ಕರ್ನಾಟಕ

karnataka

ETV Bharat / entertainment

ಮೇ 20ರಂದು ಒಟಿಟಿಗೆ ಆರ್​ಆರ್​ಆರ್​ ಸಿನಿಮಾ : ಆದರೆ..?

ಜಿ5 ಮತ್ತು ನೆಟ್​ಫ್ಲಿಕ್ಸ್​ನಲ್ಲಿ ಆರ್​ಆರ್​ಆರ್​ ಸಿನಿಮಾ ಬರುತ್ತಿದೆ ಎಂಬುದೇನೋ ಸರಿ. ಆದರೆ, ಸಿನಿಮಾ ವಿತರಕರು ಇದರಲ್ಲಿ ಒಂದು ಟ್ವಿಸ್ಟ್​ ಇಟ್ಟಿದ್ದು, ಈಗಾಗಲೇ ಒಟಿಟಿಯ ಚಂದಾದಾರಿಕೆ ಹೊಂದಿದ್ದರೂ ಈ ಸಿನಿಮಾ ವೀಕ್ಷಿಸಲು ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗಿದೆ..

rrr-release-in-ott
ಆರ್​ಆರ್​ಆರ್​ ಸಿನಿಮಾ

By

Published : May 4, 2022, 6:50 PM IST

ಹೈದರಾಬಾದ್:ಬಾಹುಬಲಿ ಖ್ಯಾತಿಯ ರಾಜಮೌಳಿ ನಿರ್ದೇಶನದ ಬ್ಲಾಕ್​ಬಸ್ಟರ್​ ಸಿನಿಮಾ 'ಆರ್​ಆರ್​ಆರ್​' ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದು ಗೊತ್ತೇ ಇದೆ. ಈ ಮಧ್ಯೆಯೇ ಸಿನಿಮಾವನ್ನು ಒಟಿಟಿ ಪ್ಲಾಟ್​ಫಾರ್ಮ್​ಗೆ ತರಲು ನಿರ್ಮಾಪಕರು ಮುಂದಾಗಿದ್ದಾರೆ. ಮೇ 20ರಂದು ಸಿನಿಮಾ ಒಟಿಟಿಗೂ ಲಗ್ಗೆ ಇಡಲಿದೆ.

ಸ್ಟಾರ್​ ನಟರಾದ ರಾಮ್​ಚರಣ್​, ಜೂನಿಯರ್​ ಎನ್​ಟಿಆರ್ ನಟನೆಯ ಆರ್​ಆರ್​ಆರ್​ ಸಿನಿಮಾ ಈಗಾಗಲೇ ಅಭಿಮಾನಿಗಳ ಮನಸೂರೆಗೊಂಡಿದೆ. ಒಟಿಟಿಯಲ್ಲಿ ಸಿನಿಮಾವನ್ನು ಯಾವಾಗ ಬಿಡುಗಡೆ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆ ದಿನ ಈಗ ಬಂದಿದ್ದು, ಮೇ 20ರಂದು ಒಟಿಟಿಗಳಾದ ಜಿ5 ಮತ್ತು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿದೆ.

ಇದರಲ್ಲೂ ಇದೆ ಟ್ವಿಸ್ಟ್ ​:ಜಿ5 ಮತ್ತು ನೆಟ್​ಫ್ಲಿಕ್ಸ್​ನಲ್ಲಿ ಆರ್​ಆರ್​ಆರ್​ ಸಿನಿಮಾ ಬರುತ್ತಿದೆ ಎಂಬುದೇನೋ ಸರಿ. ಆದರೆ, ಸಿನಿಮಾ ವಿತರಕರು ಇದರಲ್ಲಿ ಒಂದು ಟ್ವಿಸ್ಟ್​ ಇಟ್ಟಿದ್ದು, ಈಗಾಗಲೇ ಒಟಿಟಿಯ ಚಂದಾದಾರಿಕೆ ಹೊಂದಿದ್ದರೂ ಈ ಸಿನಿಮಾವನ್ನು ವೀಕ್ಷಿಸಲು ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗಿದೆ.

ಒಂದು ವೇಳೆ ಸಿನಿಮಾವನ್ನು ಪ್ರತ್ಯೇಕವಾಗಿ ಹಣ ಪಾವತಿ ಮಾಡಲು ಬಯಸದೇ ಇದ್ದಲ್ಲಿ ನೀವು ಜೂನ್​ 3ರವರೆಗೂ ಕಾಯಬೇಕಾಗುತ್ತದೆ. ಜೂನ್​ 3ರ ಬಳಿಕ ಆಯಾ ಒಟಿಟಿಗಳಲ್ಲಿ ಸಹಜವಾಗಿ ಸ್ಟ್ರೀಮಿಂಗ್​ ಆಗಲಿದೆ. ಆಗ ಅದು ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ.

ಓದಿ:ಕಾಫಿ ವಿತ್ ಕರಣ್ ಇನ್ಮುಂದೆ ಪ್ರದರ್ಶನವಿಲ್ಲ.. ಭಾವನಾತ್ಮಕ ಸಂದೇಶ ಬರೆದ ನಿರೂಪಕ

ABOUT THE AUTHOR

...view details