ಕರ್ನಾಟಕ

karnataka

ETV Bharat / entertainment

2 ಐಷಾರಾಮಿ ಅಪಾರ್ಟ್​ಮೆಂಟ್​ಗಳನ್ನು ಬಹುದೊಡ್ಡ ಮೊತ್ತಕ್ಕೆ ಮಾರಿದ ನಟ ರಣ್​ವೀರ್​ ಸಿಂಗ್​ - ಈಟಿವಿ ಭಾರತ ಕನ್ನಡ

Ranveer Singh sells two luxury apartments: ನಟ ರಣ್​ವೀರ್​ ಸಿಂಗ್​ ಮುಂಬೈನಲ್ಲಿರುವ ಎರಡು ಐಷಾರಾಮಿ ಅಪಾರ್ಟ್​ಮೆಂಟ್​ಗಳನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.

Slug  Ranveer Singh sells two luxury apartments in Mumbai, read to know more
2 ಐಷಾರಾಮಿ ಅಪಾರ್ಟ್​ಮೆಂಟ್​ಗಳನ್ನು ಬಹುದೊಡ್ಡ ಮೊತ್ತಕ್ಕೆ ಮಾರಿದ ನಟ ರಣ್​ವೀರ್​ ಸಿಂಗ್​

By ETV Bharat Karnataka Team

Published : Nov 13, 2023, 7:46 PM IST

ಹಿಂದಿ ಚಿತ್ರರಂಗದ ಸೂಪರ್​ಸ್ಟಾರ್​ ನಟ ರಣ್​ವೀರ್​ ಸಿಂಗ್​. ಕಳೆದೆರಡು ವರ್ಷಗಳಿಂದ ಹಿಟ್​ ಚಿತ್ರಗಳನ್ನು ನೀಡುತ್ತಾ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಇತ್ತೀಚೆಗೆ ಅವರ ನಟನೆಯ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಬ್ಲಾಕ್​ಬಸ್ಟರ್​ ಆಗಿತ್ತು. ಇದೀಗ ನಟನ ಕುರಿತ ಸುದ್ದಿಯೊಂದು ಹೊರಬಿದ್ದಿದೆ. ಮುಂಬೈನಲ್ಲಿರುವ ಎರಡು ಐಷಾರಾಮಿ ಅಪಾರ್ಟ್​ಮೆಂಟ್​ಗಳನ್ನು ಅವರು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ.

ವರದಿಗಳ ಪ್ರಕಾರ, ರಣ್​ವೀರ್​ ಸಿಂಗ್​ ಇತ್ತೀಚೆಗೆ ಮುಂಬೈನ ವೆಸ್ಟರ್ನ್​ ಎಕ್ಸ್​ಪ್ರೆಸ್​ ಹೆದ್ದಾರಿಯಲ್ಲಿರುವ ಎರಡು ಅದ್ಧೂರಿ ಅಪಾರ್ಟ್​ಮೆಂಟ್​ಗಳನ್ನು ಮಾರಾಟ ಮಾಡಿದ್ದಾರೆ. ಈ ಎರಡು ಅಪಾರ್ಟ್​ಮೆಂಟ್​ಗಳ ಒಟ್ಟು ಮೌಲ್ಯ 15.25 ಕೋಟಿ ರೂಪಾಯಿ. ಈ ಮನೆಗಳು ಎಕ್ಸ್​ಪ್ರೆಸ್​ ಹೆದ್ದಾರಿಯಲ್ಲಿನ ಒಬೆರಾಯ್​ ಮಾಲ್​ ಬಳಿಯ ಗೋರೆಗಾಂವ್​ ಪೂರ್ವದಲ್ಲಿರುವ ಒಬೆರಾಯ್​ ಎಕ್​ಕ್ವಿಸೈಟ್​ ಕಟ್ಟಡದ 43ನೇ ಮಹಡಿಯಲ್ಲಿವೆ.

