ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ ಸೈರನ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಸದ್ಯ ಟೀಸರ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಕುತೂಹಲ ಹುಟ್ಟಿಸಿರೋ ಸೈರನ್ ಸಿನಿಮಾ ಪ್ರವೀರ್ ಶೆಟ್ಟಿ ಅವರಿಗೆ ಯಶಸ್ಸು ತಂದುಕೊಡುವ ಸೂಚನೆ ಕೊಟ್ಟಿದೆ. ಇದೀಗ ತೆಲುಗು ಹಾಗು ಕನ್ನಡದ ಸೆನ್ಸೇಷನಲ್ ಸಿಂಗರ್ ಮಂಗ್ಲಿ ಸೈರನ್ ಚಿತ್ರದ ಸ್ಪೆಷಲ್ ಹಾಡಿಗೆ ಧ್ವನಿ ಕೊಟ್ಟಿದ್ದಾರೆ.
ಗಾಯಕಿ ಮಂಗ್ಲಿ ಹಾಡು:ಗೀತ ರಚನೆಕಾರ ಚಿನ್ಮಯ್ ಬಾವಿಕೆರೆ ಬರೆದಿರುವ 'ಎಣ್ಣೆ ಹೊಡೆಯೋ ಟೈಮಲ್ಲಿ ನನ್ನ ಸ್ವಲ್ಪ ನೆನಪಿಸಿಕೊಳ್ಳಿ' ಎಂಬ ಹಾಡನ್ನು ಗಾಯಕಿ ಮಂಗ್ಲಿ ಹಾಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋ ಜನವರಿ 24ರಂದು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆ ಆಗಲಿದೆ. ಭಾರದ್ವಾಜ್ ಸಂಗೀತ ನೀಡಿದ್ದಾರೆ.
ಸೈರನ್ ಸಿನಿಮಾ: ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧರಿಸಿರೋ ಸೈರನ್ ಚಿತ್ರದಲ್ಲಿ ಪ್ರವೀರ್ ಶೆಟ್ಟಿ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರವೀರ್ ಶೆಟ್ಟಿ ಜೋಡಿಯಾಗಿ ಲಾಸ್ಯ ಸ್ಕ್ರೀನ್ ಶೇರ್ ಮಾಡಿದ್ದಾರೆ. ಪ್ರವೀರ್ ಶೆಟ್ಟಿ ಹಾಗು ಲಾಸ್ಯ ಅಲ್ಲದೇ ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್, ಸ್ಪರ್ಶ ರೇಖ, ಸಾಯಿ ಧೀನ ಸೇರದಂತೆ ಮುಂತಾದವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಸೈರನ್ ಚಿತ್ರತಂಡ: ಸೈರನ್ ಚಿತ್ರಕ್ಕೆ ರಾಜ ವೆಂಕಯ್ಯ ಅವರ ನಿರ್ದೇಶನ ಇದ್ದು, ನಾಗೇಶ್ ವಿ ಆಚಾರ್ಯ ಛಾಯಾಗ್ರಹಣ, ವಾಲಿ ಕುಲೇಸ್ ಸಂಕಲನ, ಚಂದ್ರು ಬಂಡೆ, ನರಸಿಂಹ ಸಾಹಸ ನಿರ್ದೇಶನ ಹಾಗೂ ಕಲೈ ಅವರ ನೃತ್ಯ ನಿರ್ದೇಶನ ಇದೆ. ಸೈರನ್ ಚಿತ್ರದ ಸಹ ನಿರ್ಮಾಪಕರು ಜುನಿ ಜೋಸೆಫ್ ಮತ್ತು ಕೆ. ರಮೇಶ್. ಡೆಕ್ಕನ್ ಕಿಂಗ್ ಮೂವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿಜು ಶಿವಾನಂದ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.