ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಮಗಳು ಮಾಲ್ತಿ ಜೊತೆಗಿನ ಈಸ್ಟರ್ ಆಚರಣೆಯ ಹಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಈಸ್ಟರ್ ಸಂಡೇ' ಎಂದು ಸಿಂಪಲ್ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಚಿತ್ರಗಳಲ್ಲಿ 'ಮಾಲ್ತಿ ಮೇರಿ ಮೊದಲ ಈಸ್ಟರ್' ಎಂದು ಬರೆದುಕೊಂಡಿರುವ ಟಿ - ಶರ್ಟ್ ಧರಿಸಿರುವ ಪುಟ್ಟ ಕಂದ ಈಸ್ಟರ್ ಎಗ್ಗಳೊಂದಿಗೆ ಆಟ ಆಡುವುದನ್ನು ಕಾಣಬಹುದು.
ಮೊದಲ ಫೋಟೋದಲ್ಲಿ ಮಾಲ್ತಿ ಕೈಯಲ್ಲಿ ಈಸ್ಟರ್ ಎಗ್ಸ್ ಹಿಡಿದು ಪ್ರಿಯಾಂಕಾ ಜೊತೆ ಕ್ಯಾಮರಾಗೆ ಪೋಸ್ ಕೊಡುವುದನ್ನು ಕಾಣಬಹುದು. ಮತ್ತೊಂದು ಚಿತ್ರದಲ್ಲಿ ಅಮ್ಮ ಮಗಳು ಇಬ್ಬರು ಒಂದೇ ರೀತಿಯ ಹಸಿರು ಬಣ್ಣದ ಉಡುಪು ಧರಿಸಿ ಕನ್ನಡಿ ಎದುರು ಸೆಲ್ಫಿ ಕ್ಕಿಕ್ಕಿಸಿಕೊಂಡದನ್ನು ನೋಡಬಹುದು. ಇನ್ನೊಂದು ಫೋಟೋದಲ್ಲಿ ಮಾಲ್ತಿ ಚಾಕೊಲೇಟ್ ಎಗ್ ಟಾಯ್ಸ್ ಕೈಯಲ್ಲಿ ಹಿಡಿದು ಆಟ ಆಡುತ್ತಾ ಅದನ್ನು ತಿನ್ನಲು ಪ್ರಯತ್ನಿಸುತ್ತಿದ್ದಾಳೆ. ಕೊನೆಯ ಚಿತ್ರದಲ್ಲಿ ಪುಟ್ಟ ಕಂದ ತಮ್ಮ ಮನೆಯ ಪಾಂಡ ಮತ್ತು ಜಿನೋ ಹೆಸರಿನ ನಾಯಿಗಳೊಂದಿಗೆ ಲಾನ್ನಲ್ಲಿ ಆಟ ಆಡುತ್ತಿರುವುನ್ನು ಕಾಣಬಹುದು.
ನಟಿ ಹೊಸ ಪಿಕ್ಚರ್ಗಳನ್ನು ಅಪ್ಲೋಡ್ ಮಾಡುತ್ತಿದ್ದಂತೆ ಪ್ಯಾನ್ಸ್ ಬಗೆ ಬಗೆಯ ಬರಹಗಳು ಮತ್ತು ಎಮೋಜಿನೊಂದಿಗೆ ಕಮೆಂಟ್ ವಿಭಾಗವನ್ನು ತುಂಬಿದರು. ನೆಟ್ಟಿಗರೊಬ್ಬರು, "ತಾಯಿಯಂತೆ ಮುದ್ದಾದ ಮಗು" ಎಂದು ಹೇಳಿದ್ದಾರೆ. ಮತ್ತೊಬ್ಬರು, "ಈಸ್ಟರ್ ಸಂಡೇ ಬೇಬಿ ಮಾಲ್ತಿ" ಎಂದು ಶುಭಹಾರೈಸಿದ್ದಾರೆ. ಇನ್ನೊಬ್ಬರು, "ಮಾಲ್ತಿ ಕಂದ ಆಕೆಯ ತಂದೆ ನಿಕ್ ಜೋನಾಸ್ ಪಡಿಯಚ್ಚು. ಒಳ್ಳೆಯದಾಗಲಿ ಬೇಬಿ" ಎಂದು ಕಮೆಂಟ್ ಮಾಡಿದ್ದಾರೆ. ಈಸ್ಟರ್ ದಿನದಂದು ಪ್ರಿಯಾಂಕಾ ತಮ್ಮ ಮಗಳು ಮಾಲ್ತಿಯ ಫೋಟೋವನ್ನು ಶೇರ್ ಮಾಡಿ, ಅಭಿಮಾನಿಗಳಿಗೆ ಈಸ್ಟರ್ ಶುಭಾಶಯವನ್ನು ತಿಳಿಸಿದ್ದರು.