ಕರ್ನಾಟಕ

karnataka

ETV Bharat / entertainment

ಹಸೆಮಣೆ ಏರಿದ ಮಸಾಬಾ ಗುಪ್ತಾ - ಸತ್ಯದೀಪ್ ಮಿಶ್ರಾ: ಈ ಜೋಡಿಗಿದು ಎರಡನೇ ಮದುವೆ

ಫ್ಯಾಶನ್ ಡಿಸೈನರ್ ಮಸಾಬಾ ಗುಪ್ತಾ ಮತ್ತು ನಟ ಸತ್ಯದೀಪ್ ಮಿಶ್ರಾ ದಾಂಪತ್ಯ ಜೀವನಕ್ಕೆ ಹೆಜ್ಜೆಯಿರಿಸಿದ್ದಾರೆ.

Masaba Gupta Satyadeep Misra wedding
ಮಸಾಬಾ ಗುಪ್ತಾ ಸತ್ಯದೀಪ್ ಮಿಶ್ರಾ ಮದುವೆ

By

Published : Jan 27, 2023, 5:26 PM IST

ಫ್ಯಾಶನ್ ಡಿಸೈನರ್, ನಟಿ ಮಸಾಬಾ ಗುಪ್ತಾ ತನ್ನ ಗೆಳೆಯ ಸತ್ಯದೀಪ್ ಮಿಶ್ರಾ ಅವರೊಂದಿಗೆ ಹಸೆಮಣೆ ಏರಿದ್ದಾರೆ. ತಾವು ಮದುವೆ ಆಗಿರುವ ವಿಚಾರವನ್ನು ಸ್ವತಃ ಮಸಾಬಾ ಗುಪ್ತಾ ಮತ್ತು ಸತ್ಯದೀಪ್ ಮಿಶ್ರಾ ಇಂದು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎರಡು ವರ್ಷಗಳ ಕಾಲ ಡೇಟಿಂಗ್​ನಲ್ಲಿದ್ದ ಈ ಜೋಡಿ ಈಗ ತಮ್ಮ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ.

ಮಸಾಬಾ ಗುಪ್ತಾ ಸತ್ಯದೀಪ್ ಮಿಶ್ರಾ ವಿವಾಹ:ಮಸಾಬಾ ಗುಪ್ತಾ ಮತ್ತು ಸತ್ಯದೀಪ್ ಮಿಶ್ರಾ ಮಸಾಬಾ ಗುಪ್ತಾ ಮತ್ತು ಸತ್ಯದೀಪ್ ಮಿಶ್ರಾ ಇನ್​​ಸ್ಟಾಗ್ರಾಮ್​ನಲ್ಲಿ ತಮ್ಮ ಫೋಟೋ ಹಂಚಿಕೊಂಡು ಮದುವೆಯ ಕುರಿತು ಮಾಹಿತಿ ನೀಡಿದ್ದಾರೆ. ವಿವಾಹದ ಉಡುಪಿನಲ್ಲಿ ಈ ಜೋಡಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಮಸಾಬಾ ಗುಪ್ತಾ ಫ್ಯಾಶನ್ ಡಿಸೈನರ್ ಆಗಿದ್ದು ತನ್ನ ಹೌಸ್ ಆಫ್ ಮಸಾಬಾ ಕಂಪನಿಯ ಉಡುಗೆಯನ್ನೇ ಧರಿಸಿದ್ದಾರೆ. ಗುಲಾಬಿ ಬಣ್ಣದ ಲೆಹೆಂಗಾಗೆ, ಎರಡು ದುಪಟ್ಟಾಗಳನ್ನು ಹಾಕಿದ್ದಾರೆ.

ಫೋಟೋ ಹಂಚಿಕೊಂಡ ದಂಪತಿ:ತಮ್ಮ ಮದುವೆಯ ಚಿತ್ರಗಳನ್ನು ಹಂಚಿಕೊಂಡ ಫ್ಯಾಷನ್ ಡಿಸೈನರ್, ನಟಿ ಮಸಾಬಾ ಗುಪ್ತಾ, ''ನನ್ನ ಶಾಂತ ಸಾಗರವನ್ನು ಇಂದು ಬೆಳಗ್ಗೆ ವಿವಾಹವಾದೆ. ಪ್ರೀತಿ, ಶಾಂತಿ, ಸ್ಥಿರತೆ ಮತ್ತು ನಗು ಇಲ್ಲಿದೆ, ಮತ್ತು ಶೀರ್ಷಿಕೆ ಆಯ್ಕೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು, ಇದು (ನಮ್ಮ ವೈವಾಹಿಕ ಜೀವನ) ಉತ್ತಮವಾಗಿರುತ್ತದೆ'' ಎಂದು ಬರೆದಿದ್ದಾರೆ.

