ಕರ್ನಾಟಕ

karnataka

ETV Bharat / entertainment

ರಾಘವ್​​ ಶರ್ಟ್ ಧರಿಸಿ ಬಂದ ಪರಿಣಿತಿ: ಮದುವೆ ಯಾವಾಗ? ಎಂದು ಪ್ರಶ್ನಿಸಿದ ಫ್ಯಾನ್ಸ್! - ಪರಿಣಿತಿ ರಾಘವ್ ಫೋಟೋ

ದೊಡ್ಡ ಗಾತ್ರದ ವೈಟ್​ ಶರ್ಟ್ ಧರಿಸಿ ನಟಿ ಪರಿಣಿತಿ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಗೆಳೆಯ ರಾಘವ್​ ಶರ್ಟ್ ಧರಿಸಿದ್ದೀರಾ? ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

Parineeti Chopra
ನಟಿ ಪರಿಣಿತಿ ಚೋಪ್ರಾ

By

Published : May 6, 2023, 4:04 PM IST

ಬಾಲಿವುಡ್ ಮತ್ತೊಂದು ಮದುವೆಗೆ ಸಾಕ್ಷಿಯಾಗಲು ಸಜ್ಜಾಗುತ್ತಿದೆ. ಗಟ್ಟಿಮೇಳ ಬಾರಿಸಲು ಸಿದ್ಧತೆಗಳು ನಡೆಯುತ್ತಿವೆ. ಮಾರ್ಚ್​​ ತಿಂಗಳಿನಿಂದ ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಹೆಸರು ಆಮ್​ ಆದ್ಮಿ ಪಕ್ಷದ ಸಂಸದ ರಾಘವ್​ ಚಡ್ಡಾ ಅವರೊಂದಿಗೆ ಕೇಳಿಬರುತ್ತಿದೆ. ಡೇಟಿಂಗ್​, ನಿಶ್ಚಿತಾರ್ಥ, ಮದುವೆ ವದಂತಿಗಳು ದಿನೇ ದಿನೆ ರೆಕ್ಕೆಪುಕ್ಕ ಪಡೆದುಕೊಳ್ಳುತ್ತಿದೆ.

ಪರಿಣಿತಿ ರಾಘವ್​ ನಿಶ್ಚಿತಾರ್ಥ: ಹೌದು, ಈ ಸುಂದರ ಜೋಡಿಯ ನಿಶ್ಚಿತಾರ್ಥ ಮತ್ತು ಮದುವೆಯ ವಿಷಯಗಳು ಮತ್ತೆ ಮತ್ತೆ ಮುನ್ನಲೆಗೆ ಬರುತ್ತಿವೆ. ಪರಿಣಿತಿ - ರಾಘವ್ ಮದುವೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಜೋಡಿ ಮಾತ್ರ ಯಾವುದೇ ಅಧಿಕೃತ ಘೋಷಣೆ ಮಾಡದೇ ತಮ್ಮ ಅಭಿಮಾನಿಗಳ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಆದರೆ ಆಪ್ತ ಮೂಲಗಳ ಪ್ರಕಾರ ಪರಿಣಿತಿ ಮತ್ತು ರಾಘವ್​ ಇದೇ ಮೇ.13ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

ಇತ್ತೀಚೆಗಷ್ಟೇ ಈ ಜೋಡಿ ಮೊಹಾಲಿಯಲ್ಲಿ ಐಪಿಎಲ್ ಪಂದ್ಯವನ್ನು ಒಟ್ಟಿಗೆ ವೀಕ್ಷಿಸಿ ಎಂಜಾಯ್ ಮಾಡಿದ್ದು, ಫೋಟೋ ವಿಡಿಯೋಗಗಳು ಆನ್​ಲೈನ್​ನಲ್ಲಿ ಸದ್ದು ಮಾಡಿದೆ. ಪ್ರೇಕ್ಷಕರು ಪರಿಣಿತಿ ಚೋಪ್ರಾ ಅವರನ್ನು ಭಾಭಿ (ಅತ್ತಿಗೆ) ಎಂದು ಕರೆದಿದ್ದರು. ಅಂದು ಫೋಟೋ, ವಿಡಿಯೋಗಳು ಸಖತ್​ ವೈರಲ್​ ಆಗಿ, ಈ ಜೋಡಿ ಪ್ರೀತಿಯಲ್ಲಿರುವುದು ಖಚಿತ ಎಂದು ಬಹುತೇಕ ನಂಬಲಾಗಿದೆ.

