ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುರಿತಾಗಿ ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಬರ್ತಾ ಇದೆ. ತೆಲುಗು ನಟ ಅಡಿವಿ ಶೇಷ್ ಸಂದೀಪ್ ಉನ್ನಿಕೃಷ್ಣನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿರುವ ತೆಲುಗು ನಟ ಅಡಿವಿ ಶೇಷ್ ಈ ಚಿತ್ರದ ಹಲವಾರು ಇಂಟ್ರಸ್ಟ್ರಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ಸಿನಿಮಾ ಮಾಡುವುದಕ್ಕೆ ಕಾರಣ ಏನು ಎಂದು ಕೇಳಿದರೆ, ಸಂದೀಪ್ ಉನ್ನಿಕೃಷ್ಣನ್ ಅವರೇ ಸಿನಿಮಾಕ್ಕೆ ಪ್ರೇರಣೆ ಎನ್ನುತ್ತಾರೆ. ಪುನೀತ್ ಅವರಿಗೆ ಫ್ಯಾನ್ಸ್ ಹೇಗಿದ್ದಾರೋ ಹಾಗೆ ನಾನು ಸಂದೀಪ್ ಅವರ ಫ್ಯಾನ್. 31ನೇ ವರ್ಷಕ್ಕೆ ಉನ್ನಿಕೃಷ್ಣನ್ ಜೀವನದಲ್ಲಿ ಮಾಡಿರೋ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿ ಎಂದು ಅಡಿವಿ ಶೇಷ್ ಹೇಳುತ್ತಾರೆ.
ನಾನು ಮಹೇಶ್ ಬಾಬು ಅವರ ಬಳಿ ಸಿನಿಮಾದ ಬಗ್ಗೆ ಹೇಳಿಕೊಂಡಾಗ ಅವರು ಮೊದಲಿಗೆ ಥ್ರಿಲ್ ಆದರು. ನಂತರ ಇದರ ನಿರ್ಮಾಣದ ಜವಾಬ್ದಾರಿಯನ್ನು ಒಪ್ಪಿಕೊಂಡರು. ಅವರು ನನ್ನ ಸಿನಿಮಾಗಳ ಪ್ರಾಮಾಣಿಕವಾಗಿ ವಿಮರ್ಶಕರು ಹಾಗಾಗಿ ಅವರ ಅಭಿಪ್ರಾಯ ನನಗೆ ತುಂಬಾ ಸಹಾಯ ಮಾಡುತ್ತದೆ.
ತಂದೆ ಒಪ್ಪಿಸುವುದು ಕಷ್ಟವಾಯಿತು:ಈ ಸಿನಿಮಾ ಮಾಡಬೇಕು ಅಂದಾಗ ನಾನು ಸಂದೀಪ್ ಉನ್ನಿಕೃಷ್ಣನ್ ತಂದೆ ಮತ್ತು ತಾಯಿ ಅವರ ಒಪ್ಪಿಗೆ ಪಡೆಯೋದಕ್ಕೆ ತುಂಬಾ ಕಷ್ಟ ಆಯ್ತು. ಮೊದಲಿಗೆ ನಾನು ಫೋನ್ ಮಾಡಿದಾಗ ಸಂದೀಪ್ ತಂದೆ ಫೋನ್ ಕಟ್ ಮಾಡಿ ಇಟ್ಟರು. ನಂತರ ನಾನು ಒಂದು ವಾರ ಬೆಂಗಳೂರಿಗೆ ಬಂದು ಸಂದೀಪ್ ತಂದೆಯನ್ನು ಭೇಟಿಯಾಗಿ ಸಿನಿಮಾ ಬಗ್ಗೆ ಹೇಳಿದ ನಂತರ ಅವರೂ ಒಪ್ಪಿಕೊಂಡರು.