ಕರ್ನಾಟಕ

karnataka

ETV Bharat / entertainment

ಅಕ್ಷಯ್ ಕುಮಾರ್ ಅವರ ಭಾವನಾತ್ಮಕ ವಿಡಿಯೋ ಹಂಚಿಕೊಂಡ ಸಲ್ಮಾನ್ ಖಾನ್ - ಸಲ್ಮಾನ್ ಖಾನ್ ಲೇಟೆಸ್ಟ್ ನ್ಯೂಸ್

ಸಲ್ಮಾನ್ ಖಾನ್ ಅವರು ಅಕ್ಷಯ್ ಕುಮಾರ್ ಅವರ ಹಳೇ ಭಾವನಾತ್ಮಕ ವಿಡಿಯೋವೊಂದನ್ನು ಶೇರ್​ ಮಾಡಿದ್ದಾರೆ.

Salman Khan emotional pic
ಅಕ್ಷಯ್ ಕುಮಾರ್ ಭಾವನಾತ್ಮಕ ಫೋಟೋ

By

Published : Dec 17, 2022, 1:23 PM IST

ಶುಕ್ರವಾರ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ನಟ ಅಕ್ಷಯ್ ಕುಮಾರ್ ಅವರ ಹಳೇ ಭಾವನಾತ್ಮಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ ಮತ್ತು ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದ್ದಾರೆ. ಥ್ರೋಬ್ಯಾಕ್ ವಿಡಿಯೋವನ್ನು ಸಲ್ಮಾನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಈ ವಿಡಿಯೋ ಸಖತ್ ವೈರಲ್ ಆಗಿದೆ.

ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ವಿಡಿಯೋ ಹಂಚಿಕೊಂಡ ಸಲ್ಮಾನ್​ ಖಾನ್, "ನಾನು ಈ ವಿಡಿಯೋವನ್ನು, ನನ್ನ ಅನಿಸಿಕೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಅಕ್ಕಿ ಆ ದೇವರು ನಿಮ್ಮನ್ನು ಆಶೀರ್ವದಿಸಲಿ, ನಿಜವಾಗಿಯೂ ಅದ್ಭುತವಾಗಿದೆ, ಇದನ್ನು ನೋಡಿ ತುಂಬಾ ಸಂತೋಷವಾಗಿದೆ. ಒಳ್ಳೆಯ ಕೆಲಸ ಮಾಡುತ್ತಿರಿ, ದೇವರು ಯಾವಾಗಲೂ ನಿಮ್ಮೊಂದಿಗೆ ಇರಲಿ ಸಹೋದರ" ಎಂದು ಬರೆದಿದ್ದಾರೆ.

ಸಲ್ಮಾನ್​ ಹೀಗೆ ಹೇಳಿದ್ಯಾಕೆ?: ಖಾಸಗಿ ವಾಹಿನಿಯ ಶೋ ಒಂದರಲ್ಲಿ ಸಹೋದರಿ ಅಲ್ಕಾ ಭಾಟಿಯಾ ಅವರಿಂದ ಆಡಿಯೋ ಸಂದೇಶವನ್ನು ಕೇಳಿದ ನಂತರ ಅಕ್ಷಯ್​ ಭಾವುಕರಾಗಿರುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು. ಅಕ್ಷಯ್​​ ಅವರನ್ನು 'ರಾಜು' (ಹೇರಾ ಫೇರಿ ಚಿತ್ರದ ಫೇಮಸ್ ಪಾತ್ರ) ಎಂದು ಸಂಬೋಧಿಸಿ ಪಂಜಾಬಿ ಭಾಷೆಯಲ್ಲಿ ಮಾತನಾಡಿದ ಅಲ್ಕಾ ಭಾಟಿಯಾ, ''ಆಗಸ್ಟ್​ 11ರ ರಾಖಿ ಹಬ್ಬದಂದು ನನ್ನ ಸ್ನೇಹಿತರೊಡನೆ ಮಾತನಾಡುವಾಗ ನಿಮ್ಮ ವಿಷಯ ಬಂತು, ನೀವು ನನ್ನ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ನನ್ನೊಂದಿಗೆ ನಿಂತಿದ್ದಿರಿ. ತಂದೆ, ಸಹೋದರ, ಸ್ನೇಹಿತ ಹೀಗೆ ಎಲ್ಲಾ ಪಾತ್ರಗಳನ್ನು ನಿರ್ವಹಿಸಿದ್ದೀರಿ. ಎಲ್ಲದಕ್ಕೂ ಧನ್ಯವಾದಗಳು" ಎಂದು ಹೇಳಿದರು. ಅಕ್ಷಯ್​ ಅವರ ಒಳ್ಳೆಯತನಕ್ಕೆ ಈಗ ಸಲ್ಮಾನ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು, ಈ ವಿಡಿಯೋ ಸಂಗೀತ ಸ್ಪರ್ಧೆ ಕಾರ್ಯಕ್ರಮವೊಂದರಲ್ಲಿ ನಡೆದ ಘಟನೆ ಆಗಿದೆ.

ಇದನ್ನೂ ಓದಿ:ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಮಿಲಿಯನ್​ ವೀಕ್ಷಣೆ ಪಡೆದ 'ಮಿಷನ್​ ಮಜ್ನು' ಟೀಸರ್​

ABOUT THE AUTHOR

...view details