ಕರ್ನಾಟಕ

karnataka

ETV Bharat / entertainment

ರಶ್ಮಿಕಾ ಮಂದಣ್ಣರನ್ನು ನಿರ್ಲಕ್ಷಿಸಿದ್ರಾ ಶ್ರದ್ಧಾ ಕಪೂರ್​? ವಿಡಿಯೋ ನೋಡಿ ನೆಟ್ಟಿಗರು ಹೀಗಂದ್ರು! - ರಶ್ಮಿಕಾ ಶ್ರದ್ಧಾ ಫೈಟ್​

ಉದ್ಯಮಿ ಅಂಬಾನಿ ನಿವಾಸದಿಂದ ರಶ್ಮಿಕಾ ಮಂದಣ್ಣ ಮತ್ತು ಶ್ರದ್ಧಾ ಕಪೂರ್​ ಅವರ ವಿಡಿಯೋ ಹೊರಬಿದ್ದಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Rashmika Mandanna Shraddha Kapoor
ರಶ್ಮಿಕಾ ಮಂದಣ್ಣ ಶ್ರದ್ಧಾ ಕಪೂರ್​

By ETV Bharat Karnataka Team

Published : Sep 20, 2023, 1:18 PM IST

ಮಂಗಳವಾರ ಸಂಜೆ ಉದ್ಯಮಿ ಅಂಬಾನಿ ನಿವಾಸದಲ್ಲಿ ಅದ್ಧೂರಿ ಗಣೇಶ ಚತುರ್ಥಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಾಲಿವುಡ್​ನ ಗಣ್ಯಾತಿಗಣ್ಯರು ಆಗಮಿಸಿದ್ದರು. ನಟಿಮಣಿಯರಾದ ರಶ್ಮಿಕಾ ಮಂದಣ್ಣ ಹಾಗು ಶ್ರದ್ಧಾ ಕಪೂರ್​ ಕೂಡ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಆದ್ರೆ ಇಬ್ಬರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ಮನಸ್ತಾಪಗಳಿವೆಯಾ? ಎಂಬ ಗುಮಾನಿ ಎದ್ದಿದೆ. ರಶ್ಮಿಕಾ ಮಂದಣ್ಣರನ್ನು ಬೇಕಂತಲೇ ನಿರ್ಲಕ್ಷಿಸಿದ್ರಾ ಶ್ರದ್ಧಾ ಕಪೂರ್​? ಎನ್ನುವುದು ಸೋಷಿಯಲ್​ ಮೀಡಿಯಾದಲ್ಲಿ ನೆಟ್ಟಿಗರ ಅನುಮಾನ.

ಅಂಬಾನಿ ನಿವಾಸದಲ್ಲಿ ನಡೆದ ಗಣೇಶ ಹಬ್ಬಕ್ಕಾಗಿ ಬಾಲಿವುಡ್​ ನಟಿ ಶ್ರದ್ಧಾ ಕಪೂರ್​​ ಬಿಳಿ ಸಾಂಪ್ರದಾಯಿಕ ಉಡುಗೆ ಧರಿಸಿದ್ರೆ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಆಫ್ ವೈಟ್​ ಸೀರೆಯಲ್ಲಿ ಕಂಗೊಳಿಸಿದ್ರು. ಇಬ್ಬರೂ ಚೆಲುವೆಯರ ಫೋಟೋ, ವಿಡಿಯೋಗಳು ಸೋಷಿಯಲ್​ ಮಿಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಪಾಪರಾಜಿಗಳು ಕ್ಲಿಕ್ಕಿಸಿರುವ ಫೋಟೋ, ವಿಡಿಯೋಗಳು ಆನ್​ಲೈನ್​ನಲ್ಲಿ ವೈರಲ್​ ಆಗುತ್ತಿವೆ. ಇದರಲ್ಲಿ ನೆಟ್ಟಿಗರ ಗಮನ ಸೆಳೆದಿದ್ದು ಮಾತ್ರ ನಟಿಮಣಿಯರ ಮುಖಾಮುಖಿ ಸೀನ್​​. ಪೂಜಾಸ್ಥಳದ ಹೊರಗೆ ಇಬ್ಬರೂ ಮುಖಾಮುಖಿಯಾಗಿ ಮುನ್ನಡೆದಿದ್ದಾರೆ. ಅಕ್ಕಪಕ್ಕದಲ್ಲೇ ಹಾದು ಹೋದರೂ ಇಬ್ಬರೂ ಒಬ್ಬರನ್ನೊಬ್ಬರು ನೋಡಿಲ್ಲ. ಮಾತು ಬಿಡಿ, ಒಂದು ಸ್ಮೈಲ್​ ಕೂಡ ಇರಲಿಲ್ಲ. ಅದರಲ್ಲೂ ಶ್ರದ್ಧಾ ಕಪೂರ್​ ಅವರೇ ರಶ್ಮಿಕಾ ಮಂದಣ್ಣರನ್ನು ನಿರ್ಲಕ್ಷಿಸಿದ್ದಾರೆ ಎಂದು ಹೆಚ್ಚಿನ ಸಂಖ್ಯೆಯ ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪಾಪರಾಜಿಗಳು ಸೆರೆಹಿಡಿದಿರುವ ಈ ದೃಶ್ಯ ಆನ್​​ಲೈನ್​ನಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ:'ರಾಗ್‌ನೀತಿ' ಮದುವೆ ಸಂಭ್ರಮ ಹೇಗಿದೆ ಗೊತ್ತಾ?: ವೆಡ್ಡಿಂಗ್​ ಥೀಮ್​, ಸಂಗೀತ, ಆರತಕ್ಷತೆಯ ಸಂಪೂರ್ಣ ಮಾಹಿತಿ

