ನವೆಂಬರ್ 20ರಂದು ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಆರಂಭವಾಗಿದ್ದು, ಡಿಸೆಂಬರ್ 18 ರವರೆಗೆ ನಡೆಯಲಿದೆ. ಜಾಗತಿಕ ಹಿರಿಮೆಯ ಕ್ರೀಡಾಕೂಟದಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ಆಕರ್ಷಣೆಯ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದಾರೆ.
ನಟಿ, ನೃತ್ಯಗಾರ್ತಿ ನೋರಾ ಫತೇಹಿ ಫಿಫಾ ವರ್ಲ್ಡ್ ಫ್ಯಾನ್ ಫೆಸ್ಟಿವಲ್‌ನಲ್ಲಿ 'ಲೈಟ್ ದಿ ಸ್ಕೈ' ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ. ತನ್ನ ನೃತ್ಯದ ಮೂಲಕ ಎಲ್ಲರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. ಕತಾರ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಭಾರತೀಯರನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರ ನೃತ್ಯದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಪ್ರದರ್ಶನದ ವೇಳೆ ನೋರಾ ಫತೇಹಿ ಹೆಮ್ಮೆಯಿಂದ ದೇಶದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಸರತಿ ಸಾಲಿನಲ್ಲಿ ಬೀಸುತ್ತಾ ಜೈ ಹಿಂದ್ ಎಂದು ಘೋಷಣೆ ಕೂಗಿದ್ದು, ಪ್ರೇಕ್ಷಕರು ಸಹ ಜೈ ಹಿಂದ್ ಘೋಷಣೆಗಳನ್ನು ಮೊಳಗಿಸಿದರು.