ಕನ್ನಡ ಚಿತ್ರರಂಗದಲ್ಲಿ ವೀರಗಾಸೆ ಹಾಗೂ ದೇಸಿಕಲೆಯ ಬಗೆಗಿನ ಕಥೆಯನ್ನು ಒಳಗೊಂಡ ಸಿನಿಮಾಗಳು ಬಂದಿವೆ. ಇದೀಗ ಮತ್ತೆ ವೀರಗಾಸೆಯನ್ನು ಪ್ರಮುಖವಾಗಿಟ್ಟುಕೊಂಡು ಸಿನಿಮಾವೊಂದು ಸಿದ್ಧವಾಗಿದೆ. ತಂದೆ ಮತ್ತು ಮಗನ ನಡುವಿನ ಬಾಂಧವ್ಯವನ್ನು ಹೇಳುವ ಚಿತ್ರ ಇದಾಗಿದೆ. ಹೊಸ ಪ್ರತಿಭೆಗಳ 'ಪರಂವಃ' ಚಿತ್ರ ಈಗಾಗಲೇ ಹಾಡು ಮತ್ತು ಟೀಸರ್ ಮೂಲಕ ಸಿನಿ ಪ್ರೇಮಿಗಳ ಮನ ಗೆದ್ದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಶಿವನ ಡಮರುಗದಿಂದ ಬರುವ ಮೊದಲ ಶಬ್ದಕ್ಕೆ ‘ಪರಂವಃ’ ಎಂದು ಕರೆಯಲಾಗುತ್ತದೆ.
ಹೊಸ ಪ್ರತಿಭೆಗಳ 'ಪರಂವಃ' ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಸಾಥ್ ಇದೀಗ ಈ ಬಹುನಿರೀಕ್ಷಿತ ಸಿನಿಮಾಗೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹಾಗೂ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಸಾಥ್ ನೀಡಿದ್ದಾರೆ. ಚಿತ್ರದ ಲಿರಿಕಲ್ ಹಾಡನ್ನು ಹೆಚ್ಡಿಕೆ ಬಿಡುಗಡೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಅಶ್ವಿನಿ ಅವರು ಕೂಡ ಹಾಡು ಮೆಚ್ಚಿಕೊಂಡಿದ್ದು, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
'ಪರಂವಃ' ಚಿತ್ರದ 'ಕಿರುದೀಪ ನೀ' ಎಂಬ ಮೂರನೇ ಲಿರಿಕಲ್ ಹಾಡು 'Saregama Kannada' ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಈ ಹಾಡನ್ನು ಗಾಯಕ ಮೆಹಬೂಬ್ ಸಾಬ್ ಹಾಡಿದ್ದು, ನಾಗೇಶ್ ಕುಂದಾಪುರ, ಸಂಕೇತ್ ಅಂಬಲಿ ಹಾಗೂ ಕಿರಣ್ ಎನ್ ಆರ್ ಪುರ ಸೇರಿ ಸಾಹಿತ್ಯ ಬರೆದಿದ್ದಾರೆ. ಈ ಹಾಡಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:'ಬಾಹುಬಲಿ' ಖ್ಯಾತಿಯ ರಾಜಮೌಳಿ ಭೇಟಿಯಾದರೆ ಅಭಿಮಾನಿಗಳು ಭಾವಪರವಶರಾಗ್ತಾರೆ: ಅನುರಾಗ್ ಕಶ್ಯಪ್ ಸಂತಸ
