ಕರ್ನಾಟಕ

karnataka

ETV Bharat / entertainment

ಮಾನ್ಯತಾ ದತ್ ಹುಟ್ಟುಹಬ್ಬ: ಪತ್ನಿಗೆ ಹೃದಯದಾಳದಿಂದ ಶುಭಾಶಯ ಕೋರಿದ ನಟ ಸಂಜಯ್​ ದತ್​ - ಪತ್ನಿಗೆ ಸಂಜಯ್​ ದತ್​ ವಿಶ್

ಬಾಲಿವುಡ್ ನಟ ಸಂಜಯ್​ ದತ್​ ಅವರ ಪತ್ನಿ ಮಾನ್ಯತಾ ದತ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪತ್ನಿಗೆ ಹೃದಯದಾಳದಿಂದ ಶುಭಾಶಯಗಳನ್ನು ನಟ ತಿಳಿಸಿದ್ದಾರೆ.

Maanayata
ಮಾನ್ಯತಾ ದತ್ ಹುಟ್ಟುಹಬ್ಬ

By

Published : Jul 22, 2023, 5:31 PM IST

ಬಾಲಿವುಡ್ ನಟ ಸಂಜಯ್​ ದತ್​ ಅವರಿಗೆ ಇಂದು ಬಹಳ ವಿಶೇಷವಾದ ದಿನ. ಅವರ ಸುಂದರ ಪತ್ನಿ ಮಾನ್ಯತಾ ದತ್​ ಇಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಾನ್ಯತಾ ಅವರು 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಮಾನ್ಯತಾ ದತ್​ ತಮ್ಮಿಬ್ಬರು ಮಕ್ಕಳೊಂದಿಗೆ ದೇಶದ ಹೊರಗೆ ಬರ್ತ್​ಡೇ ಸೆಲೆಬ್ರೇಟ್​ ಮಾಡುತ್ತಿದ್ದಾರೆ.​ ಹುಟ್ಟುಹಬ್ಬದ ಫೋಟೋಗಳನ್ನು ಅವರು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಾನ್ಯತಾ ದತ್ ಹುಟ್ಟುಹಬ್ಬ

ಫೋಟೋಗಳಲ್ಲಿ ಮಾನ್ಯತಾ ತಮ್ಮ ಇಬ್ಬರು ಮಕ್ಕಳೊಂದಿಗೆ ಕೇಕ್​ ಕತ್ತರಿಸುತ್ತಿದ್ದಾರೆ. ಹೊರಗಡೆ ಸುತ್ತಾಡುತ್ತಾ ಎಂಜಾಯ್​ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಮಾನ್ಯತಾ ತಮ್ಮ ಪ್ರೀತಿಯ ಪತಿಯನ್ನು ತುಂಬಾ ಮಿಸ್​ ಮಾಡಿಕೊಂಡಿದ್ದಾರೆ. ಅವರು ಫೋಟೋವನ್ನು ಹಂಚಿಕೊಂಡು, ತಾವು ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಸಂಜಯ್​ ದತ್​ ಕೂಡ ಪತ್ನಿಯ ಹುಟ್ಟುಹಬ್ಬಕ್ಕೆ ಪ್ರೀತಿಯ ಸುರಿಮಳೆಯನ್ನೇ ಹರಿಸಿದ್ದಾರೆ. ಹೃದಯದಾಳದಿಂದ ಪತ್ನಿಯ ಹೆಸರಿನಲ್ಲಿ ಬರ್ತ್​ಡೇ ಶುಭಾಶಯದ ಪೋಸ್ಟ್​ ಮಾಡಿದ್ದಾರೆ.

