ಕರ್ನಾಟಕ

karnataka

ETV Bharat / entertainment

ಕ್ರಿಸ್‌ಮಸ್ ಸಿದ್ಧತೆ: ಮಗಳು ಮಾಲ್ತಿಯೊಂದಿಗಿನ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ - malti meri chopra Jonas

ಗ್ಲೋಬಲ್​ ಐಕಾನ್​​ ಪ್ರಿಯಾಂಕಾ ಚೋಪ್ರಾ ಕ್ರಿಸ್​ಮಸ್​ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದು ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್​ರೊಂದಿಗಿನ ಫೋಟೋ ಶೇರ್ ಮಾಡಿದ್ದಾರೆ.

Priyanka Chopra shares adorable pics with daughter malti
ಮಗಳು ಮಾಲ್ತಿಯೊಂದಿಗೆ ಪ್ರಿಯಾಂಕಾ ಫೋಟೋ

By

Published : Nov 11, 2022, 12:21 PM IST

Updated : Nov 11, 2022, 2:55 PM IST

ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಭಾರತದಿಂದ ಲಾಸ್​ ಏಂಜಲೀಸ್​ಗೆ ಮರಳಿದ್ದು, ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಗಳು ಮಾಲ್ತಿ ಮೇರಿ ಚೋಪ್ರಾ, ಪತಿ ಜೋನಾಸ್ ಅವರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪತಿ ಮತ್ತು ಮಗಳು ಮಾಲ್ತಿಯೊಂದಿಗೆ ಪ್ರಿಯಾಂಕಾ ಫೋಟೋ

ಪ್ರಿಯಾಂಕಾ ಚೋಪ್ರಾ, ಮೂರು ವರ್ಷಗಳ ಬಳಿಕ ನವೆಂಬರ್ 1 ರಂದು ಭಾರತಕ್ಕೆ ಭೇಟಿ ನೀಡಿದ್ದರು. UNICEFನ ರಾಯಭಾರಿಯಾಗಿ ಉತ್ತರ ಪ್ರದೇಶದ ಕೆಲವು ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡುವುದರ ಜೊತೆಗೆ ತಮ್ಮ ಹೇರ್‌ಕೇರ್ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುವ ಸಲುವಾಗಿ ಕೆಲ ದಿನಗಳ ಕಾಲ ಭಾರತದಲ್ಲಿದ್ದರು. ನವೆಂಬರ್​ 9ರಂದು ಲಾಸ್​ ಏಂಜಲೀಸ್​ಗೆ ಮರಳಿದ್ದು, ಕುಟುಂಬಸ್ಥರೊಂದಿಗೆ ಹೆಚ್ಚಿನ ಸಮಯ ಕಳೆದಿದ್ದಾರೆ. ಈ ವೇಳೆ ಪತಿ ಮತ್ತು ಪುತ್ರಿಯ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ಚಿತ್ರಗಳು ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.

ಪತಿ ಮತ್ತು ಮಗಳು ಮಾಲ್ತಿಯೊಂದಿಗೆ ಪ್ರಿಯಾಂಕಾ ಫೋಟೋ

ಇದನ್ನೂ ಓದಿ:'ಧಾರಾವಿ ಬ್ಯಾಂಕ್': ಸುನೀಲ್ ಶೆಟ್ಟಿ ಜೊತೆ ತೆರೆ ಹಂಚಿಕೊಂಡ ಕನ್ನಡತಿ ಭಾವನಾ ರಾವ್

ಪ್ರಿಯಾಂಕಾ ಭಾರತದಿಂದ ಮರಳಿದ ಬಳಿಕ ಕ್ರಿಸ್‌ಮಸ್ ಹಬ್ಬ ಆಚರಣೆಯ ಸಿದ್ಧತೆಯತ್ತ ಗಮನ ಹರಿಸಿದ್ದಾರೆ. ಮಗಳು ಮಾಲ್ತಿಯೊಂದಿಗೆ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ, ತಮ್ಮ ಪುತ್ರಿಯ ಮೊದಲ ಕ್ರಿಸ್‌ಮಸ್ ತಯಾರಿಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದ್ದಾರೆ. ಇದು ಕೇವಲ ಆರಂಭ, ಸಂಭ್ರಮ ಇನ್ನೂ ಬಹಳಷ್ಟಿದೆ ಎಂದು ಬರೆದಿದ್ದಾರೆ. ಇದಕ್ಕೂ ಮೊದಲು ಮಗಳು ಮಾಲ್ತಿಯೊಂದಿಗೆ ಪ್ರಿಯಾಂಕಾ ಮತ್ತು ಪತಿ ನಿಕ್​ ಆಟ ಆಡುವ ಫೋಟೋ ಹಂಚಿಕೊಂಡಿದ್ದರು.

ಇದನ್ನೂ ಓದಿ:ಲಾಸ್ ಏಂಜಲೀಸ್‌ಗೆ ಮರಳಿದ ಪ್ರಿಯಾಂಕಾ.. ಯೋಗಿ ಸರ್ಕಾರದ ಯೋಜನೆ ಶ್ಲಾಘಿಸಿದ ಚೋಪ್ರಾ

Last Updated : Nov 11, 2022, 2:55 PM IST

ABOUT THE AUTHOR

...view details