ಕರ್ನಾಟಕ

karnataka

ETV Bharat / entertainment

Look Back 2022.. ಈ ವರ್ಷ ಕಂಕಣಭಾಗ್ಯ ಕೂಡಿ ಬಂದ ಕನ್ನಡದ ಸೆಲೆಬ್ರಿಟಿಗಳು - celebrities marriage in 2022

ದಾಂಪತ್ಯ ಜೀವನ ಆರಂಭಿಸಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು. ಹಸೆಮಣೆ ಏರಲು ಸಜ್ಜಾಗಿದ್ದಾರೆ ಕನ್ನಡ ಚಿತ್ರರಂಗದ ಕೆಲ ಜೋಡಿಗಳು.

sandalwood celebrities marriage
ಸೆಲೆಬ್ರಿಟಿಗಳ ಮದುವೆ

By

Published : Dec 27, 2022, 5:00 AM IST

ಈ ವರ್ಷ ಸ್ಯಾಂಡಲ್​ವುಡ್​ನಲ್ಲಿ ಸೂಪರ್​ಹಿಟ್​ ಸಿನಿಮಾಗಳು ನಿರ್ಮಾಣವಾಗಿದೆ. ಈ ಶುಭಸುದ್ದಿ ಜೊತೆಗೆ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದಲ್ಲೂ ಶುಭಗಳಿಗೆ ಬಂದಿದೆ. ಕೆಲ ಸೆಲೆಬ್ರಿಟಿಗಳು ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಮತ್ತೆ ಕೆಲ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಶುಭಾ ಪೂಂಜಾ-ಸುಮಂತ್ ಮಹಾಬಲ: 2022ನೇ ವರ್ಷದ ಆರಂಭದಲ್ಲಿಯೇ ಹಸೆಮಣೆ ಏರಿದ ನಟಿ ಅಂದ್ರೆ ಮೊಗ್ಗಿನ ಮನಸ್ಸಿನ ಬೆಡಗಿ ಶುಭಾ ಪೂಂಜಾ. ಕನ್ನಡ ಹಾಗು ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಬಹು ವರ್ಷದ ಗೆಳೆಯ ಸುಮಂತ್ ಮಹಾಬಲ ಜೊತೆ ಜನವರಿ 05 ರಂದು ಮದುವೆ ಆದರು. ಸಹಜವಾಗಿ ಸಿನಿಮಾ ಸ್ಟಾರ್​ಗಳು ಮದುವೆ ಅಂದ್ರೆ ಅಲ್ಲಿ ಅದ್ಧೂರಿತನ ಇರುತ್ತದೆ. ಆದರೆ ಶುಭಾ ಪೂಂಜಾ ಮಾತ್ರ ತಾವು ಹುಟ್ಟಿದ ಮನೆಯಲ್ಲಿ ಬಹಳ ಸರಳವಾಗಿ ಸುಮಂತ್ ಜೊತೆ ಮದುವೆ ಆಗುವ ಮೂಲಕ ಗಮನ ಸೆಳೆದರು. ಉಡುಪಿಯ ಶಿರ್ವಾದ ನಿವಾಸದಲ್ಲಿ ನಡೆ ಸರಳ ವಿವಾಹಕ್ಕೆ ಆತ್ಮೀಯರು ಸಾಕ್ಷಿಯಾಗಿದ್ದರು.

ಸೆಲೆಬ್ರಿಟಿಗಳ ಮದುವೆ

ತೇಜಸ್ವಿನಿ ಪ್ರಕಾಶ್‌-ಫಲಿವರ್ಮಾ ನದೀಮ್‌ಪಳ್ಳಿ: ಇನ್ನು ವಿಭಿನ್ನ ಸಿನಿಮಾಗಳಲ್ಲಿ ಅಭಿನಯಿಸಿ ಕಳೆದ 15 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ತೇಜಸ್ವಿನಿ ಪ್ರಕಾಶ್‌ ಅವರು ತಮ್ಮ ಗೆಳೆಯ ಫಲಿವರ್ಮಾ ನದೀಮ್‌ಪಳ್ಳಿ ಜೊತೆ ಮಾರ್ಚ್ 20ರಂದು ವೈವಾಹಿಕ ಬಂಧನಕ್ಕೆ ಒಳಗಾದರು.

ನಿಕ್ಕಿ ಗಲ್ರಾನಿ-ಆದಿ ಪಿನಿಸೆಟ್ಟಿ: ಕನ್ನಡ ಚಿತ್ರರಂಗದಿಂದ ಸಿನಿಮಾ ಜರ್ನಿ ಶುರು ಮಾಡಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿರೋ ನಟಿ ನಿಕ್ಕಿ ಗಲ್ರಾನಿ ಮದುವೆ ಮೇ 18ರಂದು ನಡೆಯಿತು. ನಟಿ ಸಂಜನಾ ಗಲ್ರಾನಿ ಸಹೋದರಿಯಾಗಿರುವ ನಿಕ್ಕಿ ಗಲ್ರಾನಿ ತೆಲುಗಿನ ಪ್ರಖ್ಯಾತ ನಟ ಆದಿ ಪಿನಿಸೆಟ್ಟಿ ಅವರೊಂದಿಗೆ ಮೇ 18ರಂದು ಮದುವೆಯಾದರು. ಆದಿ ಪಿನಿಸೆಟ್ಟಿ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟ. ಸದ್ಯ ನಿಕ್ಕಿ ಗಲ್ರಾನಿ ಸಹ ತೆಲುಗು ಚಿತ್ರರಂಗದಲ್ಲಿಯೇ ಮಿಂಚುತ್ತಿದ್ದಾರೆ.

