ಕರ್ನಾಟಕ

karnataka

ETV Bharat / entertainment

ಬಿಗ್​ ಬಿ, ಕಿಂಗ್​ ಖಾನ್​​ ಹಿಂದಿ ಚಿತ್ರರಂಗದ ಎರಡು 'G.O.A.T' ಇದ್ದಂತೆ.. 'ಡಾನ್​' ರಣ್​ವೀರ್​ ಸಿಂಗ್​ ಗುಣಗಾನ - ಈಟಿವಿ ಭಾರತ ಕನ್ನಡ

ಬಾಲಿವುಡ್​ ನಟ ರಣ್​ವೀರ್​ ಸಿಂಗ್​ ಅವರು, ಅಮಿತಾಭ್​ ಬಚ್ಚನ್​ ಹಾಗೂ ಶಾರುಖ್​ ಖಾನ್ ಅವರನ್ನು ಹಿಂದಿ ಚಿತ್ರರಂಗದ ಎರಡು 'G.O.A.T' ಎಂದಿದ್ದಾರೆ.

Don 3
ಡಾನ್​ 3

By

Published : Aug 10, 2023, 5:19 PM IST

'ಡಾನ್​' ಭಾರತೀಯ ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಟ್ರೆಂಡಿಂಗ್​ ಹೆಸರು. ಬಾಲಿವುಡ್​​ ಹಿರಿಯ ನಟ ಅಮಿತಾಭ್​ ಬಚ್ಚನ್​ ಅವರು 1978ರಲ್ಲಿ ಡಾನ್​​ ಸಿನಿಮಾದಲ್ಲಿ ನಟಿಸಿದ್ದರು. ಚಲನಚಿತ್ರದ ಹಕ್ಕು ಪಡೆದು ಫರ್ಹಾನ್​ ಅಖ್ತರ್ ಅವರು ಡಾನ್​ ಫ್ರಾಂಚೈಸಿ ಪ್ರಾರಂಭಿಸಿದರು. ಡಾನ್​ 1 ಮತ್ತು 2ರಲ್ಲಿ ಕಿಂಗ್​ ಖಾನ್​ ಶಾರುಖ್​ ಕಾಣಿಸಿಕೊಂಡಿದ್ದಾರೆ. ಇದೀಗ ಡಾನ್​ 3ರಲ್ಲಿ ರಣ್​ವೀರ್ ಸಿಂಗ್​​ ನಟಿಸಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಣ್​ವೀರ್​ ಸಿಂಗ್​ ಸೋಷಿಯಲ್​ ಮೀಡಿಯಾದಲ್ಲಿ ಅಮಿತಾಭ್​ ಬಚ್ಚನ್​ ಹಾಗೂ ಶಾರುಖ್​ ಖಾನ್ ಅವರ ಗುಣಗಾನ ಮಾಡಿದ್ದಾರೆ. ತಮ್ಮ ಬಾಲ್ಯದ ಫೋಟೋವನ್ನು ಹಂಚಿಕೊಂಡು ಬಹುದೊಡ್ಡ ಕ್ಯಾಪ್ಶನ್​ ಬರೆದಿದ್ದಾರೆ. ಕೈಯಲ್ಲಿ ಬಂದೂಕು ಹಿಡಿದುಕೊಂಡು ನಗು ಬೀರುತ್ತಾ ನಿಂತಿರುವ ಪುಟಾಣಿ ರಣ್​ವೀರ್​ ಅವರನ್ನು ಈ ಫೋಟೋದಲ್ಲಿ ನೀವು ಕಾಣಬಹುದು.

ರಣ್​ವೀರ್​ ಸಿಂಗ್ ಪೋಸ್ಟ್​:'ಡಾನ್​' ಕುರಿತಾಗಿ ಪೋಸ್ಟ್​ ಹಂಚಿಕೊಂಡಿರುವ ರಣ್​ವೀರ್​ ಸಿಂಗ್​,"ಗೋಷ್​! ನಾನು ಇದನ್ನು ಮಾಡಬೇಕೆಂದು ಬಹಳ ಸಮಯದಿಂದ ಕನಸು ಕಾಣುತ್ತಿದ್ದೆ. ಬಾಲ್ಯದಿಂದಲೇ ನಾನು ಚಲನಚಿತ್ರಗಳನ್ನು ಪ್ರೀತಿಸುತ್ತಿದ್ದೆ. ಅಮಿತಾಭ್​ ಬಚ್ಚನ್​ ಮತ್ತು ಶಾರುಖ್​ ಖಾನ್​ ಅವರನ್ನು ಹಿಂದಿ ಚಿತ್ರರಂಗದ ಎರಡು G.O.A.T ಎಂದೇ ನೋಡುತ್ತಿದ್ದೆ ಮತ್ತು ಅವರನ್ನು ಪೂಜಿಸುತ್ತಿದ್ದೆ. ನಾನು ಇಂದು ನಟನಾಗಲು ಮತ್ತು ಹಿಂದಿ ಸಿನಿಮಾ ಹೀರೋ ಆಗಲು ಇವರೇ ಕಾರಣ. ನನ್ನ ಜೀವನದ ಮೇಲೆ ಅವರಿಬ್ಬರ ಪ್ರಭಾವ ಅತಿಯಾಗಿ ಬೀರಿದೆ. ಅವರು ನನ್ನನ್ನು ನಟನಾಗಿ ರೂಪಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದಾರೆ. ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವುದು ನನ್ನ ಬಾಲ್ಯದ ಕನಸಾಗಿದೆ" ಎಂದಿದ್ದಾರೆ.

