ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾ ದಂಪತಿ ಶನಿವಾರ ರಾತ್ರಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಜೋಡಿ ಮ್ಯಾಚಿಂಗ್ ಫೇಸ್ ಮಾಸ್ಕ್ ಧರಿಸಿದ್ದರು. ಮಾಸ್ಕ್ ಕಪಲ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಂಪತಿಯನ್ನು, ಟೆಲಿವಿಶನ್ ಪಾಪುಲರ್ ಶೋ ಪವರ್ ರೇಂಜರ್ಸ್ನೊಂದಿಗೆ ನೆಟ್ಟಿಗರು ಹೋಲಿಕೆ ಮಾಡಿದ್ದಾರೆ.
ಪ್ರಕರಣವೊಂದರಲ್ಲಿ ಸಿಲುಕಿ ಸಮಸ್ಯೆಗಳನ್ನು ಎದುರಿಸಿದ ಬಳಿಕ, ಉದ್ಯಮಿ ರಾಜ್ ಕುಂದ್ರಾ ಅವರು ಪಬ್ಲಿಕ್ ಪ್ಲೇಸ್ನಲ್ಲಿ ಫೇಸ್ ಮಾಸ್ಕ್ ಧರಿಸಿ ಓಡಾಡಲು ಪ್ರಾರಂಭಿಸಿದರು. ಪಾಪರಾಜಿಗಳಿಂದ ಅಂತರ ಕಾಯ್ದುಕೊಳ್ಳಲು ಇಚ್ಛಿಸುವ ರಾಜ್, ಹೆಚ್ಚಾಗಿ ಕಂಪ್ಲೀಟ್ ಫೇಸ್ ಮಾಸ್ಕ್ ಧರಿಸಿಯೇ ಓಡಾಡುತ್ತಾರೆ. ಮಾಸ್ಕ್ ಮ್ಯಾನ್ ಎಂದೇ ಫೇಮಸ್ ನೋಡಿ. ಇತ್ತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಪತಿ ರಾಜ್ ಕುಂದ್ರಾ ಅವರನ್ನು ಅನುಸರಿಸಿದ್ದಾರೆ. ಮೊದಲ ಬಾರಿ ನಟಿ, ಪತಿಯಂತೆ ಕಂಪ್ಲೀಟ್ ಎಲ್ಇಡಿ ಫೇಸ್ ಮಾಸ್ಕ್ ಧರಿಸಿ ಕಾಣಿಸಿಕೊಂಡರು.
ಅಶ್ಲೀಲ ಚಿತ್ರಗಳನ್ನು ನಿರ್ಮಿಸಿ, ಅಪ್ಲೋಡ್ ಮಾಡಿದ ಆರೋಪ ಪ್ರಕರಣದಲ್ಲಿ ಜಾಮೀನು ಪಡೆದಿರುವ ರಾಜ್ ಕುಂದ್ರಾ ಅವರು, ಮುಖವಾಡಗಳಿಂದ ತಮ್ಮ ಮುಖವನ್ನು ಮರೆಮಾಡುವಲ್ಲಿ ಹೆಸರುವಾಸಿಯಾಗಿದ್ದಾರೆ. ಇತ್ತ ಪತ್ನಿ ಕೂಡ ಪತಿಗೆ ಸಾಥ್ ನೀಡಿ, ಮಾಸ್ಕ್ ಧರಿಸಿ ಬಂದಿದ್ದಾರೆ. ನಿನ್ನೆ ಸಂಜೆ ಅಪರೂಪದ ದೃಶ್ಯ ಕಂಡುಬಂದಿದ್ದು, ದಂಪತಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಶನಿವಾರ ಸಂಜೆ ಇಬ್ಬರೂ ವೀಕೆಂಡ್ ಡೇಟ್ಗೆ ಹೊರಗೆ ಬಂದಿದ್ದಾರೆ. ಮ್ಯಾಚಿಂಗ್ ಮಾಸ್ಕ್ನೊಂದಿಗೆ ಆಗಮಿಸಿದ ಜೋಡಿ, ಪಾಪರಾಜಿಗಳಿಗೆ ಪೋಸ್ ನೀಡಿದರು. ಬಾಲಿವುಡ್ ಬ್ಯೂಟಿ ಶಿಲ್ಪಾ ಬ್ಲ್ಯಾಕ್ ಜಂಪ್ಸೂಟ್ನಲ್ಲಿ ಕಾಣಿಸಿಕೊಂಡರೆ, ರಾಜ್ ಬ್ಲ್ಯಾಕ್ ಸ್ವೆಟ್ಶರ್ಟ್ ಹಾಗೂ ಬ್ಲ್ಯಾಕ್ ಪ್ಯಾಂಟ್ ಧರಿಸಿದ್ದರು.