ಶುಭಾಶಯಗಳ ಸುರಿಮಳೆ:ಸಾಮಾಜಿಕ ಮಾಧ್ಯಮದಲ್ಲಿ ಮಸಾಬಾ ಗುಪ್ತಾ ಮತ್ತು ಸತ್ಯದೀಪ್ ಮಿಶ್ರಾ ಅವರ ಮದುವೆ ಫೋಟೋ ಶೇರ್ ಆಗುತ್ತಿದ್ದಂತೆ, ಚಿತ್ರರಂಗದವರು ಸೇರಿದಂತೆ ಅಭಿಮಾನಿಗಳು ಕಾಮೆಂಟ್​ ವಿಭಾಗದಲ್ಲಿ ಶುಭಾಶಯಗಳ ಮಳೆ ಸುರಿಸಿದ್ದಾರೆ. ನಟ ವಿಕ್ಕಿ ಕೌಶಲ್​ ದಂಪತಿಗೆ ಶುಭ ಹಾರೈಸಿದವರಲ್ಲಿ ಮೊದಲಿಗರು. ಮಸಾಬಾ ಗುಪ್ತಾ ಮತ್ತು ಸತ್ಯದೀಪ್ ಮಿಶ್ರಾ ಅವರಿಗೆ ವಿವಾಹದ ಶುಭಾಶಯಗಳು ಎಂದು ಬರೆದಿದ್ದಾರೆ. ಭೂಮಿ ಪೆಡ್ನೇಕರ್, ಆಯುಷ್ಮಾನ್ ಖುರಾನಾ, ಉಪಾಸನಾ ಕಾಮಿನೇನಿ ಕೊನಿಡೇಲಾ, ಬಿಪಾಶಾ ಬಸು ಮತ್ತು ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ನಟ ನಟಿಯರು ನವವಿವಾಹಿತರಿಗೆ ಶುಭ ಕೋರಿದ್ದಾರೆ.

ಇದನ್ನೂ ಓದಿ:ಗ್ಯಾಂಗ್​​ಸ್ಟರ್ ಅವತಾರದಲ್ಲಿ ಡೆಡ್ಲಿ ಸೋಮ ಆದಿತ್ಯ: 'ಟೆರರ್' ಮುಹೂರ್ತ ಸಮಾರಂಭ ಸಂಪನ್ನ

ಮಸಾಬಾ ಸತ್ಯದೀಪ್ ಎರಡನೇ ಮದುವೆ: ಮಸಾಬಾ ಮತ್ತು ಸತ್ಯದೀಪ್ ಅವರಿಗೆ ಇದು ಎರಡನೇ ಮದುವೆ. ಹಿರಿಯ ನಟಿ ನೀನಾ ಗುಪ್ತಾ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವಿಯಾನ್ ರಿಚರ್ಡ್ಸ್ ಅವರ ಪುತ್ರಿ, ಮಸಾಬಾ ಮೊದಲು ಚಲನಚಿತ್ರ ನಿರ್ಮಾಪಕ ಮಧು ಮಾಂಟೆನಾ ಅವರನ್ನು ವಿವಾಹವಾಗಿದ್ದರು. 2015ರಲ್ಲಿ ಮದುವೆಯಾದ ಅವರು 2018ರಲ್ಲಿ ತಮ್ಮ ವಿಚ್ಛೇದನ ವಿಚಾರವನ್ನು ಸೋಷಿಯಲ್​ ಮೀಡಿಯಾದಲ್ಲಿ ಘೋಷಿಸಿದ್ದರು. ಇನ್ನೂ ಸತ್ಯದೀಪ್ ಅವರು ಈ ಹಿಂದೆ ನಟಿ ಅದಿತಿ ರಾವ್ ಹೈದರಿ ಅವರನ್ನು ಮದುವೆಯಾಗಿದ್ದರು. 2013 ರಲ್ಲಿ ದಂಪತಿಗಳು ಬೇರ್ಪಟ್ಟರು. ಇದೀಗ ಇವರಿಬ್ಬರೂ ಮದುವೆ ಆಗಿ ತಮ್ಮ ಹೊಸ ಜೀವನ ಆರಂಭಿಸಿದ್ದಾರೆ.

ಇದನ್ನೂ ಓದಿ:ಎರಡೇ ದಿನದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ 'ಪಠಾಣ್​': ಇಷ್ಟೊಂದು ಕಲೆಕ್ಷನ್!

ABOUT THE AUTHOR

...view details