ಕರ್ನಾಟಕ

karnataka

ETV Bharat / entertainment

ಅಕ್ಷಯ್​ ಕುಮಾರ್​ ಅಭಿನಯದ ಓಎಂಜಿ 2 ಬಿಡುಗಡೆ: ಗದರ್​ 2 ಜೊತೆ ಪೈಪೋಟಿ - ಸನ್ನಿ ಡಿಯೋಲ್

ಬಹುನಿರೀಕ್ಷಿತ ಓ ಮೈ ಗಾಡ್​ 2 ಮತ್ತು ಗದರ್​ 2 ಏಕಕಾಲಕ್ಕೆ ತೆರೆಕಂಡಿದ್ದು, ಬಾಕ್ಸ್​ ಆಫೀಸ್​ ಕಲೆಕ್ಷನ್​ ವಿಚಾರದಲ್ಲಿ ಪೈಪೋಟಿ ನಡೆಸಲಿದೆ.

OMG 2 Gadar 2 box office fight
ಓಎಂಜಿ 2 ಬಿಡುಗಡೆ: ಗದರ್​ 2 ಜೊತೆ ಪೈಪೋಟಿ

By

Published : Aug 11, 2023, 12:26 PM IST

ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಅಭಿನಯದ ಬಹುನಿರೀಕ್ಷಿತ ಚಿತ್ರ ಓ ಮೈ ಗಾಡ್​ 2 ಫೈನಲಿ ಪ್ರೇಕ್ಷಕರಿಗೆ ದರ್ಶನ ಕೊಟ್ಟಿದೆ. ಅಕ್ಕಿ ಅಭಿನಯದ ಮತ್ತೊಂದು ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರ ಇದಾಗಿದ್ದು, ಅಮಿತ್​ ರೈ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಪಂಕಜ್​ ತ್ರಿಪಾಠಿ, ಯಾಮಿ ಗೌತಮ್​ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಲೈಂಗಿಕ ಶಿಕ್ಷಣದ ಕುರಿತ ಕಥೆಯನ್ನಾಧರಿಸಿದೆ.

ಬಾಲಿವುಡ್​ ಬಹುನಿರೀಕ್ಷಿತ ಚಿತ್ರಗಳು ಒಂದೇ ದಿನ ತೆರೆಕಂಡಿದ್ದು, ಬಾಕ್ಸ್ ಆಫೀಸ್​ನಲ್ಲಿ ಸೆಣಸಾಟ ನಡೆಸೋದು ಖಚಿತ. ಹೌದು, ಸನ್ನಿ ಡಿಯೋಲ್​ ಮತ್ತು ಅಮಿಷಾ ಪಟೇಲ್​ ನಟನೆಯ ಗದರ್ 2 ಕೂಡ ಇಂದೇ ತೆರೆಕಂಡಿದೆ. ಆಗಸ್ಟ್​ 11ರಂದು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರದಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಿದ್ದು, ಬಾಕ್ಸ್​ ಆಫೀಸ್​ನಲ್ಲಿ ಮುಖಾಮುಖಿ ಆಗಲಿದೆ. ಪ್ರೇಕ್ಷಕರು ಯಾವ ಚಿತ್ರಕ್ಕೆ ಜೈ ಅಂತಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಓ ಮೈ ಗಾಡ್​ 2 ಸಿನಿಮಾ

  • ಪ್ರದರ್ಶನ ಕಾಣುತ್ತಿರುವ ಪರದೆಗಳ ಸಂಖ್ಯೆ: 1,600
  • ಬಜೆಟ್​​: ಅಂದಾಜು 150 ಕೋಟಿ ರೂಪಾಯಿ
  • ಸರ್ಟಿಫಿಕೇಟ್​: ಎ
  • ಸಿನಿಮಾ ರನ್​ ಟೈಮ್​​: 156 ನಿಮಿಷ
  • ಮೊದಲ ದಿನದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಅಂದಾಜು: ಭಾರತದಲ್ಲಿ 9 ಕೋಟಿ ರೂ.

