ಕರ್ನಾಟಕ

karnataka

ETV Bharat / entertainment

ರಾಮೋಜಿಗೆ NTR ಸೆಂಚೂರಿ ಅವಾರ್ಡ್​.. ಈಟಿವಿಗೆ ಅತ್ಯುತ್ತಮ ಚಾನಲ್ ಪ್ರಶಸ್ತಿ

ಫಿಲ್ಮ್ ಅನಾಲಿಟಿಕಲ್ ಅಂಡ್ ಅಪ್ರಿಷಿಯೇಷನ್ ​​ಸೊಸೈಟಿ ಪ್ರಶಸ್ತಿ ಪ್ರದಾನ ಸಮಾರಂಭ ಹೈದರಾಬಾದ್‌ನಲ್ಲಿ ನಡೆಯಿತು. ಪ್ರತಿಷ್ಠಿತ ಎನ್ಟಿಆರ್ ಶತಮಾನೋತ್ಸವ ಸಿಲ್ವರ್ ಕ್ರೌನ್ ಚಲನಚಿತ್ರ ಪ್ರಶಸ್ತಿಯನ್ನು ಪ್ರಸಿದ್ಧ ರಾಮೋಜಿ ಗ್ರೂಪ್ ಆಫ್ ಕಂಪನಿಗಳ ಮುಖ್ಯಸ್ಥ ರಾಮೋಜಿ ರಾವ್ ಅವರಿಗೆ ಘೋಷಿಸಲಾಯಿತು. ಅತ್ಯುತ್ತಮ ಟಿವಿ (ಚಲನಚಿತ್ರ) ವಿಭಾಗದಲ್ಲಿ ಈಟಿವಿ ಚಾನೆಲ್‌ಗೆ ಪ್ರಶಸ್ತಿ ನೀಡಲಾಗಿದೆ.

NTR CENTENARY SILVER CROWN FILM AWARD  FILM AWARD goes to RAMOJI RAO  RAMOJI RAO news  ರಾಮೋಜಿಗೆ NTR ಸೆಂಚೂರಿ ಅವಾರ್ಡ್  ಈಟಿವಿಗೆ ಅತ್ಯುತ್ತಮ ಚಾನಲ್ ಪ್ರಶಸ್ತಿ  ಫಿಲ್ಮ್ ಅನಾಲಿಟಿಕಲ್ ಅಂಡ್ ಅಪ್ರಿಷಿಯೇಷನ್ ​​ಸೊಸೈಟಿ  ಪ್ರಶಸ್ತಿ ಪ್ರದಾನ ಸಮಾರಂಭ ಹೈದರಾಬಾದ್‌  ಎನ್ಟಿಆರ್ ಶತಮಾನೋತ್ಸವ ಸಿಲ್ವರ್ ಕ್ರೌನ್  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಲನಚಿತ್ರ ನಟ  ಪ್ರಸಿದ್ಧ ರಾಮೋಜಿ ಸಮೂಹ ಕಂಪನಿ
ರಾಮೋಜಿಗೆ NTR ಸೆಂಚೂರಿ ಅವಾರ್ಡ್

By

Published : May 8, 2023, 2:02 PM IST

ಹೈದರಾಬಾದ್​ ತೆಲಂಗಾಣ: ಫಿಲ್ಮ್ ಅನಾಲಿಟಿಕಲ್ ಅಂಡ್ ಅಪ್ರಿಷಿಯೇಷನ್ ​​ಸೊಸೈಟಿ (ಎಫ್‌ಎಎಸ್) ಪ್ರಶಸ್ತಿ ಪ್ರದಾನ ಸಮಾರಂಭವು ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಲನಚಿತ್ರ ನಟ ಮುರಳಿ ಮೋಹನ್ ಅವರು FASS ನ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ಧರ್ಮರಾವ್ ಅವರೊಂದಿಗೆ ವಿಜೇತರಿಗೆ ಪ್ರಶಸ್ತಿಗಳನ್ನು ತಮ್ಮ ಕೈಗಳಿಂದ ವಿತರಿಸಿದರು.

ರಾಮೋಜಿಗೆ NTR ಸೆಂಚೂರಿ ಅವಾರ್ಡ್

ಪ್ರತಿಷ್ಠಿತ ಎನ್ಟಿಆರ್ ಶತಮಾನೋತ್ಸವದ ಸಿಲ್ವರ್ ಕ್ರೌನ್ ಚಲನಚಿತ್ರ ಪ್ರಶಸ್ತಿಯನ್ನು ಪ್ರಸಿದ್ಧ ರಾಮೋಜಿ ಸಮೂಹ ಕಂಪನಿಗಳ ಮುಖ್ಯಸ್ಥ ರಾಮೋಜಿ ರಾವ್ ಅವರಿಗೆ ಘೋಷಿಸಲಾಯಿತು. ಈಟಿವಿ ಮುಖ್ಯ ನಿರ್ಮಾಪಕ ಅಜಯ್ ಶಾಂತಿ ಅವರ ಪರವಾಗಿ ಈ ಪ್ರಶಸ್ತಿ ಸ್ವೀಕರಿಸಿದರು. ಮತ್ತೊಂದೆಡೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಟಾಲಿವುಡ್‌ನ ಹಿರಿಯ ನಾಯಕ ಸುಮನ್‌ಗೆ ಪ್ರದಾನ ಮಾಡಿದರೆ, ಅಂದಿನ ಹಿರಿಯ ನಟಿ ರೋಜಾ ರಮಣಿ ಹಾಗೂ ಟಾಲಿವುಡ್‌ನ ಖ್ಯಾತ ಸಾಹಿತಿ ಪರುಚೂರಿ ಗೋಪಾಲಕೃಷ್ಣ ವೇದಿಕೆಗೆ ಆಗಮಿಸಿ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿದರು.

