ಕರ್ನಾಟಕ

karnataka

ETV Bharat / entertainment

ರೊಮ್ಯಾಂಟಿಕ್ ಮೂಡ್​ನಲ್ಲಿ ಸತೀಶ್ ನೀನಾಸಂ-ಡಿಂಪಲ್​ ಕ್ವೀನ್​: ಮ್ಯಾಟ್ನಿ ಬಿಡುಗಡೆಗೆ ಸಜ್ಜು - Matni movie

ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಅಭಿನಯದ ಮ್ಯಾಟ್ನಿ ಸಿನಿಮಾ ಸಾಂಗ್ ನಾಳೆ ಬಿಡುಗಡೆ ಆಗಲಿದೆ.

Matni - Sathish Ninasam and Rachita
ಸತೀಶ್ ನೀನಾಸಂ-ರಚಿತಾ ರಾಮ್

By

Published : Aug 2, 2023, 8:38 PM IST

ವಿಭಿನ್ನ ಪಾತ್ರಗಳು, ಕಂಟೆಂಟ್ ಆಧಾರಿತ ಸಿನಿಮಾಗಳ ಮೂಲಕ ಕನ್ನಡಿಗರ ಹೃದಯ ಗೆದ್ದು ನಮ್ಮ ಮಂಡ್ಯ ಹೈದ ಅಂತಾ ಕರೆಸಿಕೊಂಡಿರುವ ನಟ ಸತೀಶ್ ನೀನಾಸಂ. ಪೆಟ್ರೋಮ್ಯಾಕ್ಸ್ ಬಳಿಕ ಸತೀಶ್ ನೀನಾಸಂ ಅವರ ಯಾವ ಸಿನಿಮಾ ಬಿಡುಗಡೆ ಆಗುತ್ತೆ ಅಂತಾ ಅವರ ಅಭಿಮಾನಿ ಬಳಗ ಕಾಯುತ್ತಿತ್ತು. ಈ ಪ್ರಶ್ನೆಗೆ ಉತ್ತರ 'ಮ್ಯಾಟ್ನಿ ಸಿನಿಮಾ'. ಹೌದು, ಸತೀಶ್ ನೀನಾಸಂ ಅವರು ಸ್ಟೈಲಿಷ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಮ್ಯಾಟ್ನಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಸತೀಶ್ ನೀನಾಸಂ-ರಚಿತಾ ರಾಮ್

ಅಯೋಗ್ಯ ಸಿನಿಮಾ ಬಳಿಕ ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆ ಸತೀಶ್ ನೀನಾಸಂ ನಟಿಸಿರುವ ರೊಮ್ಯಾಂಟಿಕ್​​ ಚಿತ್ರ. ಮನೋಹರ್ ಕಂಪಳ್ಳಿ ಚೊಚ್ಚಲ ನಿರ್ದೇಶನದ ಮ್ಯಾಟ್ನಿ ಚಿತ್ರದ ಮೊದಲ ಹಾಡು ಬಿಡುಗಡೆ ಆಗುತ್ತಿದ್ದು, ಈ ಹಾಡಿನಲ್ಲಿ ಸತೀಶ್ ನೀನಸಾಂ ಡಿಂಪಲ್ ಕ್ವೀನ್​​ ಜೊತೆ ಸಖತ್ ರೊಮ್ಯಾಂಟಿಕ್ ಮೂಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡು ನಾಳೆ ರಿಲೀಸ್ ಆಗಲಿದೆ.

