ಹಲವು ಸೂಪರ್ ಹಿಟ್ ಸಿನಿಮಾಗಳ ಕಲಾ ನಿರ್ದೇಶಕ ನಿತಿನ್ ಚಂದ್ರಕಾಂತ್ ದೇಸಾಯಿ ಬುಧವಾರ ನಿಧನರಾಗಿದ್ದಾರೆ. ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ನಿತಿನ್ ಚಂದ್ರಕಾಂತ್ ದೇಸಾಯಿ ಪಾರ್ಥಿವ ಶರೀರಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅಂತಿಮ ನಮನ ಸಲ್ಲಿಸಿದರು.
ಸಿಎಂ ಶಿಂಧೆ ಹಾಗೂ ಡಿಸಿಎಂ ಅಜಿತ್ ಪವಾರ್ ಜೊತೆಯಾಗಿ ಕಾಣಿಸಿಕೊಂಡಿರುವ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ, ಸಚಿವ ಸುಧೀರ್ ಮುಂಗಂತಿವಾರ್, ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಸೇರಿದಂತೆ ಚಿತ್ರರಂಗದ ಗಣ್ಯರು ನಿತಿನ್ ಚಂದ್ರಕಾಂತ್ ದೇಸಾಯಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಲಾ ನಿರ್ದೇಶಕ ನಿತಿನ್ ಚಂದ್ರಕಾಂತ್ ದೇಸಾಯಿ ಅವರ ಸಾವು ಆಘಾತಕಾರಿ ಮತ್ತು ದುರದೃಷ್ಟಕರ ಎಂದು ಶಿಂಧೆ ಟ್ವೀಟ್ ಮಾಡಿದ್ದಾರೆ. "ವೈಯಕ್ತಿಕವಾಗಿ ನನಗೆ ಮತ್ತು ಇಡೀ ಚಿತ್ರರಂಗಕ್ಕೆ ಅತ್ಯಂತ ನೋವಿನ ದಿನ" ಎಂದಿದ್ದಾರೆ. ಶರದ್ ಪವಾರ್ ಅವರು, ನಿತಿನ್ ಚಂದ್ರಕಾಂತ್ ದೇಸಾಯಿ ಅವರ ನಿಧನದಿಂದ ರಾಜ್ಯವು ಹೊಸತನದ ಒಲವು ಮತ್ತು ಶ್ರಮಿಸುವ ಇಚ್ಛೆಯುಳ್ಳ ಒಬ್ಬ ಶ್ರೇಷ್ಠ ಮರಾಠಿ ಉದ್ಯಮಿಯನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಆಶಾ, ಗೆದ್ದ ಮಗ ಚಿತ್ರದಲ್ಲಿ ಅಂಬರೀಶ್ ಜೊತೆ ಅಭಿನಯಿಸಿದ್ದ ಕಲಾವಿದೆ ಗುಡೂರ ಮಮತಾ ಇನ್ನಿಲ್ಲ..
ನಿತಿನ್ ಚಂದ್ರಕಾಂತ್ ದೇಸಾಯಿ ಆತ್ಮಹತ್ಯೆ: ಕಲಾ ನಿರ್ದೇಶಕ ನಿತಿನ್ ಚಂದ್ರಕಾಂತ್ ದೇಸಾಯಿ ಮೃತದೇಹ ಬುಧವಾರ ಮುಂಜಾನೆ ಅವರ ಎನ್ಡಿ ಸ್ಟುಡಿಯೋದಲ್ಲಿ ಪತ್ತೆಯಾಗಿತ್ತು. ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿತ್ತು. ಆತ್ಮಹತ್ಯೆ ಹಿಂದಿನ ನಿಖರ ಕಾರಣ ತಿಳಿಯಲು ತನಿಖೆ ಚುರುಕುಗೊಂಡಿದೆ. ಈ ಸುದ್ದಿ ಚಿತ್ರರಂಗದವರೂ ಸೇರಿದಂತೆ ಪ್ರೇಕ್ಷಕರಿಗೆ ಆಘಾತವನ್ನುಂಟು ಮಾಡಿತ್ತು.
ಸೂಪರ್ ಹಿಟ್ ಸಿನಿಮಾಗಳ ಕಲಾ ನಿರ್ದೇಶಕ: ಬಾಲಿವುಡ್‌ನ ಅತ್ಯುತ್ತಮ ಕಲಾ ನಿರ್ದೇಶಕರಲ್ಲಿ ಓರ್ವರಾದ ದೇಸಾಯಿ ಅವರು ದೇವ್ದಾಸ್, ಲಗಾನ್, ಜೋಧಾ ಅಕ್ಬರ್, ಹರಿಶ್ಚಂದ್ರಾಚಿ ಫ್ಯಾಕ್ಟರಿ, ಹಮ್ ದಿಲ್ ದೇ ಚುಕೆ ಸನಮ್ ಮತ್ತು ಇತರೆ ಸೂಪರ್ ಹಿಟ್ ಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಬಾಲಿವುಡ್ ಸಿನಿಮಾ ಇಂಡಸ್ಟ್ರಿಯ ಅತಿ ದೊಡ್ಡ ಆಸ್ತಿನೇ ಆಗಿದ್ದ ನಿತಿನ್ ದೇಸಾಯಿ ಮರಣ ನಟ ಅಕ್ಷಯ್ ಕುಮಾರ್ ಅವರಿಗೆ ನೋವು ತಂದಿತ್ತು. ಹೀಗಾಗಿ ಅವರು ತಮ್ಮ OMG 2 ಸಿನಿಮಾದ ಟ್ರೇಲರ್ ಅನ್ನು ಬುಧವಾರದ ಬದಲು ಗುರುವಾರ (ಆಗಸ್ಟ್ 3) ಬಿಡುಗಡೆಗೊಳಿಸಿದ್ದರು.
ಇದನ್ನೂ ಓದಿ:Singer Surinder Shinda: ಜನಪ್ರಿಯ ಪಂಜಾಬಿ ಗಾಯಕ ಸುರಿಂದರ್ ಶಿಂದಾ ಇನ್ನಿಲ್ಲ