ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳು 'ಸಲಾರ್' ಮತ್ತು 'ಡಂಕಿ'. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ 'ಸಲಾರ್' ಮತ್ತು ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಹಾಗೂ ನಿರ್ದೇಶಕ ರಾಜ್ಕುಮಾರ್ ಹಿರಾನಿ ಕಾಂಬೋದಲ್ಲಿ ಮೂಡಿಬರುತ್ತಿರುವ 'ಡಂಕಿ' ಸಿನಿಮಾಗಳು ಈ ವರ್ಷವೇ ತೆರೆ ಕಾಣಲಿವೆ ಎನ್ನಲಾಗಿತ್ತು. ಒಂದೇ ಬಾರಿಗೆ ಎರಡು ಚಿತ್ರಗಳು ಬಿಡುಗಡೆಯಾಗಿ ಥಿಯೇಟರ್ನಲ್ಲಿ ಘರ್ಷಿಸಲಿವೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಆದರೆ ಇದೀಗ 'ಸಲಾರ್' ಬಿಡುಗಡೆಯ ದಿನಾಂಕ ಮುಂದೂಲ್ಪಟ್ಟಿದೆ. ಈ ಹಿಂದೆ ಸಲಾರ್ ಪಾರ್ಟ್-1 ಸೆಪ್ಟೆಂಬರ್ 28ರಂದು ರಿಲೀಸ್ ಆಗುತ್ತೆ ಎಂದು ಹೇಳಲಾಗಿತ್ತು. ಆ ಬಳಿಕ ಕಾರಣಾಂತರಗಳಿಂದ ಬಿಡುಗಡೆ ಮುಂದೂಡಲಾಗಿದೆ ಎಂದು ನಿರ್ಮಾಪಕ ಸಂಸ್ಥೆ ಹೊಂಬಾಳೆ ಫಿಲಂಸ್ ಸ್ಪಷ್ಟನೆ ನೀಡಿತ್ತು. ಹೀಗಾಗಿ ಸಲಾರ್ ಸಿನಿಮಾ ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ ಎಂದು ಚಲನಚಿತ್ರ ವಿಶ್ಲೇಷಕರು ಅಂದಾಜಿಸಿದ್ದರು. ಆದರೆ ಇದೀಗ ಮತ್ತೆ ಪ್ರಭಾಸ್ ಸಿನಿಮಾ ಈ ವರ್ಷ ಬಿಡುಗಡೆಯಾಗುತ್ತಿಲ್ಲ ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ಸಲಾರ್ ಮತ್ತು ಡಂಕಿ ಸಿನಿಮಾಗಳು ಥಿಯೇಟರ್ನಲ್ಲಿ ಘರ್ಷಿಸುವ ಸಾಧ್ಯತೆ ಕಡಿಮೆಯಿದೆ. ಏಕೆಂದರೆ, ಕೆಲವು ಕಾರಣಗಳಿಂದ ಸಲಾರ್ ಫಸ್ಟ್ ಪಾರ್ಟ್ ಅನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಎರಡನೆಯದಾಗಿ ಶಾರುಖ್ ಖಾನ್ ಅವರ ಡಂಕಿ ಬಿಡುಗಡೆ ಸಮಯದಲ್ಲೇ ಸಲಾರ್ ರಿಲೀಸ್ ಮಾಡೋದು ಡೌಟ್. ಏಕೆಂದರೆ ಇತ್ತೀಚೆಗೆ ಕಿಂಗ್ ಖಾನ್ ಅವರ ಜವಾನ್ ತೆಲುಗಿನಲ್ಲೂ ಬ್ಲಾಕ್ಬಸ್ಟರ್ ಆಗಿತ್ತು. ಅಲ್ಲದೇ 2024ರ ಪ್ರಾರಂಭದಲ್ಲೂ ಸಲಾರ್ ಥಿಯೇಟರ್ಗೆ ಬರುವುದಿಲ್ಲ ಎನ್ನಲಾಗಿದೆ. ಹೀಗಿರುವಾಗ ಈ ಎರಡು ಸಿನಿಮಾಗಳು ಒಮ್ಮೆಲೇ ತೆರೆ ಕಾಣುವ ಸಂಭವನೀಯತೆ ಕಡಿಮೆ.
ಇದನ್ನೂ ಓದಿ:ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಸಲಾರ್' ರಿಲೀಸ್ ಮುಂದೂಡಿಕೆ...ತರಣ್ ಆದರ್ಶ್ ಟ್ವೀಟ್ನಲ್ಲೇನಿದೆ?