ಇದಲ್ಲದೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಕ್ಕಿನೇನಿ-ಫಾಸ್​ ರಜತ ಮಹೋತ್ಸವ ಹಾಗೂ ಮಹಿಳಾ ರಜತ ಮಯೂರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅಕ್ಕಿನೇನಿ -ಫಾಸ್ ರಜತ ಮಹೋತ್ಸವ, ಮಹಿಳಾ ರಜತ ಮಯೂರ ಪ್ರಶಸ್ತಿಗಳನ್ನು ಅತ್ಯುತ್ತಮ ಚಿತ್ರ ಪೆಳ್ಳಿಸಂದಡಿ, ಅತ್ಯುತ್ತಮ ನಿರ್ದೇಶಕಿ ಗೌರಿ ರೋಣಂಕಿ, ಅತ್ಯುತ್ತಮ ಮಹಿಳಾ ನಿರ್ಮಾಪಕಿ ಎನ್.ಆರ್. ಅನುರಾಧಾ ದೇವಿ, ಅತ್ಯುತ್ತಮ ನಟಿ ದಿವ್ಯಾ ವಾಣಿ, ಅತ್ಯುತ್ತಮ ಗಾಯಕಿ ಪ್ರಶಸ್ತಿ ಮಾಳವಿಕಾ ಮತ್ತು ವಂಶಿ ಇಂಟರ್​ನ್ಯಾಷನಕ್​ ಪ್ರತಿನಿಧಿ ವಂಶಿ ರಾಮರಾಜು ಅವರು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸಂಸ್ಥೆ ಪ್ರಶಸ್ತಿಗಳನ್ನು ಪಡೆದರು. ಅತ್ಯುತ್ತಮ ಟಿವಿ (ಚಲನಚಿತ್ರ) ವಿಭಾಗದಲ್ಲಿ ಈಟಿವಿ ಚಾನೆಲ್‌ಗೆ ಪ್ರಶಸ್ತಿ ನೀಡಲಾಗಿದೆ.

ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಸಿ. ಕಲ್ಯಾಣ್ ಅವರು ದಿವಂಗತ ನಿರ್ದೇಶಕ ದಾಸರಿ-ಫಾಸ್ ರಜತ ಮಹೋತ್ಸವ ಮತ್ತು ರಜತ ನಂದಿ ಸಿನಿ ಪ್ರಶಸ್ತಿಗಳು ಘೋಷಿಸಿದ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಇವರೊಂದಿಗೆ ನಿರ್ದೇಶಕ ರೇಲಂಗಿ ನರಸಿಂಹರಾವ್ ಅವರಿಗೂ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. 2018 ರಿಂದ 2023 ರವರೆಗಿನ ಅತ್ಯುತ್ತಮ ಚಲನಚಿತ್ರಗಳಿಗೆ ಈ ಪ್ರಶಸ್ತಿಗಳನ್ನು ನೀಡಲಾಯಿತು. 2018 ರಲ್ಲಿ 'ಕೇರಾಫ್ ಕಂಚರಪಾಲೆಂ', 2019 ರಲ್ಲಿ 'ಫಲಕ್ನುಮಾ ದಾಸ್', 2020 ರಲ್ಲಿ 'ಪಲಾಸ' ಚಿತ್ರವು ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿವೆ.

2021ರಲ್ಲಿ ‘ಜಾತಿರತ್ನಲು’ ಚಿತ್ರದ ನಿರ್ಮಾಪಕಿ ಪ್ರಿಯಾಂಕಾ ದತ್, 2022ರಲ್ಲಿ ‘ಡಿಜೆ ಟಿಲ್ಲು’ ಚಿತ್ರಕ್ಕೆ ಸೂರ್ಯದೇವರ ನಾಗವಂಶಿ, 2023ರಲ್ಲಿ ಬಳಗಂ ಚಿತ್ರದ ನಿರ್ಮಾಪಕ ಹರ್ಷಿತ್ ರೆಡ್ಡಿ ಆಯಾ ಚಿತ್ರಗಳಿಗೆ ಪ್ರಶಸ್ತಿ ಪಡೆದಿದ್ದಾರೆ. ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದ್ದು, ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಚಿತ್ರರಂಗದ ಗಣ್ಯರು ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಅಧ್ಯಕ್ಷ ಲಯನ್ ವಿಜಯಕುಮಾರ್, ವ್ಯವಸ್ಥಾಪಕ ಸದಸ್ಯರಾದ ಬಂಡಾರು ಸುಬ್ಬರಾವ್, ಶಂಕರ್ ರಾವ್, ರಾಮಕೃಷ್ಣ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಓದಿ:ಅಮೆರಿಕದಲ್ಲಿ ಗುಂಡಿನ ದಾಳಿ: ತೆಲಂಗಾಣ ನ್ಯಾಯಾಧೀಶರ ಮಗಳು ಸಾವು

ABOUT THE AUTHOR

...view details