ಕರ್ನಾಟಕ

karnataka

ETV Bharat / entertainment

ಪುನೀತ್ ಕಂಡ ನಾಲ್ಕು ಕನಸುಗಳ ಮಾಹಿತಿ ಬಿಚ್ಚಿಟ್ಟ ರಾಘವೇಂದ್ರ ರಾಜ್ ಕುಮಾರ್ - AR Rahman Music

ನಟ ಡಾರ್ಲಿಂಗ್​ ಕೃಷ್ಣ ನಟನೆಯ ಲಕ್ಕಿ ಮ್ಯಾನ್ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಲಕ್ಕಿ ಮ್ಯಾನ್ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ.

raghavendra rajkumar
ರಾಘವೇಂದ್ರ ರಾಜ್ ಕುಮಾರ್

By

Published : Aug 24, 2022, 7:10 AM IST

ಪವರ್​ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಪ್ರಭುದೇವ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಲಕ್ಕಿ ಮ್ಯಾನ್‌. ಡಾರ್ಲಿಂಗ್ ಕೃಷ್ಣ, ಸಂಗೀತ ಶೃಂಗೇರಿ, ರೋಶಿನಿ ಪ್ರಕಾಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಎಸ್ ನಾಗೇಂದ್ರ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿ ಮುಂದಿನ ತಿಂಗಳು ಬಿಡುಗಡೆ ಆಗೋದಕ್ಕೆ ಸಜ್ಜಾಗಿರೋ ಲಕ್ಕಿ ಮ್ಯಾನ್ ಚಿತ್ರದ ಟ್ರೈಲರ್ ಕಾರ್ಯಕ್ರಮಕ್ಕೆ ಸ್ಯಾಂಡಲ್​ವುಡ್ ಹಾಗು ಕಾಲಿವುಡ್ ನಟರ‌ ಸಮಾಗಮವಾಗಿತ್ತು.

ಹೌದು, ಕಿಚ್ಚ ಸುದೀಪ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಅವರ ಮಕ್ಕಳಾದ ವಿನಯ್ ರಾಜ್ ಕುಮಾರ್, ಯುವರಾಜ್ ಕುಮಾರ್, ಸಾಧು ಕೋಕಿಲ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ‌ಸಂದೇಶ್ ನಾಗರಾಜ್, ಕಾಲಿವುಡ್ ನಟರಾದ ಪ್ರಭುದೇವ, ವಿಜಯ್ ಅಂಟೋನಿ, ರಾಜ್ ಸುಂದರಂ ಹಾಗು ಪ್ರಭುದೇವ ತಂದೆ‌ ಮುಗೂರು ಸುಂದರಂ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು‌. ಕಿಚ್ಚ ಸುದೀಪ್ ಲಕ್ಕಿ ಮ್ಯಾನ್ ಚಿತ್ರದ ಟ್ರೈಲರ್ ಲಾಂಚ್ ಮಾಡಿದ್ರೆ, ತಮಿಳು ನಟ ವಿಜಯ್ ಅಂಟೋನಿ ಈ ಚಿತ್ರದ ಹಾಡೊಂದನ್ನ ಅನಾವರಣ ಮಾಡಿದರು.

ಲಕ್ಕಿ ಮ್ಯಾನ್ ಚಿತ್ರದ ಪೋಸ್ಟರ್

ಇದನ್ನೂ ಓದಿ:ದೇವರ ರೂಪದಲ್ಲಿ ಕೋಟ್ಯಾಂತರ ಅಭಿಮಾನಿಗಳಿಗೆ ದರ್ಶನ ಕೊಟ್ಟ ಪವರ್ ಸ್ಟಾರ್

ಚಿತ್ರದ ಟ್ರೈಲರ್ ನೋಡಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್,‌ ಪುನೀತ್ ಕಾರ್ಯಕ್ರಮಕ್ಕೆ ಹೋಗುವುದಕ್ಕೆ ಮನಸ್ಸು ಆಗೋಲ್ಲ. ಯಾಕೆಂದರೆ ಅವನ ಕೆಲಸಗಳು, ನಗು ನೋಡುತ್ತಿದ್ರೆ ನಮ್ಮನ್ನ ಕಾಡುತ್ತೆ ಅಂತಾ ಹೇಳಿದರು. ಇದೇ ವೇಳೆ, ಸಹೋದರನ ನಾಲ್ಕು ಆಸೆಗಳನ್ನ ಬಿಚ್ಚಿಟ್ಟರು. ಪುನೀತ್ ರಾಜ್‍ಕುಮಾರ್ ಬದುಕಿದಾಗ ರಾಘಣ್ಣನ ಹತ್ತಿರ ನಾಲ್ಕು ಆಸೆಗಳಿವೆ ಅಂತಾ ಹೇಳಿಕೊಂಡಿದ್ರಂತೆ. 'ನಾಲ್ಕು ಜನರ ಜೊತೆ ಸಿನಿಮಾ ಮಾಡಬೇಕು ಅಂತಾ ಹೇಳಿದ್ರಂತೆ.

