ಕರ್ನಾಟಕ

karnataka

ETV Bharat / entertainment

'ಅವನು ನಿನ್ನ ಮೇಲೆ ಕಣ್ಣಿಟ್ಟಿದ್ದಾನೆ!'.. 'ಜವಾನ್'​ ಸಿನಿಮಾದ ನಿಗೂಢ ಪೋಸ್ಟರ್​ ರಿಲೀಸ್​ - ಜವಾನ್​ ಸಿನಿಮಾದ ಪ್ರಿವ್ಯೂ

'ಜವಾನ್​' ಸಿನಿಮಾದಿಂದ ಮತ್ತೊಂದು ಪೋಸ್ಟರ್​ ರಿಲೀಸ್​ ಆಗಿದೆ. ಕಣ್ಣನ್ನು ಕೇಂದ್ರಿಕರಿಸಿರುವ ಈ ಅದ್ಭುತ ಚಿತ್ರ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ.

Jawan
ಜವಾನ್​

By

Published : Jul 23, 2023, 8:04 PM IST

ಬಾಲಿವುಡ್​ ಬಾದ್​ ಶಾ​ ಶಾರುಖ್​ ಖಾನ್​ ನಟನೆಯ ಬಹುನಿರೀಕ್ಷಿತ 'ಜವಾನ್​' ಸಿನಿಮಾದ ಪ್ರಿವ್ಯೂ ಈಗಾಗಲೇ ಬಿಡುಗಡೆಯಾಗಿ ಟ್ರೆಂಡಿಂಗ್​ನಲ್ಲಿದೆ. ಕಿಂಗ್​ ಖಾನ್​ ಲುಕ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಶಾರುಖ್​ ಬೋಳು ತಲೆ ಲುಕ್​ ಮತ್ತು ನಯನತಾರಾ ಅವರ ಫಸ್ಟ್​ ಲುಕ್​ ಅನ್ನು ತೋರಿಸುವ ಪೋಸ್ಟರ್​ಗಳು ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿದೆ. ಅಟ್ಲಿ ನಿರ್ದೇಶನದ ಈ ಚಿತ್ರದಿಂದ ಮತ್ತೊಂದು ಪೋಸ್ಟರ್​ ಬಿಡುಗಡೆಯಾಗಿದೆ. ತೀವ್ರವಾದ ಕಣ್ಣಿನ ಸಮೀಪವಿರುವ ಅದ್ಭುತ ಚಿತ್ರವನ್ನು ಬಹಿರಂಗಪಡಿಸಿ ನಿರ್ಮಾಪಕರು ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾರೆ.

ಪೋಸ್ಟರ್​ನಲ್ಲಿ ವ್ಯಕ್ತಿಯು ಯಾರೆಂದು ತಿಳಿದಿಲ್ಲ. ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟರ್​ ಸದ್ಯ ಟ್ರೆಂಡಿಂಗ್​ ಆಗಿದೆ. ಸಸ್ಪೆನ್ಸ್​ ಅನ್ನು ಕೇಂದ್ರವಾಗಿರಿಸಿ ಪೋಸ್ಟರ್​ ಅನ್ನು ರಿಲೀಸ್​ ಮಾಡಲಾಗಿದೆ. ನಿಗೂಢವಾದ ಕಣ್ಣನ್ನು ಮಾತ್ರ ತೋರಿಸಲಾಗಿದೆ. "ಅವನು ನಿನ್ನ ಮೇಲೆ ಕಣ್ಣಿಟ್ಟಿದ್ದಾನೆ!" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್ ಅನ್ನು ಹಂಚಿಕೊಳ್ಳಲಾಗಿದೆ. ಅನೇಕರು ಪೋಸ್ಟರ್​ನಲ್ಲಿರುವ ವ್ಯಕ್ತಿಯನ್ನು ಗುರುತಿಸಲು ಕಮೆಂಟ್​ ವಿಭಾಗವನ್ನು ಬಳಸಿಕೊಂಡರು. ವಿಜಯ್ ಸೇತುಪತಿ ಎಂದೇ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