ರಶ್ಮಿಕಾ ಮಂದಣ್ಣ ಹಾಗು ಶ್ರದ್ಧಾ ಕಪೂರ್ ನಡುವಿನ ಅಂತರವನ್ನು ಅಭಿಮಾನಿಗಳು ಗುರುತಿಸಿದ್ದು, ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಹಲವು ಊಹಾಪೋಹಗಳು ಹುಟ್ಟಿಕೊಂಡಿವೆ. ಶ್ರದ್ಧಾ ಅವರು ಉದ್ದೇಶಪೂರ್ವಕವಾಗಿಯೇ ರಶ್ಮಿಕಾರನ್ನು ನಿರ್ಲಕ್ಷಿಸಿದರೇ ಎಂದು ಹಲವರು ಪ್ರಶ್ನಿಸಿದ್ದಾರೆ. ಒಂದು ಚಿಕ್ಕ ನಗುವನ್ನೂ ಕೂಡ ವಿನಿಮಯ ಮಾಡಿಕೊಳ್ಳಲಿಲ್ಲ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಲವರು ಟೀಕೆ ಮಾಡಿದ್ರೆ, ಕೆಲವರು ನಟಿಯರ ಪರ ನಿಂತಿದ್ದಾರೆ. ಅವರು ಒಬ್ಬರನ್ನೊಬ್ಬರು ಗುರುತಿಸದಿರಬಹುದು ಅಥವಾ ಹೆಚ್ಚು ಪರಿಚಯ ಇಲ್ಲದಿರಬಹುದು ಎಂದು ನಟಿಯರ ಪರ ಬ್ಯಾಟಿಂಗ್​ ಮಾಡಿದ್ದಾರೆ. ​

ಇದನ್ನೂ ಓದಿ:ಶಾರುಖ್​ ಸ್ಟಾರ್​​ಡಮ್​ ಪವರ್​​: ಚಿತ್ರರಂಗದವರ ಹುಬ್ಬೇರಿಸಿದ 'ಜವಾನ್' ಕಲೆಕ್ಷನ್!

ನಟಿಯರ ಕೆಲಸದ ವಿಚಾರ ಗಮನಿಸುವುದಾದರೆ, ಶ್ರದ್ಧಾ ಕಪೂರ್​ ಕೊನೆಯದಾಗಿ ತು ಜೂಟಿ ಮೆ ಮಕ್ಕರ್​​ ಸಿನಿಮಾದಲ್ಲಿ ಕಾಣಿಸಿಕೊಂಡರು. ಲವ್ ರಂಜನ್​ ನಿರ್ದೇಶನದ ಸಿನಿಮಾದಲ್ಲಿ ರಣ್​ಬೀರ್​ ಕಪೂರ್​ ಜೊತೆ ಸ್ಕ್ರೀನ್​ ಶೇರ್ ಮಾಡಿದ್ದರು. ಪ್ರೇಕ್ಷಕರನ್ನು ರಂಜಿಸುವಲ್ಲಿ ಸಿನಿಮಾ ಯಶಸ್ವಿ ಆಗಿದೆ. ಇನ್ನೂ ರಶ್ಮಿಕಾ ಮಂದಣ್ಣ ಕೊನೆಯದಾಗಿ ಸೀತಾ ರಾಮಂ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಮುಂದೆ ರಣ್​ಬೀರ್​ ಕಪೂರ್​ ಜೊತೆಗಿನ ಅನಿಮಲ್​ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪುಷ್ಪ 2 ಸಿನಿಮಾ ಶೂಟಿಂಗ್​ ಸಹ ಚುರುಕುಗೊಂಡಿದೆ. ​​

ABOUT THE AUTHOR

...view details