಿದ್ದಾರೆ.

20.08.2022 ರಂದು, ನಾವು ನಮ್ಮ ಸುಂದರ ಗಂಡು ಮಗುವನ್ನು ತಲೆಬಾಗಿ ಮತ್ತು ಹೃದಯದಿಂದ ಸ್ವಾಗತಿಸಿದ್ದೇವೆ. ಬೆಂಬಲ ನೀಡಿದ ಎಲ್ಲ ವೈದ್ಯರು, ದಾದಿಯರು, ಸ್ನೇಹಿತರು ಮತ್ತು ಕುಟುಂಬಕ್ಕೆ ಧನ್ಯವಾದಗಳು.ಇದರಿಂದ ನಮ್ಮ ಜೀವನವು ಶಾಶ್ವತವಾಗಿ ಬದಲಾಗಿದೆ ಎಂದು ಸೋನಂ ಕಪೂರ್​​ ಬರೆದುಕೊಂಡಿದ್ದಾರೆ.

ಮಾಹಿತಿ ಹಂಚಿಕೊಂಡ ಸೋನಂ ಕಪೂರ್​​

ಅಜ್ಜನ ಸಂಭ್ರಮ:ಮಗಳು ಮುದ್ದಾದ ಮಗುವಿಗೆ ಜನ್ಮ ನೀಡಿರುವ ವಿಷಯ ಗೊತ್ತಾಗುತ್ತಿದ್ದ ನಟ ಅನಿಲ್ ಕಪೂರ್​ ಸಂಭ್ರಮಿಸಿದ್ದು,ನಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಇದರಿಂದ ಸಂತೋಷವಾಗಿದೆ ಎಂದಿದ್ದಾರೆ. ಸೋನಂ ಮತ್ತು ಆನಂದ್ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಇನ್​​​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:Pool ready...ಬೇಬಿ ಬಂಪ್ ಫೋಟೋ ಹಂಚಿಕೊಂಡ ನಟಿ ಸೋನಂ ಕಪೂರ್

2018ರ ಮೇ, 8ರಂದು ಸೋನಂ ಕಪೂರ್​​ ಹಾಗೂ ಅನಂದ್ ಅಹುಜಾ ಮುಂಬೈನಲ್ಲಿ ವಿವಾಹವಾಗಿದ್ದರು. ಇದಕ್ಕೂ ಮೊದಲು ಈ ಜೋಡಿ ಎರಡು ವರ್ಷಗಳ ಡೇಟಿಂಗ್ ನಡೆಸಿದ್ದರು.ಇದಾದ ಬಳಿಕ ಗರ್ಭಾವಸ್ಥೆಯ ಕೆಲವೊಂದು ಫೋಟೋಗಳನ್ನ ನಟಿ ಸೋನಂ ಕಪೂರ್​ ಹಂಚಿಕೊಂಡಿದ್ದರು.

ABOUT THE AUTHOR

...view details