ಪತ್ನಿಗೆ ಸಂಜಯ್​ ದತ್​ ವಿಶ್​...ತಮ್ಮ ಪತ್ನಿಗೆ ಜನ್ಮದಿನದ ಶುಭಾಶಯ ಕೋರಿರುವ ಸಂಜಯ್​ ದತ್​, "ಪ್ರೀತಿಯ ಮಾ, ನಿಮಗೆ ಜನ್ಮದಿನದ ಶುಭಾಶಯಗಳು. ದೇವರು ಯಾವಾಗಲೂ ನಿಮಗೆ ಸಂತೋಷ, ಯಶಸ್ಸು ಮತ್ತು ಶಾಂತಿಯನ್ನು ನೀಡಲಿ. ನನ್ನ ಜೀವನದಲ್ಲಿ ಬೆಂಬಲ ಮತ್ತು ಶಕ್ತಿಯಾಗಿದ್ದಕ್ಕಾಗಿ ಧನ್ಯವಾದಗಳು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಇಬ್ಬರು ಸುಂದರ ಮಕ್ಕಳಿಗಾಗಿ ಧನ್ಯವಾದಗಳು. ನೀವು ನನ್ನ ಜೀವನದಲ್ಲಿ ಬಂಡೆಯಂತೆ ನಿಂತಿದ್ದೀರಿ. ನಾನು ಬಿದ್ದಾಗಲೆಲ್ಲಾ ನೀವು ನನ್ನನ್ನು ಎತ್ತಿ ಮುಂದೆ ಸಾಗಿಸಿದ್ದಿರಿ. ನನ್ನ ಜೀವನದಲ್ಲಿ ನಿಮ್ಮನ್ನು ಹೆಂಡತಿಯಾಗಿ ಪಡೆಯಲು ಅದೃಷ್ಟಶಾಲಿಯಾಗಿದ್ದೇನೆ. ಅದಕ್ಕಾಗಿ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ. ನಿಮಗೆ ಜನ್ಮದಿನದ ಶುಭಾಶಯಗಳು. ನಾನು ನಿಮ್ಮನ್ನು ನನ್ನ ಜೀವನದಲ್ಲಿ ಹೆಚ್ಚು ಪ್ರೀತಿಸುತ್ತೇನೆ ಮಾನ್ಯತಾ" ಎಂದು ಶುಭಾಶಯ ಕೋರಿದ್ದಾರೆ.

ಮಾನ್ಯತಾ ದತ್ ಹುಟ್ಟುಹಬ್ಬ

ಸ್ಯಾಂಡಲ್​ವುಡ್​ಗೆ ಸಂಜಯ್​ ದತ್​: ಸಂಜಯ್​ ದತ್​ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ವಿಚಾರ ಈಗಾಗಲೇ ಗೊತ್ತಿದೆ. ಧ್ರುವ ಸರ್ಜಾ ಮತ್ತು ಪ್ರೇಮ್​​ ಕಾಂಬಿನೇಶನ್​ನಲ್ಲಿ ಮೂಡಿ ಬರಲಿರುವ 'ಕೆಡಿ' (KD) ಸಿನಿಮಾ ಮೇಕಿಂಗ್​ ಮತ್ತು ಟೈಟಲ್​ನಿಂದಲೇ ಗಮನ ಸೆಳೆದಿದೆ. ಈ ಚಿತ್ರದಲ್ಲೇ ಬಾಲಿವುಡ್​ ಖಳ ನಾಯಕ ಸಂಜಯ್​ ದತ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬರುವ ಕಥೆ ಯಾವ ಕಾಲಘಟ್ಟದ್ದು ಅನ್ನೋ ಕುತೂಹಲ ಪ್ರೇಕ್ಷಕರಿಗಿದೆ. ಅದರ ಬಗ್ಗೆ ಹೇಳೋದಾದ್ರೆ, ಇಡೀ ಸಿನಿಮಾ ರೆಟ್ರೋ ಕಾಲಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ. 1968 ರಿಂದ 1978 ಕಾಲಘಟ್ಟದಲ್ಲಿಯೇ ಸಿನಿಮಾದ ಕಥೆ ನಡೆಯುತ್ತದೆ.

ಏಕ್ ಲವ್ ಯಾ ಮತ್ತು ಬಾನದಾರಿಯಲ್ಲಿ ಸಿನಿಮಾದ ಮೂಲಕ ಗಮನ ಸೆಳೆದಿರುವ ರೀಷ್ಮಾ ನಾಣಯ್ಯ ಕೆಡಿ ಸಿನಿಮಾಗೆ ಹೀರೋಯಿನ್​ ಆಗಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮರಾ ವರ್ಕ್ ಮಾಡಲಿದ್ದು, ಕೆ.ವಿ ಎನ್‌ ಪ್ರೊಡಕ್ಷನ್ ಸಂಸ್ಥೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹು ಕೋಟಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ:'ರಾಮನ ಅವತಾರ'ದಲ್ಲಿ ರಿಷಿ... ಸೆಕೆಂಡ್​ ಇನ್ನಿಂಗ್ಸ್ ಶುರು ಮಾಡಿದ ಪ್ರಣಿತಾ ಸುಭಾಷ್

ABOUT THE AUTHOR

...view details