ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಸದ್ಯ ಸಿನಿಮಾಗಳಿಂದ ಸಣ್ಣ ಬ್ರೇಕ್ ಪಡೆದಿರುವುದು ನಿಮಗೆ ತಿಳಿದಿರುವ ವಿಚಾರ. ಮಯೋಸಿಟಿಸ್ ವಿರುದ್ಧ ಹೋರಾಡುತ್ತಿರುವ ನಟಿ ಪ್ರಸ್ತುತ ಆರೋಗ್ಯ ಚೇತರಿಕೆಗೆ ಗಮನ ಕೊಟ್ಟಿದ್ದಾರೆ. ಇತ್ತೀಚೆಗೆ ನಟಿ ಯಾವ ಹೊಸ ಸಿನಿಮಾಗಳನ್ನೂ ಘೋಷಿಸಿಲ್ಲ. ಶೂಟಿಂಗ್ಗಳಲ್ಲಿ ಭಾಗಿಯಾಗುತ್ತಿಲ್ಲ. ತಾವು ಒಪ್ಪಿಕೊಂಡಿದ್ದ ಎರಡು ಸಿನಿಮಾ ಕೆಲಸಗಳನ್ನು ಕೂಡ ಪೂರ್ಣಗೊಳಿಸಿದ್ದಾರೆ.
ಖಾಸಗಿ ಸಮಯ ಆನಂದಿಸುತ್ತಿರುವ ಸ್ಯಾಮ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆಗಿನ ಕುಶಿ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಬಾಲಿವುಡ್ ನಟ ವರುಣ್ ಧವನ್ ಜೊತೆಗಿನ ಸಿಟಾಡೆಲ್ ಸರಣಿಯ ತಮ್ಮ ಪಾತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದು ರಿಲ್ಯಾಕ್ಸ್ ಮೂಡ್ನಲ್ಲಿರುವ ಸ್ಯಾಮ್ ಸದ್ಯ ಖಾಸಗಿ ಸಮಯವನ್ನು ಆನಂದಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ವಿದೇಶ ಪ್ರವಾಸ, ಮೂವಿ ಟೈಮ್, ಸ್ನೇಹಿತರೊಡನೆ ಮೋಜು ಮಸ್ತಿ ಎಂದು ಸಮಯ ಕಳೆಯುತ್ತಿದ್ದಾರೆ. ದಿನನಿತ್ಯ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಹಾಗಾಗಿ ತಮ್ಮ ಮೆಚ್ಚಿನ ನಟಿಗೆ ಏನಾಯ್ತೋ, ಏನೋ? ಅವರ ಆರೋಗ್ಯ ಹೇಗಿದೆಯೋ? ಎಂಬ ಚಿಂತೆಯಲ್ಲಿ ಅಭಿಮಾನಿಗಳಿಲ್ಲ.
ಸಮಂತಾ ಇನ್ಸ್ಟಾಗ್ರಾಮ್ ಸ್ಟೋರಿ: ನಟಿ ಸಮಂತಾ ರುತ್ ಪ್ರಭು ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ ಎಂಬುದು ನಿಮಗೆ ತಿಳಿದೇ ಇದೆ. ಸಾಂಧರ್ಭಿಕವಾಗಿ ಫಿಲಾಸಫಿ ಕೋಟ್ಸ್ ಇಮೇಜ್ಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಒಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ''ಒಂದು ವೇಳೆ ಜಿರಳೆ ಕೊಂದರೆ ನೀನು ಹೀರೋ, ಅದೇ ಚಿಟ್ಟೆ ಕೊಂದರೆ ನೀನು ಕೆಟ್ಟ ವ್ಯಕ್ತಿ, ನೈತಿಕತೆ ಸುಂದರ ಮಾನದಂಡಗಳನ್ನು ಹೊಂದಿದೆ'' ಎಂದು ಬರೆದಿರುವ ಪೋಸ್ಟ್ ಇದು. ನಟಿ ಏಕೆ ಈ ರೀತಿಯ ಪೋಸ್ಟ್ ಶೇರ್ ಮಾಡಿದ್ದಾರೆ ಎಂದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಏನಾಯ್ತು, ಎಲ್ಲವೂ ಸರಿಯಾಗಿದೆಯೇ? ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ನಟಿಯ ಪೋಸ್ಟ್ಗೆ ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.