ಇತ್ತೀಚೆಗೆ ನಯನತಾರಾ ಅವರ ಫಸ್ಟ್​ ಲುಕ್​ ಅನ್ನು ಬಿಡುಗಡೆ ಮಾಡಲಾಗಿತ್ತು. ಗನ್ ಹಿಡಿದುಕೊಂಡು ಪೊಲೀಸ್​ ಸಮವಸ್ತ್ರದಲ್ಲಿ ನಯನತಾರಾ ಕಾಣಿಸಿಕೊಂಡಿದ್ದರು. "ಅವಳು ಚಂಡಮಾರುತದ ಮೊದಲು ಬರುವ ಗುಡುಗು! #Nayanthara #JawanPrevue Out Now! #Jawan ಸೆಪ್ಟೆಂಬರ್ 7, 2023 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ" ಎಂಬ ಕ್ಯಾಪ್ಶನ್ ಜೊತೆಗೆ ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು.​

ಇದನ್ನೂ ಓದಿ:Jawan prevue: 'ಜವಾನ್'​ ಪ್ರಿವ್ಯೂಗೆ ಪತ್ನಿ ಮತ್ತು ಮಗನ ಪ್ರತಿಕ್ರಿಯೆ ಬಹಿರಂಗಪಡಿಸಿದ ಶಾರುಖ್​ ಖಾನ್​

ಜವಾನ್ ಪ್ರಿವ್ಯೂ ಮತ್ತು ಇತ್ತೀಚಿನ ಪೋಸ್ಟರ್‌ನಲ್ಲಿ ನೋಡಿದಂತೆ, ಈ ಆ್ಯಕ್ಷನ್ ಥ್ರಿಲ್ಲರ್‌ನಲ್ಲಿ ನಯನತಾರಾ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ವಿಜಯ್​ ಸೇತುಪತಿ ಕೂಡ ಚಿತ್ರಕ್ಕೆ ಸ್ಟಾರ್ ಪವರ್ ಅನ್ನು ಸೇರಿಸುತ್ತಾರೆ ಎಂಬ ವದಂತಿಗಳಿವೆ. ಕಿಂಗ್ ಖಾನ್ ಅವರ ಜವಾನ್​​ ಸಿನಿಮಾ ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

ಸೂಪರ್​ ಹಿಟ್ ಪಠಾಣ್​​ ಬಳಿಕ ಈ ಸಾಲಿನಲ್ಲೇ ಬಿಡುಗಡೆ ಆಗುತ್ತಿರುವ ಶಾರುಖ್​ ಅವರ ಮತ್ತೊಂದು ಬಿಗ್​ ಬಜೆಟ್​ ಚಿತ್ರವಿದು. ಕಂಪ್ಲೀಟ್​ ಆ್ಯಕ್ಷನ್ ಎಂಟರ್‌ಟೈನ್​ ಸಿನಿಮಾ ಇದಾಗಿದೆ. ಶಾರುಖ್​ ಖಾನ್ ಅವರ ಪ್ರೊಡಕ್ಷನ್ ಬ್ಯಾನರ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಈ ಸಿನಿಮಾ ನಿರ್ಮಿಸಿದ್ದು, ಸೌತ್​ ಸ್ಟಾರ್ ಡೈರೆಕ್ಟರ್ ಅಟ್ಲೀ ನಿರ್ದೇಶಿಸಿದ್ದಾರೆ.​ ಈ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ:Jawan Prevue: 'ಜವಾನ್'​ ಪ್ರಿವ್ಯೂ ರಿಲೀಸ್​; ಕಿಂಗ್​ ಖಾನ್​ ಹೊಸ ಅವತಾರಕ್ಕೆ ಫ್ಯಾನ್ಸ್​ ಫಿದಾ!

ABOUT THE AUTHOR

...view details