ವದಂತಿಗಳ ನಡುವೆ ಪರಿಣಿತಿ ಪಾಪರಾಜಿಗಳ ಕ್ಯಾಮರಾಗಳಿಗೆ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ. ನಟಿ ಪರಿಣಿತಿ ಚೋಪ್ರಾ ಅವರ ಇಂದಿನ ಫೋಟೋ, ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ಈ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಕೂಲ್ ಲುಕ್‌ನಲ್ಲಿ ಪರಿಣಿತಿ ಚೋಪ್ರಾ:ವೈರಲ್ ಆಗಿರುವ ವಿಡಿಯೋಗಳಲ್ಲಿ ಪರಿಣಿತಿ ಕೂಲ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪರಿಣಿತಿ ಗುಲಾಬಿ ಬಣ್ಣದ ಸಿಂಪಲ್​​ ಗೌನ್​ ಡ್ರೆಸ್‌ ಧರಿಸಿ, ಅದರ ಮೇಲೆ ದೊಡ್ಡ ಗಾತ್ರದ ವೈಟ್​ ಶರ್ಟ್ ಧರಿಸಿದ್ದಾರೆ. ತೆರೆದ ಕೇಶರಾಶಿ, ಸನ್​ಗ್ಲಾಸ್​ ನಟಿಯ ಅಂದ ಹೆಚ್ಚಿಸಿತ್ತು. ಪಾಪರಾಜಿಗಳು ಎಂದಿನಂತೆ ಪರಿಣಿತಿ ಅವರಲ್ಲಿ ಮದುವೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಕ್ಯಾಮರಾ ಮುಂದೆ ತಮ್ಮ ನಗು ನಿಯಂತ್ರಿಸಲು ನಟಿಗೆ ಸಾಧ್ಯವಾಗಿಲ್ಲ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದೆ.

ಇದನ್ನೂ ಓದಿ:ಮಧ್ಯಪ್ರದೇಶದಲ್ಲಿ 'ದಿ ಕೇರಳ ಸ್ಟೋರಿ' ತೆರಿಗೆ ಮುಕ್ತ: ಭಯಾನಕ ಸತ್ಯ ಬಹಿರಂಗಪಡಿಸುವ ಚಿತ್ರ ಎಂದ ಸಿಎಂ

ನಟಿಯ ವಿಡಿಯೋ ವೈರಲ್​ ಆಗುತ್ತಿದೆ. ಅವರು ಧರಿಸಿದ್ದ ದೊಡ್ಡ ಗಾತ್ರದ ವೈಟ್​ ಶರ್ಟ್ ಅಭಿಮಾನಿಗಳ ಗಮನ ಸೆಳೆದಿದೆ. ಈ ಹಿನ್ನೆಲೆ ಕಾಮೆಂಟ್​ ಮೂಲಕ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರಾಘವ್​ ಅವರ ಶರ್ಟ್ ಧರಿಸಿದ್ದಾರೆಂದು ಅಭಿಮಾನಿಗಳು ಕಾಮೆಂಟ್​ ಮಾಡುತ್ತಿದ್ದಾರೆ. ಜೊತೆಗೆ ನಿಶ್ಚಿತಾರ್ಥ, ಮದುವೆ ಬಗ್ಗೆ ಮಾಹಿತಿ ಕೊಡುವಂತೆ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಉಳಿದಂತೆ ಫೈಯರ್, ರೆಡ್​​ ಹಾರ್ಟ್ ಎಮೋಜಿ ಕಾಮೆಂಟ್​ ವಿಭಾಗದಲ್ಲಿ ತುಂಬಿ ತುಳುಕುತ್ತಿದೆ.

ಇದನ್ನೂ ಓದಿ:ಇಳಿಕೆಯಾದ ಸಲ್ಮಾನ್ ಸಿನಿಮಾ ಗಳಿಕೆ: ಅದ್ಧೂರಿ ವೆಚ್ಚದಲ್ಲಿ ತಯಾರಾಗ್ತಿದೆ ಮುಂದಿನ ಚಿತ್ರ!

ABOUT THE AUTHOR

...view details