1,324 ಚದರ ಅಡಿಗಳಷ್ಟು ವಿಸ್ತಾರವಾಗಿರುವ ಈ ಅಪಾರ್ಟ್​ಮೆಂಟ್​ಗಳು ಆರ್​ ಪಾರ್ಕಿಂಗ್​ ಸ್ಥಳಗಳನ್ನು ಹೊಂದಿದೆ. ಪ್ರತಿ ಅಪಾರ್ಟ್​ಮೆಂಟ್​ಗೆ ನಟ 45.75 ಲಕ್ಷ ಸ್ಟ್ಯಾಂಪ್​ ಡ್ಯೂಟಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಅಪಾರ್ಟ್​ಮೆಂಟ್ ಅನ್ನು ಅದೇ ಪ್ರದೇಶದ ವ್ಯಕ್ತಿಯೊಬ್ಬರು ಖರೀದಿಸಿದ್ದಾರೆ. ನವೆಂಬರ್​ 6ರ ಮುಂಚಿತವಾಗಿ ನಟ ಈ ಅಪಾರ್ಟ್​ಮೆಂಟ್​ಗಳನ್ನು ಮಾರಾಟ ಮಾಡಿದ್ದಾರೆ. ಕಳೆದ ವರ್ಷ ರಣ್​ವೀರ್​ ಸಿಂಗ್​ ಬಾಂ​ದ್ರಾ ವೆಸ್ಟ್​ನಲ್ಲಿ 119 ಕೋಟಿಗೆ ಕ್ವಾಡ್ರಪ್ಲೆಕ್ಸ್​ ಅನ್ನು ಖರೀದಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ.

ಇದನ್ನೂ ಓದಿ:ಟ್ರೋಲ್ಸ್​ಗೆ ಡೋಂಟ್​ ಕೇರ್: ಟ್ರೋಲರ್​ಗಳನ್ನೇ ಟ್ರೋಲ್ ಮಾಡಿದ ದೀಪಿಕಾ ಪಡುಕೋಣೆ!

ರಣ್​ವೀರ್​ ಸಿಂಗ್​ ಅವರ ಸಿನಿಮಾ ವಿಚಾರವಾಗಿ ನೋಡುವುದಾದರೆ, ನಟ ಕೊನೆಯದಾಗಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಕಾಣಿಸಿಕೊಂಡರು. ಅವರ ಮುಂಬರುವ ಚಿತ್ರ 'ಸಿಂಗಮ್ ಎಗೈನ್'. ಜನಪ್ರಿಯ ಸಾಹಸ ಚಿತ್ರಗಳ ನಿರ್ದೇಶಕ ರೋಹಿತ್ ಶೆಟ್ಟಿ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಬಹು ನಿರೀಕ್ಷಿತ ಆ್ಯಕ್ಷನ್​ ಪ್ಯಾಕ್ಡ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಅಜಯ್​ ದೇವ್​ಗನ್​, ದೀಪಿಕಾ ಪಡುಕೋಣೆ, ರಣ್​ವೀರ್​ ಸಿಂಗ್, ಟೈಗರ್ ಶ್ರಾಫ್​ ನಟಿಸುತ್ತಿದ್ದಾರೆ.

ಈ ಹಿಂದಿನ ಸಿಂಗಮ್​ 1 ಮತ್ತು 2 ಪ್ರೇಕ್ಷಕರಿಗೆ ಕಂಪ್ಲೀಟ್​ ಎಂಟರ್​​ಟೈನ್​ಮೆಂಟ್​ ಕೊಡುವಲ್ಲಿ ಯಶ ಕಂಡಿದೆ. ಮೂರನೇ ಕಂತಿನಲ್ಲಿ ಬಿಗ್​​ ಸ್ಟಾರ್​ ಕಾಸ್ಟ್ ಇದ್ದು, ಪ್ರೇಕ್ಷಕರ ಕುತೂಹಲ - ನಿರೀಕ್ಷೆ ದ್ವಿಗುಣಗೊಂಡಿದೆ. ಈ ಆ್ಯಕ್ಷನ್​ ಥ್ರಿಲ್ಲರ್ ಸಿನಿಮಾ 'ಸಿಂಗಮ್​ 3' 2024ರ ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಇತ್ತೀಚೆಗೆ ನಟ ತಮ್ಮ ಪತ್ನಿ ದೀಪಿಕಾ ಪಡುಕೋಣೆ ಜೊತೆ ಕಾಫಿ ವಿತ್​ ಕರಣ್​ ಟಾಕ್​ ಶೋನಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:ದೀಪಿಕಾ-ರಣ್​ವೀರ್​ ಟ್ರೋಲ್​ ಮಾಡಿದವರ ವಿರುದ್ಧ ಕಾಂಗ್ರೆಸ್​ ನಾಯಕಿ ಸುಪ್ರಿಯಾ ಶ್ರೀನೆಟ್ ಗರಂ

ABOUT THE AUTHOR

...view details