ಮನೋರಂಜನ್-ಸಂಗೀತ:ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಈ ವರ್ಷ ಅದ್ಧೂರಿ ಶುಭ ಕಾರ್ಯ ನಡೆಯಿತು. ರವಿಚಂದ್ರನ್ ಪುತ್ರ ಮನೋರಂಜನ್ ಅಪ್ಪ ಅಮ್ಮ ನೋಡಿದ ಹುಡುಗಿ ಸಂಗೀತ ಜೊತೆ ಆಗಸ್ಟ್ 21ರಂದು ಹಸೆಮಣೆ ಏರಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮನೋರಂಜನ್​ ರವಿಚಂದ್ರನ್ ಮತ್ತು​ ಸಂಗೀತಾ ವಿವಾಹ ನಡೆದಿತ್ತು. ಶಿವ ರಾಜ್​ಕುಮಾರ್, ಸುದೀಪ್, ಯಶ್ ಸೇರಿದಂತೆ ಹಲವು ಗಣ್ಯರು ರವಿಚಂದ್ರನ್ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ:2022 ಸಾಲಿನಲ್ಲಿ ದಾಂಪತ್ಯ ಜೀವನ ಆರಂಭಿಸಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು

ಅದಿತಿ ಪ್ರಭುದೇವ-ಯಶಸ್:ನಿರೂಪಕಿಯಾಗಿ ಬಳಿಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ನಟಿಯಾದ ಅದಿತಿ ಪ್ರಭುದೇವ ನವೆಂಬರ್ 28ರಂದು ಹಸೆಮಣೆ ಏರಿದರು. ಉದ್ಯಮಿ ಯಶಸ್ ಜೊತೆ ಅದಿತಿ ಪ್ರಭುದೇವ ಬೆಂಗಳೂರಿನ ಗಾಯಿತ್ರಿ ವಿಹಾರದಲ್ಲಿ ಅದ್ಧೂರಿಯಾಗಿ ಮದುವೆಯಾದರು. ಈ ಮದುವೆಗೆ ಕನ್ನಡ ಚಿತ್ರರಂಗದ ಸಾಕಷ್ಟು ತಾರೆಯರು, ರಾಜಕಾರಣಿಗಳು ಸಾಕ್ಷಿಯಾಗಿದರು.

ಇದನ್ನೂ ಓದಿ:ಹರಿಪ್ರಿಯಾ-ವಸಿಷ್ಠ ಸಿಂಹ ನಿಶ್ಚಿತಾರ್ಥ; ಎಕ್ಸ್‌ಕ್ಲೂಸಿವ್ ಫೋಟೋಗಳನ್ನು ಹಂಚಿಕೊಂಡ ತಾರಾ ಜೋಡಿ

ವಸಿಷ್ಠ ಸಿಂಹ-ಹರಿಪ್ರಿಯಾ: ಇನ್ನು 2022ನೇ ವರ್ಷದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು 2023ನೇ ವರ್ಷಕ್ಕೆ ಮದುವೆ ಆಗಲು ರೆಡಿಯಾಗಿರೋ ತಾರಾ ಜೋಡಿಗಳು ಅಂದ್ರೆ ವಸಿಷ್ಠ ಸಿಂಹ ಹಾಗು ಹರಿಪ್ರಿಯಾ. ಕನ್ನಡ ಚಿತ್ರರಂಗದಲ್ಲಿ ಈ ಇಬ್ಬರು ಸ್ಟಾರ್​ಗಳು ನಾಲ್ಕೈದು ವರ್ಷಗಳಿಂದ ಪ್ರೀತಿಯಲ್ಲಿದ್ದರು ಎನ್ನಲಾಗಿದೆ. ಇತ್ತಿಚೆಗೆ ಸೈಲೆಂಟ್ ಆಗಿ ಎಂಗೇಜ್​ಮೆಂಟ್ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ತಾರಾ ಜೋಡಿ ಇವರು.

ಇದನ್ನೂ ಓದಿ:ಪ್ರೀತಿಸಿದ ಹುಡುಗಿಯೊಂದಿಗೆ ಅಭಿಷೇಕ್ ಅಂಬಿ​ ಎಂಗೇಜ್‌ಮೆಂಟ್‌: ಸುಮಧುರ ಕ್ಷಣಗಳು..

ಅಭಿಷೇಕ್-ಅವಿವಾ: ಇದರ ಜೊತೆಗೆ ದಿವಗಂತ ಅಂಬರೀಶ್ ಹಾಗು ಸುಮಲತಾ ಅಂಬರೀಶ್ ಸುಪತ್ರ ಅಭಿಷೇಕ್ ಅಂಬರೀಶ್ ಕೂಡ ಪ್ರೀತಿಸಿದ ಹುಡುಗಿ ಅವಿವಾ ಬಿದ್ದಪ್ಪ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಮದುಗೆ ರೆಡಿಯಾಗಿದ್ದಾರೆ. ಫ್ಯಾಷನ್ ಡಿಸೈನರ್ ಪ್ರಸಾದ್‌ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಜೊತೆ ಹಲವು ವರ್ಷಗಳಿಂದ ಅಭಿಷೇಕ್ ಅಂಬರೀಶ್ ಪ್ರೀತಿಸುತ್ತಿದ್ದರು. ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ 2023ನೇ ವರ್ಷದ ಆರಂಭದಲ್ಲಿ ಮದುವೆ ಆಗಲಿದ್ದಾರೆ ಎನ್ನುವ ಮಾಹಿತಿ ಇದೆ.

ABOUT THE AUTHOR

...view details