ಗದರ್​ 2 ಸಿನಿಮಾ

  • ಪ್ರದರ್ಶನ ಕಾಣುತ್ತಿರುವ ಪರದೆಗಳ ಸಂಖ್ಯೆ: 3,600
  • ಬಜೆಟ್​​: ಅಂದಾಜು 100 ಕೋಟಿ ರೂಪಾಯಿ
  • ಸರ್ಟಿಫಿಕೇಟ್​: ಯು/ಎ
  • ಸಿನಿಮಾ ರನ್​ ಟೈಮ್​: 170 ನಿಮಿಷ
  • ಮೊದಲ ದಿನದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಅಂದಾಜು: ಭಾರತದಲ್ಲಿ 35 ಕೋಟಿ ರೂ.

ಇದನ್ನೂ ಓದಿ:ಬಹುನಿರೀಕ್ಷೆಯಿಂದ ತೆರೆ ಕಂಡ 'ಗದರ್ 2': ಸಿನಿ ಪ್ರೇಮಿಗಳಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ ಬ್ಲಾಕ್​ಬಸ್ಟರ್​ ಸೀಕ್ವೆಲ್​

ಸಿನಿಮಾ ಸಕ್ಷಸ್​ ವಿಚಾರದಲ್ಲಿ ಹಿನ್ನೆಡೆ ಕಂಡಿರುವ ಅಕ್ಷಯ್​ ಕುಮಾರ್​ ಅವರಿಗೆ 'ಓ ಮೈ ಗಾಡ್​ 2' ಮೂಲಕ ಗೆಲುವಿನ ಅವಶ್ಯಕತೆ ಇದೆ. ಸದ್ಯ ಸಿನಿಮಾವನ್ನು ಸಿನಿಪ್ರಿಯರು ಮತ್ತು ವಿಮರ್ಶಕರು ಖುಷಿಯಿಂದ ಸ್ವೀಕರಿಸಿದ್ದಾರೆ. ಮೂವರೂ ಕಲಾವಿದರ ನಟನೆ, ಸಂಭಾಷಣೆಗೆ ಮೆಚ್ಚುಗೆ ಸೂಚಿಸಲಾಗುತ್ತಿದೆ. ಅಭಿಮಾನಿಗಳು ಸಿನಿಮಾ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ.

ಇದನ್ನೂ ಓದಿ:ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ 'ಜೈಲರ್​': ಮೊದಲ ದಿನವೇ 50 ಕೋಟಿ ರೂ. ಬಾಚಿದ ರಜಿನಿ ಸಿನಿಮಾ

ಅಕ್ಷಯ್​ ಶಿವನ ಪಾತ್ರದಲ್ಲಿ, ಪಂಕಜ್​ ಶಿವಭಕ್ತ ಪಾತ್ರದಲ್ಲಿ, ಯಾಮಿ ವಕೀಲೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರಗಳು ಮತ್ತು ಕಥೆ ರವಾನಿಸಿದ ರೀತಿಗೆ ಅಭಿಮಾನಿಗಳು ಸೋಷಿಯಲ್​ ಮೀಡಿಯಾಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಥೆ ಕೂಡ ಸ್ವೀಕರಿಸಿದ್ದು, ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಎಂದು ವೀಕ್ಷಕರು ತಿಳಿಸಿದ್ದಾರೆ. 150 ಕೋಟಿ ರೂ. ಬಜೆಟ್​ನ ಸಿನಿಮಾ ಭಾರತದಲ್ಲಿ 9 ಕೋಟಿ ರೂ. ಸಂಪಾದಿಸಲಿದೆ ಎಂದು ವರದಿಯಾಗಿದೆ. ಗದರ್​ 2 ಸಿನಿಮಾಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಆಗಿದೆ. ಈ ಎರಡೂ ಸಿನಿಮಾಗಳ ಬಾಕ್ಸ್​ ಆಫೀಸ್​ ಭವಿಷ್ಯ ನಾಳೆ ಮುಂಜಾನೆ ತಿಳಿಯಲಿದೆ.

ABOUT THE AUTHOR

...view details