ರಚಿತಾ ರಾಮ್ - ಸತೀಶ್ ನೀನಾಸಂ

ಇದೊಂದು ಕಲರ್‌ಫುಲ್ ಹಾಡು. ಈ ಹಾಡಿನಲ್ಲಿ ಸತೀಶ್‌ ನೀನಾಸಂ ವರ್ಕೌಟ್‌ ಮಾಡಿ, ಫಿಟ್‌ ಆ್ಯಂಡ್‌ ಫೈನ್‌ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ರಚಿತಾ ರಾಮ್‌ ಸಖತ್​ ಸ್ಟೈಲಿಷ್ ಆಗಿ, ಮಿನಿ ಸ್ಕರ್ಟ್‌ನಲ್ಲಿ ಮಿಂಚಿದ್ದಾರೆ. ಮ್ಯಾಟ್ನಿ ಸಿನಿಮಾಗೆ ಮನೋಹರ್‌ ಕಂಪಳ್ಳಿ ನಿರ್ದೇಶನ ಮಾಡಿದ್ದು, ಸದ್ಯ ರಿಲೀಸ್ ಆಗಲು ಸಜ್ಜಾಗಿರುವ ಹಾಡನ್ನು 15 ದಿನಗಳ ಕಾಲ ಅದ್ಧೂರಿ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗಿದೆ.

ಅಯೋಗ್ಯ ಚಿತ್ರದಲ್ಲಿ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಏನಮ್ಮಿ ಏನಮ್ಮಿ ಎಂಬ ಹಾಡಿಗೆ ಒಟ್ಟಿಗೆ ಹೆಜ್ಜೆ ಹಾಕಿದ್ದರು. ಈ ಹಾಡಂತೂ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿತ್ತು. ಇದೀಗ ಈ ಜೋಡಿ ಮ್ಯಾಟ್ನಿ ಚಿತ್ರದ ಮೂಲಕ ಮತ್ತೊಮ್ಮೆ ತೆರೆ ಹಂಚಿಕೊಂಡಿದೆ. ಹೀಗಾಗಿ ಈ ಸಿನಿಮಾ ಹಾಗು ಹಾಡಿನ ಮೇಲೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಲವ್ ಸ್ಟೋರಿ ಜೊತೆಗೆ ಕೌಟುಂಬಿಕ ಮೌಲ್ಯಗಳನ್ನು ಒಳಗೊಂಡಿರುವ ಚಿತ್ರವಿದು ಎಂದು ಹೇಳಲಾಗುತ್ತಿದೆ. ಸತೀಶ್ ನೀನಾಸಂ​ ಮತ್ತು ರಚಿತಾ ರಾಮ್ ಅಲ್ಲದೇ ಅದಿತಿ ಪ್ರಭುದೇವ​ ಕೂಡ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸತೀಶ್ ನೀನಾಸಂ-ರಚಿತಾ ರಾಮ್

ಇದನ್ನೂ ಓದಿ:20 ವರ್ಷಗಳ ಬಳಿಕ 'ಕೋಯಿ ಮಿಲ್ ಗಯಾ' ರೀ ರಿಲೀಸ್​ .. ಸಿನಿಪ್ರಿಯರೇ ಮತ್ತೊಮ್ಮೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿ, ಆನಂದಿಸಿ...!

ಮ್ಯಾಟ್ನಿ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ, ಸುಧಾಕರ್​ ರಾಜ್ ಮತ್ತು​ ಕೀರ್ತನ್​ ಪೂಜಾರಿ ಛಾಯಾಗ್ರಹಣ, ಕೆ.ಎಂ ಪ್ರಕಾಶ್​ ಸಂಕಲನವಿದೆ. ಚಿತ್ರವನ್ನು ಪಾರ್ವತಿ ಎಸ್​ ಗೌಡ ಎಂಬುವವರು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಈ ರೊಮ್ಯಾಂಟಿಕ್ ಹಾಡಿನಲ್ಲಿ ಸತೀಶ್ ನೀನಸಾಂ ಹಾಗು ರಚಿತಾ ರಾಮ್ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದು, ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ:SIIMA 2023: ಪ್ರತಿಷ್ಠಿತ ಸೈಮಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಕೆಜಿಎಫ್​ 2, ಕಾಂತಾರ!

ABOUT THE AUTHOR

...view details