ಎ ಆರ್ ರೆಹಮಾನ್

ಮೊದಲನೆಯದು ಅಪ್ಪಾಜಿ ಜೊತೆ ಈಗ ಸಿನಿಮಾ ಮಾಡಬೇಕು ಅನ್ನೋದು, ಎರಡನೇಯದು‌ ಮಣಿರತ್ನಂ ಜೊತೆ ಸಿನಿಮಾ ಮಾಡಬೇಕು ಅನ್ನೋದು, ಎ ಆರ್ ರೆಹಮಾನ್ ಸಂಗೀತದ ಸಿನಿಮಾದಲ್ಲಿ ನಾನು‌‌ ನಟಿಸಬೇಕು, ಹಾಗೂ ಕೊನೆಯದು ಪ್ರಭುದೇವ ಡ್ಯಾನ್ಸ್ ಮಾಡಬೇಕು ಅಂತಾ ಪುನೀತ್ ರಾಜ್‍ಕುಮಾರ್ ಹೇಳಿಕೊಂಡಿದ್ರಂತೆ.

ಇದನ್ನೂ ಓದಿ:ಡ್ಯಾನ್ಸ್ ಕಿಂಗ್ ಪ್ರಭುದೇವ ಜತೆ ಪವರ್ ಸ್ಟಾರ್ ಬೊಂಬಾಟ್ ಡ್ಯಾನ್ಸ್

ತಮ್ಮ ಸಿನಿಮಾಗಳಿಗೆ ಪ್ರಭುದೇವ್ ಸರ್​ ಕೊರಿಯೋಗ್ರಾಫಿ ಮಾಡಿದರೆ ಸಾಕು ಅಂತಾ ಪುನೀತ್ ರಾಜ್ ಕುಮಾರ್ ಸಾಕಷ್ಟು ಬಾರಿ ಪ್ರಭುದೇವ ಅವರನ್ನ ಟ್ರೈ ಮಾಡಿದ್ರಂತೆ. ಆದರೆ, ಅದು ಆಗಿರಲಿಲ್ಲ. ಈಗ ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಪುನೀತ್ ಆಸೆ ಈಡೇರಿದೆ ಅಂತಾ ರಾಘವೇಂದ್ರ ರಾಜ್ ಕುಮಾರ್ ಹೇಳಿದರು.

ಮಣಿರತ್ನಂ

ಲಕ್ಕಿ ಮ್ಯಾನ್ ಚಿತ್ರದ ಟ್ರೈಲರ್​ನಲ್ಲಿ ಪುನೀತ್ ಅವರನ್ನ ದೇವರಂತೆ ತೋರಿಸಿದ್ದಾರೆ. ಪುನೀತ್ ಈಗ ಅವನು ಅಭಿಮಾನಿಗಳ ದೃಷ್ಟಿಯಲ್ಲಿ ದೇವರು ಆಗಿದ್ದಾನೆ. ಇದು ಆ ದೇವರ ನಿರ್ಣಯ ಆಗಿತ್ತು ಅನಿಸುತ್ತೆ‌. ಅವನು ಒಂಬತ್ತು ತಿಂಗಳು ಇರಬೇಕಾದ್ರೆ ಕೃಷ್ಣನ ಪಾತ್ರ ಮಾಡಿದ್ದ. ಈಗ ಈ‌ ಸಿನಿಮಾದಲ್ಲಿ ಭಗವಂತನ ಅವತಾರ ತಾಳಿದ್ದಾನೆ ಅಂತಾ ರಾಘವೇಂದ್ರ ರಾಜ್ ಕುಮಾರ್ ಹೇಳಿದರು.

ಇದನ್ನೂ ಓದಿ:ಗಣೇಶನ ಅವತಾರ ಎತ್ತಿದ ಪುನೀತ್ ರಾಜಕುಮಾರ್: ಅಪ್ಪು ಗಣೇಶ ಮೂರ್ತಿಗಳಿಗೆ ಭಾರಿ ಬೇಡಿಕೆ

ಇದರ ಜೊತೆಗೆ ನಾಗೇಂದ್ರ ಪ್ರಸಾದ್ ಹಾಗೂ ಪ್ರಭುದೇವ ತಂದೆ ಮುಗೂರು ಸುಂದರಂ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಒಂದು ಇಂಟ್ರಸ್ಟಿಂಗ್ ವಿಚಾರ ಹೇಳಿದರು. ನೀನು‌‌ ನನ್ನ ಗೆಲ್ಲಲಾರೆ ಸಿನಿಮಾದಲ್ಲಿ ಮುಗೂರು ಸುಂದರಂ ರಾಜ್ ಹಾಗೂ ಅಪ್ಪಾಜಿ ಒಂದು ತಿಂಗಳು ಡ್ಯಾನ್ಸ್ ಅಭ್ಯಾಸ ಮಾಡಿಸಿ,‌ ಕೊನೆಗೆ ಅಪ್ಪಾಜಿ ಕೈಯಲ್ಲಿ ಡ್ಯಾನ್ಸ್ ಮಾಡಿಸಿದ್ದರು ಅಂತಾ ಹೇಳಿದರು.

ABOUT THE AUTHOR

...view details