ಕರ್ನಾಟಕ

karnataka

By

Published : Jun 10, 2022, 3:34 PM IST

ETV Bharat / entertainment

ಬಿಕಿನಿ, ಬಿಂದಿ ಮತ್ತು ಬಳೆ: 22 ವರ್ಷದ ಹಳೆಯ ಫೋಟೋ ಹಂಚಿಕೊಂಡ ಪ್ರಿಯಾಂಕಾ

ಸಾಮಾಜಿಕ ಜಾಲತಾಣದಲ್ಲಿ 22 ವರ್ಷಗಳ ಹಿಂದಿನ ತಮ್ಮ ಬಿಕಿನಿ ಫೋಟೋ ಶೇರ್​ ಮಾಡುವ ಮೂಲಕ ನಟಿ ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ.

Priyanka shares a throwback bikini photo
Priyanka shares a throwback bikini photo

ಮುಂಬೈ:ಬಾಲಿವುಡ್​, ಹಾಲಿವುಡ್​​ನಲ್ಲಿ ವಿಶೇಷ ಛಾಪು ಮೂಡಿಸಿರುವ ನಟಿ ಪ್ರಿಯಾಂಕಾ ಚೋಪ್ರಾ 22 ವರ್ಷಗಳಷ್ಟು ಹಳೆಯ ಬಿಕಿನಿ ಫೋಟೋವೊಂದನ್ನು ಇನ್​​ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ್ದಾರೆ. 2000ನೇ ಇಸವಿಯಲ್ಲಿ ಮಾಲ್ಡೀವ್ಸ್​​​​ನಲ್ಲಿ ತೆಗೆದಿರುವ ಫೋಟೋ ಇದು.

ಇದನ್ನೂ ಓದಿ:ಫ್ಯಾಷನ್‌ ಶೋಗಳಿಂದ ಪ್ಯಾನ್‌ ಇಂಡಿಯಾ ಸಿನಿಮಾ ವರೆಗೆ; ಇದು ನಟಿ ಸಂಹಿತಾ ವಿನ್ಯಾ ಸಿನಿ ಜರ್ನಿಯ ಹೊಸ ಮೈಲಿಗಲ್ಲು!

ಫೋಟೋಗೆ ಪತಿ ನಿಕ್​ ಜೋನಾಸ್​, ನಟರಾದ ರಣವೀರ್ ಸಿಂಗ್ ಸೇರಿದಂತೆ ಅನೇಕರು ಕಾಮೆಂಟ್​ ಮಾಡಿದ್ದಾರೆ. ಲಕ್ಷಾಂತರ ಅಭಿಮಾನಿಗಳಿಂದ ಲೈಕುಗಳೂ ಸಿಕ್ಕಿವೆ. ವಿಶೇಷವೆಂದರೆ, ಈ ಫೋಟೋ ತೆಗೆದ ವರ್ಷದಲ್ಲೇ (2000) ಪ್ರಿಯಾಂಕಾ 'ವಿಶ್ವ ಸುಂದರಿ' ಕಿರೀಟ ಮುಡಿಗೇರಿಸಿಕೊಂಡಿದ್ದರು.

ಸದ್ಯ ಹಾಲಿವುಡ್​​ನಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ, ಹೊಸ ಹೊಸ ಅವತಾರಗಳಲ್ಲಿ ಮಿಂಚು ಹರಿಸುತ್ತಿದ್ದು, ಇನ್​​​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ABOUT THE AUTHOR

...view details