ಸೌತ್ ಸೂಪರ್ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಮತ್ತು ಯುವ ನಟ ನವೀನ್ ಪೋಲಿಶೆಟ್ಟಿ ಮೂಖ್ಯಭೂಮಿಕೆಯ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ತೆಲುಗು ಸಿನಿಮಾ ಇಂದು ತೆರೆ ಕಂಡಿದೆ. ಭಾರೀ ನಿರೀಕ್ಷೆಗಳೊಂದಿಗೆ ಚಿತ್ರವು ಬಿಡುಗಡೆಯಾಗಿದೆ. ರೊಮ್ಯಾಂಟಿಕ್ ಮತ್ತು ಕಾಮಿಡಿ ಎಂಟರ್ಟೈನರ್ ಸಿನಿಮಾ ಇದಾಗಿದೆ. ಮಹೇಶ್ ಬಾಬು ಪಿ ನಿರ್ದೇಶಿಸಿದ್ದಾರೆ. ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವಂಶಿ ಮತ್ತು ಪ್ರಮೋದ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಐದು ವರ್ಷಗಳ ನಂತರ ಅನುಷ್ಕಾ ಶೆಟ್ಟಿ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಸಂತಸ ನೀಡಿದೆ.
ವ್ಯಾಪಾರ ವೀಕ್ಷಕರ ಪ್ರಕಾರ, ಈ ಚಿತ್ರವನ್ನು ಸುಮಾರು 50 ಕೋಟಿ ರೂಪಾಯಿಗೂ ಹೆಚ್ಚು ಬಜೆಟ್ನಲ್ಲಿ ನಿರ್ಮಿಸಲಾಗಿದೆ. ಸಿನಿಮಾವನ್ನು ಈಗಾಗಲೇ ವೀಕ್ಷಿಸಿರುವ ಪ್ರೇಕ್ಷಕರು ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಚಿತ್ರವು ಉತ್ತಮ ವಿಮರ್ಶೆ ಪಡೆದುಕೊಂಡಿದೆ.
ಪ್ರೇಕ್ಷಕರು ಹೇಳಿದ್ದೇನು?: ಎಕ್ಸ್ನಲ್ಲಿ ಅಭಿಮಾನಿಯೊಬ್ಬರು, "ಎಂಟರ್ಟೈನಿಂಗ್ ವಾಚ್! 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಇಷ್ಟಪಟ್ಟಿದ್ದೇನೆ. ಈ ಸಿನಿಮಾವು ನನ್ನನ್ನು ನಗುವಂತೆ ಮಾಡಿತು. ಪಾತ್ರಗಳ ಮುಗ್ಧತೆಯು ಬಹಳ ಇಷ್ಟವಾಯಿತು. ಮುಖ್ಯವಾಗಿ ನವೀನ್ ಪೋಲಿಶೆಟ್ಟಿ ಅವರ ನೋವಿನ ಕ್ಷಣವು ನಮ್ಮನ್ನು ಭಾವುಕರನ್ನಾಗಿಸಿತು. ಅದನ್ನು ಅದ್ಭುತವಾಗಿ ತೆರೆ ಮೇಲೆ ಮೂಡಿಸಿದ್ದಕ್ಕಾಗಿ ಇಡೀ ತಂಡಕ್ಕೆ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Jawan celebration: ಚಲೇಯಾ ಹಾಡು ಪ್ರದರ್ಶನವಾಗುತ್ತಿದ್ದಂತೆ ಚಿತ್ರಮಂದಿರದಲ್ಲಿ ಗೆಳತಿಗೆ ಪ್ರಪೋಸ್ - ವಿಡಿಯೋ ನೋಡಿ!
