ಕರ್ನಾಟಕ

karnataka

ETV Bharat / entertainment

ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಬಹುನಿರೀಕ್ಷಿತ ಕಬ್ಜ ಚಿತ್ರದ ಟ್ರೈಲರ್ ಬಿಡುಗಡೆ ಮುಹೂರ್ತ ಫಿಕ್ಸ್ - ಕಬ್ಜ ಚಿತ್ರದ ಎಲ್ಲಾ ಭಾಷೆಗಳ ಟ್ರೇಲರ್

ಟೀಸರ್​, ಹಾಡುಗಳಿಂದಲೇ ಚಿತ್ರದ ಝಲಕ್​ ನೀಡುತ್ತಿರುವ ನಿರ್ದೇಶಕ ಆರ್​ ಚಂದ್ರು ಅವರು ಇದೀಗ ಕಬ್ಜ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲು ಮುಹೂರ್ತ ಫಿಕ್ಸ್​ ಮಾಡಿದ್ದಾರೆ.

Kabzaa movie poster
ಕಬ್ಜ ಚಿತ್ರದ ಪೋಸ್ಟರ್​

By

Published : Mar 2, 2023, 5:52 PM IST

Updated : Mar 2, 2023, 5:58 PM IST

ಕನ್ನಡ ಚಿತ್ರರಂಗದ ವಜ್ರೇಶ್ವರಿ ಸಿನಿಮಾ ನಿರ್ಮಾಣ ಸಂಸ್ಥೆಯಿಂದ ಹಿಡಿದು, ತೆಲುಗು, ತಮಿಳು ಹಾಗು ಬಾಲಿವುಡ್ ಚಿತ್ರರಂಗದ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಹೆಚ್ಚು ಸೌಂಡ್ ಮಾಡುತ್ತಿರುವ ಸಿನಿಮಾ ಕಬ್ಜ. ನಿರ್ದೇಶಕ ಆರ್ ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಹಾಗು ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿರೋ ಕಬ್ಜ ಚಿತ್ರದ ಕ್ರೇಜ್ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಜೋರಾಗಿದೆ. ಕೆಲ ದಿನಗಳ ಹಿಂದೆ ನಿರ್ದೇಶಕ ಆರ್ ಚಂದ್ರು ತಮ್ಮ ಹುಟ್ಟೂರಿನಲ್ಲಿ ಅದ್ಧೂರಿಯಾಗಿ ಚಿತ್ರದ ಹಾಡೊಂದನ್ನು ಅನಾವರಣ ಮಾಡುವ ಮೂಲಕ ಕಬ್ಜ ಸಿನಿಮಾದ ಸ್ಟ್ರೆಂತ್​ ಏನು ಅನ್ನೋದನ್ನು ತಿಳಿಸಿದ್ದರು. ಈಗಾಗ್ಲೇ ಟೀಸರ್ ಹಾಗು ಹಾಡುಗಳಿಂದಲೇ ಕುತೂಹಲ ಹುಟ್ಟಿಸಿರುವ ಕಬ್ಜ ಚಿತ್ರವನ್ನು ಬೆಳ್ಳಿ ತೆರೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಕಬ್ಜ ಚಿತ್ರದ ಪೋಸ್ಟರ್​

ಈ ಮಧ್ಯೆ ನಿರ್ದೇಶಕ ಆರ್ ಚಂದ್ರು ಕಬ್ಜ ಚಿತ್ರದ ಟ್ರೈಲರ್ ಬಿಡುಗಡೆ ಮಾಡೋದಿಕ್ಕೆ ಸಜ್ಜಾಗಿದ್ದಾರೆ. ಹಾಗಾದ್ರೆ ಕಬ್ಜ ಚಿತ್ರದ ಟ್ರೈಲರ್ ಯಾವಾಗ ರಿಲೀಸ್ ಅಂತಾ ನೋಡುವುದಕ್ಕಿಂತ ಮುಂಚೆ ಕಬ್ಜ ಚಿತ್ರದ ಕೆಲ ಹೈಲೆಟ್ಸ್​ಗಳನ್ನು ನೋಡೋಣ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ದಿನದಂದು ಕಬ್ಜ ಚಿತ್ರ ವರ್ಲ್ಡ್ ವೈಡ್ ತೆರೆ ಕಾಣುತ್ತಿದೆ. ಅಚ್ಚರಿ ಅಂದ್ರೆ ಕಬ್ಜ ಸಿನಿಮಾ ಐದು ಅಲ್ಲಾ ಏಳು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.

