ಪಠಾಣ್ ಬಾಲಿವುಡ್ನ ಬಹು ನೀರೀಕ್ಷಿತ ಚಿತ್ರ. ಕಳೆದ ಸೋಮವಾರ ಬೇಶರಂ ರಂಗ್ ಹಾಡು ಬಿಡುಗಡೆ ಆಗಿ ವಿವಾದಕ್ಕೆ ಗುರಿಯಾಗಿತ್ತು. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಮೈ ಚಳಿ ಬಿಟ್ಟು ಕುಣಿದಿದ್ದರೆ, ಶಾರುಖ್ ಖಾನ್ ಸಿಕ್ಸ್ ಪ್ಯಾಕ್ನಲ್ಲಿ ಸಖತ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕಂಪ್ಲೀಟ್ ಸಾಂಗ್ ಸಖತ್ ಹಾಟ್ ಆಗಿ ಮೂಡಿಬಂದಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಈ ಬಹು ನಿರೀಕ್ಷಿತ ಚಿತ್ರ 'ಪಠಾಣ್'ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರ ಮುಂದಿನ ವರ್ಷ ಜನವರಿ 25ರಂದು ಬಿಡುಗಡೆ ಆಗಲಿದೆ. ಚಿತ್ರದ ಟೀಸರ್, ಹಲವು ಪೋಸ್ಟರ್, ಹಾಡು ರಿಲೀಸ್ ಆಗಿದೆ. ಅದರಲ್ಲೂ ಶಾರುಖ್ ಖಾನ್ ನಾಲ್ಕು ವರ್ಷಗಳ ನಂತರ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ 'ಬೇಷರಂ ರಂಗ್' ಹಾಡಿನಲ್ಲಿ ಶಾರುಖ್ ಖಾನ್ ದೇಹ ಹುರಿಗೊಳಿಸಿದ್ದನ್ನು ಕಾಣಬಹುದು. 'ಪಠಾಣ್' ಚಿತ್ರಕ್ಕಾಗಿ ಶಾರುಖ್ ತಮ್ಮ ದೇಹವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಮತ್ತು ಫಿಟ್ ಆಗಿರಲು ಬಟ್ಟೆ ಒಗೆದು, ಪಾತ್ರೆಗಳನ್ನು ತೊಳೆದಿದ್ದಾರೆ ಎಂದು ಈಗ ವರದಿಯಾಗಿದೆ.