ಈ ಸಿನಿಮಾದ ಮೊದಲಾರ್ಧ ಸಖತ್ ಕಾಮಿಡಿಯಾದ್ರೆ, ದ್ವಿತಿಯಾರ್ಧ ಸಾಕಷ್ಟು ಭಾವನಾತ್ಮಕ ಸ್ಪರ್ಶದಿಂದ ಕೂಡಿದೆ. ಸಿದ್ದು ಪೋಲಿಶೆಟ್ಟಿ ಮತ್ತು ಅನ್ವಿತಾ ದೃಶ್ಯಗಳು, ನವೀನ್ ಅವರ ಕಾಮಿಡಿ ಟೈಮಿಂಗ್, ಸಂಭಾಷಣೆಗಳು ಎಲ್ಲವೂ ಅದ್ಭುತವಾಗಿದೆ ಎಂದು ನೆಟಿಜನ್ಗಳು ಕಮೆಂಟ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ನವೀನ್ ಪೋಲಿಶೆಟ್ಟಿ ಅವರ ಅಭಿನಯಕ್ಕೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಚಿತ್ರ ವೀಕ್ಷಿಸಿದ ಮತ್ತೊಬ್ಬರು, "ಸ್ವೀಟಿ! ಉಲ್ಲಾಸದ ಹಾಸ್ಯದೊಂದಿಗೆ ಅತ್ಯುತ್ತಮವಾದ ಮೊದಲಾರ್ಧ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅನುಷ್ಕಾ ಕಮ್ಬ್ಯಾಕ್:ಐದು ವರ್ಷಗಳ ಬಳಿಕ ಮತ್ತೆ ನಟಿ ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಟಾಲಿವುಡ್ನಲ್ಲಿ ಅತ್ಯಂತ ಪ್ರಭಾವಿ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಯರಲ್ಲಿ ಇವರೂ ಒಬ್ಬರು. 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಮೂಲಕ ಉತ್ತಮ ಕಮ್ಬ್ಯಾಕ್ ಆಗಿದ್ದಾರೆ. ಜಾತಿ ರತ್ನಲು ಖ್ಯಾತಿಯ ನವೀನ್ ಪೋಲಿಶೆಟ್ಟಿ ಈ ಸಿನಿಮಾದಲ್ಲಿ ಮಿಂಚಿದ್ದಾರೆ. ಇದೊಂದು ಕಾಮಿಡಿ, ರೊಮ್ಯಾಂಟಿಕ್ ಕಥೆಯಾಗಿದೆ. ಚಿತ್ರವು ತೆಲುಗು ಮಾತ್ರವಲ್ಲದೇ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಿದೆ.
ನವೀನ್ ಪೋಲಿಶೆಟ್ಟಿ ಅವರು ಸಿದ್ದು ಪೋಲಿಶೆಟ್ಟಿ ಎಂಬ ಪಾತ್ರದಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಆಗಿ ನಟಿಸಿದ್ದಾರೆ. ಅನುಷ್ಕಾ ಶೆಟ್ಟಿ ಅವರು ಅನ್ವಿತಾ ರವಳಿಶೆಟ್ಟಿಯಾಗಿ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ನಡುವಿನ ಕಾಮಿಡಿ ಕೆಮಿಸ್ಟ್ರಿ ಆಕರ್ಷಕವಾಗಿದೆ. ಮಹೇಶ್ ಬಾಬು ಅವರ ನಿರ್ದೇಶನದ 48ನೇ ಚಿತ್ರವಿದು. ನವೀನ್ ಪೋಲಿಶೆಟ್ಟಿ ಅವರದ್ದು ಮೂರನೇ ಸಿನಿಮಾ. ಈ ಚಿತ್ರಕ್ಕೆ ರಾಧನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಪ್ರಶಂಸೆ ಗಳಿಸಿದೆ. ಚಿರಂಜೀವಿ, ಪ್ರಭಾಸ್ ಸೇರಿದಂತೆ ಸೆಲೆಬ್ರಿಟಿಗಳು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಜಯ್ ದೇವಗನ್, ಆರ್ ಮಾಧವನ್, ಜ್ಯೋತಿಕಾ ನಟನೆಯ ಹೆಸರಿಡದ ಚಿತ್ರಕ್ಕೆ ಬಿಡುಗಡೆ ಮುಹೂರ್ತ ಫಿಕ್ಸ್