ಇನ್ನು, ಕಬ್ಜ ಚಿತ್ರದ ವ್ಯಾಪಾರದ ವಿಚಾರದಲ್ಲಿ ನಿರ್ದೇಶಕ ಕಮ್ ನಿರ್ಮಾಪಕ ಆರ್ ಚಂದ್ರು ಗುಣಾಕಾರ, ಭಾಗಾಕಾರವನ್ನೆಲ್ಲ ಮಾಡಿ ಕಬ್ಜ ಕೋಟೆಗೆ ಒಬ್ಬೊಬ್ಬರನ್ನೇ ಸೇರಿಸುತ್ತಿದ್ದಾರೆ. ಅದಲ್ಲದೆ ಚಿತ್ರದ ಡಿಜಿಟಲ್ ರೈಟ್ಸ್ ಹಾಗೂ ಆಡಿಯೋ ರೈಟ್ಸ್ ಬಾಲಿವುಡ್ ಹಾಗು ಟಾಲಿವುಡ್​ನ ಖ್ಯಾತ ವಿತರಕರಾದ ಆನಂದ್ ಪಂಡಿತ್ ಹಾಗು ತೆಲುಗಿನಲ್ಲಿ ನಟ ನಿತಿನ್ ತಂದೆ ಈ ಸಿನಿಮಾವನ್ನು ವಿತರಣೆ ಮಾಡುತ್ತಿರೋದು ನೋಡಿದ್ರೆ ಕಬ್ಜ ಚಿತ್ರಕ್ಕೆ ಡಿಮ್ಯಾಂಡ್ ಕ್ರಿಯೇಟ್ ಆಗುತ್ತಿರುವುದು ಗೊತ್ತಾಗುತ್ತದೆ.

ಕಬ್ಜ ಚಿತ್ರದ ಪೋಸ್ಟರ್​

ಇನ್ನು, ಕಬ್ಜ ಸಿನಿಮಾದಲ್ಲಿ ಉಪೇಂದ್ರ ಹಾಗು ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀಯಾ ಶರಣ್​, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ಮುರಳಿ ಶರ್ಮಾ ನವಾಬ್ ಷಾ, ತೆಲುಗಿನ ಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ ಹೀಗೆ ಬಿಗ್ ಸ್ಟಾರ್ ಕಾಸ್ಟ್ ಈ ಚಿತ್ರದಲ್ಲಿದೆ. ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ಅವರೇ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಎ.ಜೆ. ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂ ಮೋರ್, ವಿಜಯ್​ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಇಷ್ಟೆಲ್ಲಾ ವಿಶೇಷತೆ ಇರುವ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಕಬ್ಜ ಚಿತ್ರದ ಟ್ರೇಲರ್ ಬಿಡುಗಡೆ ಯಾವಾಗ? ಎಂದು ಪ್ರಪಂಚದಾದ್ಯಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಕೆ.ಜಿ. ಎಫ್ ಚಿತ್ರದ ನಂತರ ವಿಶ್ವದಾದ್ಯಂತ ಕುತೂಹಲದಿಂದ ನಿರೀಕ್ಷಿಸುತ್ತಿರುವ ಕಬ್ಜ ಚಿತ್ರದ ಟ್ರೇಲರ್ ಬಿಡುಗಡೆಗೆ ಸಮಯ ನಿಗದಿಯಾಗಿದೆ. ಹೌದು, ಮಾರ್ಚ್ 4 ರಂದು ಸಂಜೆ 5 ಗಂಟೆ 2 ನಿಮಿಷಕ್ಕೆ ಕಬ್ಜ ಚಿತ್ರದ ಎಲ್ಲಾ ಭಾಷೆಗಳ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆಯಾಗಲಿದೆ.

ಸದ್ಯ ಕನ್ನಡದ ಈ ವರ್ಷದ ಪ್ಯಾನ್ ಇಂಡಿಯಾ ಸಿನಿಮಾವಾಗಿರೋ ಕಬ್ಜ ಸಿನಿಮಾದ ಹವಾ ದಿನೇ ದಿನೇ ದುಪ್ಪಟ್ಟು ಆಗುತ್ತಿರೋದು ನಿರ್ದೇಶಕ ಹಾಗು ನಿರ್ಮಾಪಕ ಆರ್ ಚಂದ್ರುಗೆ ಕಬ್ಜ ಚಿತ್ರದ ಮೇಲೆ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಟೀಸರ್​ನಿಂದಲೇ ಭಾರತೀಯ ಚಿತ್ರರಂಗದಲ್ಲಿ ಹವಾ ಕ್ರಿಯೇಟ್ ಮಾಡಿರೋ ಕಬ್ಜ ಚಿತ್ರದ ಟ್ರೈಲರ್ ಹೇಗಿರುತ್ತೆ ಅನ್ನೋದು ಉಪೇಂದ್ರ ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ.

ಇದನ್ನೂ ಓದಿ:ಕಬ್ಜ ಸಿನಿಮಾ ಪ್ರೇಕ್ಷಕರಿಗೆ ನಿಜವಾಗಿಯೂ ಹಬ್ಬ: ಉಪೇಂದ್ರ

Last Updated : Mar 2, 2023, 5:58 PM IST

ABOUT THE AUTHOR

...view details