ಕರ್ನಾಟಕ

karnataka

ETV Bharat / entertainment

500 ಕೋಟಿಯತ್ತ ದಳಪತಿ ವಿಜಯ್ ನಟನೆಯ 'ಲಿಯೋ' - Leo latest news

Leo Box Office Collection: ಲಿಯೋ ಸಿನಿಮಾ 10ನೇ ದಿನದ ಪ್ರದರ್ಶನ ಮುಂದುವರಿಸಿದ್ದು, ವಾರಾಂತ್ಯ ಹಿನ್ನೆಲೆ ಬಾಕ್ಸ್​ ಆಫೀಸ್​​ ಸಂಖ್ಯೆ ಏರಿಕೆ ಕಾಣುವ ನಿರೀಕ್ಷೆ ಇದೆ.

Leo Box Office Collection
ಲಿಯೋ ಬಾಕ್ಸ್​ ಆಫೀಸ್​ ಕಲೆಕ್ಷನ್​

By ETV Bharat Karnataka Team

Published : Oct 28, 2023, 6:53 PM IST

ದಕ್ಷಿಣ ಚಿತ್ರರಂಗದ ಪ್ರಸಿದ್ಧ ನಟ ದಳಪತಿ ವಿಜಯ್ ಲಿಯೋ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದರೂ, ಕಳೆದ 9 ದಿನಗಳ ಅಂಕಿ ಅಂಶ ಉತ್ತಮವಾಗಿದೆ. ಇಂದು 10ನೇ ದಿನದ ಪ್ರದರ್ಶನ ಮುಂದುವರಿಸಿದ್ದು, ವಾರಾಂತ್ಯ ಹಿನ್ನೆಲೆ ಬಾಕ್ಸ್​ ಆಫೀಸ್​​ ಸಂಖ್ಯೆ ಏರಿಕೆ ಕಾಣುವ ನಿರೀಕ್ಷೆ ಇದೆ.

ಪ್ರಭಾವಶಾಲಿ ಅಂಕಿ ಅಂಶದೊಂದಿಗೆ ಲಿಯೋ ಬಾಕ್ಸ್​ ಆಫೀಸ್​ ಪ್ರಯಾಣ ಆರಂಭಿಸಿತು. ಎರಡನೇ ವಾರದ ಪ್ರದರ್ಶನ ಮುಂದುವರಿಸಿದ್ದು, ದೇಶಿಯ ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 281.62 ಕೋಟಿ ರೂ. ಸಂಪಾದಿಸಿದೆ. ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ 500 ಕೋಟಿ ರೂ. ಸಮೀಪದಲ್ಲಿದೆ. ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಆರಂಭಿಕ ಅಂದಾಜಿನ ಪ್ರಕಾರ, ಲಿಯೋ ಸಿನಿಮಾದ ಗಳಿಕೆ ಎರಡನೇ ಶನಿವಾರ ಶೇ. 35ಕ್ಕೂ (ಶುಕ್ರವಾರದ ಗಳಿಕೆಗೆ ಹೋಲಿಸಿದರೆ) ಹೆಚ್ಚು ಪಟ್ಟು ಏರಿಕೆ ಆಗಲಿದೆ.

ಲಿಯೋ ಸಿನಿಮಾ ಕಳೆದ ಗುರುವಾರ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿತು. ಎರಡನೇ ಶುಕ್ರವಾರ, 7 ಕೋಟಿ ರೂ. ಗಳಿಸಿದೆ. ಇಂದು 10ನೇ ದಿನ ಪ್ರದರ್ಶನ ನಡೆಯುತ್ತಿದೆ. 10ನೇ ದಿನ ಬಾಕ್ಸ್ ಆಫೀಸ್​ ಅಂಕಿ ಅಂಶ ಏರಿಕೆ ಕಾಣಲಿದೆ ಎಂದು ಎಂದು ನಿರೀಕ್ಷಿಸಲಾಗಿದೆ. ಚಿತ್ರ ಇಂದು ಭಾರತದಲ್ಲಿ ಎಲ್ಲಾ ಭಾಷೆ ಸೇರಿ ಸುಮಾರು 10 ಕೋಟಿ ರೂ. ಗಳಿಸುವ ನಿರೀಕ್ಷೆಯಿದೆ. ವಾರಾಂತ್ಯ ಹಿನ್ನೆಲೆ ಗಳಿಕೆ ಏರಿಕೆ ಕಾಣಲಿದೆ ಎಂದು ಅಂದಾಜಿಸಲಾಗಿದೆ.

ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿರುವ ಮೂರನೇ ಸಿನಿಮಾ. ರಜನಿಕಾಂತ್​ ಮುಖ್ಯಭೂಮಿಕೆಯ ಜೈಲರ್​, 2.0 ಸಿನಿಮಾ ನಂತರ ಲಿಯೋ ಅತಿ ಹೆಚ್ಚು ಕಲೆಕ್ಷನ್​ ಮಾಡಿರುವ ಸಿನಿಮಾವಾಗಿ ಹೊರ ಹೊಮ್ಮಿದೆ. ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಲಿಯೋ ವಿಶ್ವಾದ್ಯಂತ 476 ಕೋಟಿ ರೂ. ಕಲೆಕ್ಷನ್​ ಮಾಡಿದೆ.

ಇದನ್ನೂ ಓದಿ:ನಾಳೆ ಹೊರಬೀಳಲಿದೆ 'ಇಂಡಿಯನ್ 2' ಅಪ್​ಡೇಟ್ಸ್.. ಕಮಲ್​ ಹಾಸನ್​​ ಅಭಿಮಾನಿಗಳಲ್ಲಿ ಕುತೂಹಲ

ಲಿಯೋ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಸಂಜಯ್ ದತ್, ತ್ರಿಶಾ, ಅರ್ಜುನ್ ಸರ್ಜಾ, ಮಿಸ್ಕಿನ್ , ಗೌತಮ್ ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮ್ಯಾಥ್ಯೂ ಥೋಮಸ್, ಮನ್ಸೂರ್ ಅಲಿ ಖಾನ್ ಮತ್ತು ಪ್ರಿಯಾ ಆನಂದ್ ಸಹ ಚಿತ್ರದಲ್ಲಿದ್ದಾರೆ. ಮಾಸ್ಟರ್ ನಂತರ ವಿಜಯ್ ಮತ್ತು ಲೋಕೇಶ್ ಕನಕರಾಜ್​​ ಎರಡನೇ ಬಾರಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಸುಂದರಿ ತ್ರಿಷಾ ಕೃಷ್ಣನ್​ ಜೊತೆ​ 14 ವರ್ಷಗಳ ಬ್ರೇಕ್​ ಬಳಿಕ ವಿಜಯ್​ ಕೆಲಸ ಮಾಡಿದ್ದಾರೆ. ಲಿಯೋ ಸಿನಿಮಾಗೂ ಮುನ್ನ ಗಿಲ್ಲಿ, ಕುರುವಿ, ತಿರುಪಾಚಿ, ಆತಿ ಚಿತ್ರಗಳಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು.

ಇದನ್ನೂ ಓದಿ:'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ' ಟೀಸರ್​​ ರಿಲೀಸ್: ಹೆಚ್ಚಾಯ್ತು ಪ್ರೇಕ್ಷಕರ ಕುತೂಹಲ

ABOUT THE AUTHOR

...view details