ಮುಂದುವರೆದು, "ಡಾನ್​ನ ಭಾಗವಾಗುವುದು ಎಷ್ಟು ದೊಡ್ಡ ಜವಾಬ್ದಾರಿ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಪ್ರೇಕ್ಷಕರು ಪ್ರತಿ ಸಾರಿಯೂ ನನಗೆ ಅವಕಾಶವನ್ನು ನೀಡುತ್ತಾರೆ. ಕಳೆದ ಹಲವು ವರ್ಷಗಳಿಂದ ನಾನು ನಿರ್ವಹಿಸಿದ ಎಲ್ಲಾ ಪಾತ್ರಗಳಿಗೆ ಪ್ರೀತಿಯ ಮಳೆಯನ್ನೇ ಸುರಿಸಿದ್ದಾರೆ. ಸದ್ಯ ಡಾನ್​ ಎಂಬ ಗೌರವಾನ್ವಿತ ಪಾತ್ರವನ್ನು ನನಗೆ ವಹಿಸಿದ್ದಕ್ಕಾಗಿ ಮತ್ತು ನನ್ನಲ್ಲಿ ನಂಬಿಕೆ ಇಟ್ಟದ್ದಕ್ಕಾಗಿ ಫರ್ಹಾನ್​ ಅಖ್ತರ್ ಅವರಿಗೆ ಧನ್ಯವಾದಗಳು. ನಾನು ನಿಮ್ಮ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಬಲ್ಲೆ ಎಂದು ಭಾವಿಸುತ್ತೇನೆ.​" ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ, "ನಾನು ಸೂಪರ್​ ಹೀರೋಗಳಾದ ಎಸ್​ಆರ್​ಕೆ ಮತ್ತು ಅಮಿತಾಭ್​ ಬಚ್ಚನ್​ ಅವರನ್ನು ಈ ಚಿತ್ರದ ಮೂಲಕ ಹೆಮ್ಮೆಪಡುವಂತೆ ಮಾಡುತ್ತೇನೆ ಎಂದು ಅಂದುಕೊಂಡಿದ್ದೇನೆ. ಜೊತೆಗೆ ನನ್ನ ಪ್ರೀತಿಯ ಪ್ರೇಕ್ಷಕರೇ, ನಾನು ನಿಮಗೆ ಭರವಸೆ ನೀಡುತ್ತೇನೆ. ನನ್ನ ಕೈಲಾದಷ್ಟು ಮಟ್ಟಿಗೆ ನಿಮ್ಮನ್ನು ರಂಜಿಸಲು ಪ್ರಯತ್ನ ಪಡುತ್ತೇನೆ" ಎಂದು ಉದ್ದನೆಯ ಟಿಪ್ಪಣಿ ಬರೆದಿದ್ದಾರೆ.

ರಣ್​ವೀರ್​ ಸಿಂಗ್​ ಮತ್ತು ಫರ್ಹಾನ್​ ಅಖ್ತರ್​ ಕಾಂಬೋದಲ್ಲಿ ಡಾನ್​ 3 ಮೂಡಿಬರಲಿದೆ. ಮೊದಲೆಡು ಭಾಗ (ಡಾನ್​ 1, 2) ಗಮನಾರ್ಹ ನಿರ್ಗಮನ. ಫರ್ಹಾನ್​ ಅಖ್ತರ್​ ಅವರ ಡಾನ್​ 1 (2006) ಮತ್ತು ಅದರ ಸೀಕ್ವೆಲ್​​​ ಡಾನ್​​ 2 (2011) ರಲ್ಲಿ ಸೂಪರ್ ಸ್ಟಾರ್​ ಶಾರುಖ್​ ಅವರು ಅದ್ಭುತ ಡಾನ್​ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲೆರಡೂ ಭಾಗಗಳಲ್ಲಿ ದೇಶಿ ಗರ್ಲ್ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಡಾನ್​ 3ರಲ್ಲಿ ಬಿಟೌನ್​ ಬೆಡಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:DON 3: ಮುಂದಿನ ಡಾನ್​ ಶಾರುಖ್​ ಅಲ್ಲ ರಣ್​ವೀರ್! ಸಿಂಗ್​ ಜೊತೆ ಕಿಯಾರಾ ಅಭಿನಯ

ABOUT THE AUTHOR

...view details