ಸ್ಟಾರ್ ನಟರ ಸಾಥ್: ಇತ್ತೀಚೆಗೆ ಪರಂವಃ ಚಿತ್ರಕ್ಕಾಗಿ ನಾಗೇಶ್ ಕುಂದಾಪುರ ಬರೆದಿರುವ 'ನೂರಾರೂ ರಂಗಿರೊ' ಎಂಬ ಹಾಡನ್ನು ಲವ್ಲಿ ಸ್ಟಾರ್ ಪ್ರೇಮ್ ಬಿಡುಗಡೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ನಿರ್ದೇಶಕ ಜಡೇಶ್ ಕುಮಾರ್ ಸಹ ಉಪಸ್ಥಿತರಿದ್ದರು. ಈ ಹಾಡನ್ನು ಬಿಡುಗಡೆಗೊಳಿಸಿದ ಬಳಿಕ ನಟ ಪ್ರೇಮ್ ಚಿತ್ರತಂಡಕ್ಕೆ ಶುಭ ಹಾರೈಸಿ ಮಾತನಾಡಿದ್ದರು. ಅದಕ್ಕೂ ಮೊದಲು ಪರಂವಃ ಚಿತ್ರದ ಟೀಸರ್ ಅನ್ನು ಡಾರ್ಲಿಂಗ್ ಕೃಷ್ಣ ಬಿಡುಗಡೆಗೊಳಿಸಿದ್ದರು. ನಟ ಲವ್ಲಿ ಸ್ಟಾರ್ ಪ್ರೇಮ್, ನಿರ್ದೇಶಕ ಗುರು ದೇಶಪಾಂಡೆ ಸೇರಿದಂತೆ ಸ್ಯಾಂಡಲ್ವುಡ್ನ ಗಣ್ಯರು ಮತ್ತು ದಕ್ಷಿಣ ಭಾರತದ ಅನೇಕ ಸೆಲೆಬ್ರಿಟಿಗಳು ಈ ಸಿನಿಮಾಗೆ ಸಾಥ್ ನೀಡಿರುವುದು ವಿಶೇಷ.
ಹೊಸ ಪ್ರತಿಭೆಗಳ 'ಪರಂವಃ' ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಸಾಥ್ ಚಿತ್ರತಂಡ ಹೀಗಿದೆ.. ಚಿತ್ರಕ್ಕೆ ಯುವ ನಟ ಪ್ರೇಮ್ ಸಿಡ್ಗಲ್ ನಾಯಕನಾಗಿದ್ದಾರೆ. ಮೈಸೂರು ಮೂಲದ ಮೈತ್ರಿ ನಾಯಕಿ ಪಾತ್ರ ಮಾಡಿದ್ದು, ತಂದೆ ಪಾತ್ರವನ್ನು ರಂಗಭೂಮಿ ಕಲಾವಿದ ಗಣೇಶ್ ಮಾಸ್ಟರ್ ನಿರ್ವಯಿಸಿದ್ದಾರೆ. ಸಂತೋಷ್ ಕೈದಾಳ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಎ.ಎಸ್.ಶೆಟ್ಟಿ ಛಾಯಾಗ್ರಹಣ, ಅಪರಿಜಿತ್ ಹಾಗೂ ಜೋಸ್ ಜೊಸ್ಸಿ ಸಂಗೀತವಿದೆ. ಉಳಿದ ತಾರಾಗಣದಲ್ಲಿ ಶೃತಿ, ಮುಕುಂದ ಮೈಗೂರ್, ಅವಿನಾಶ್, ಮಾಸ್ಟರ್ ಮಿತುನ್, ಮಾಸ್ಟರ್ ಭುವನ್, ಮುಂತಾದವರಿದ್ದಾರೆ. ಪೀಪಲ್ ವರ್ಲ್ಡ್ ಫಿಲಂಸ್ ಲಾಂಛನದಲ್ಲಿ 200 ಜನ ಸ್ನೇಹಿತರು ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರ ಜುಲೈ 21ರಂದು ತೆರೆಗೆ ಬರಲಿದೆ.
ಇದನ್ನೂ ಓದಿ:Salaar: 100 ಮಿಲಿಯನ್ ವೀಕ್ಷಣೆ ದಾಟಿದ 'ಸಲಾರ್' ಟೀಸರ್; ಆಗಸ್ಟ್ ಕೊನೆಯಲ್ಲಿ ಟ್ರೇಲರ್ಗೆ ಮುಹೂರ್ತ