ವಿಕ್ರಮ್, ಕೈದಿ, ಮಾಸ್ಟರ್ನಂತಹ ಬ್ಲಾಕ್ಬಸ್ಟರ್ ಸಿನಿಮಾಗಳ ನಿರ್ದೇಶಕ ಲೋಕೇಶ್ ಕನಕರಾಜ್ ಮತ್ತು ಕಾಲಿವುಡ್ ಸೂಪರ್ಸ್ಟಾರ್ ದಳಪತಿ ವಿಜಯ್ ಕಾಂಬೋದಲ್ಲಿ ಮೂಡಿಬಂದ ಸಿನಿಮಾ 'ಲಿಯೋ'. ಅಕ್ಟೋಬರ್ 19, ಗುರುವಾರದಂದು ಬಿಡುಗಡೆಯಾದ ಚಿತ್ರ ಮಿಶ್ರ ಪ್ರತಿಕ್ರಿಯೆ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ ಪ್ರಕಾರ, ಆರನೇ ದಿನವಾದ ಇಂದು ಚಿತ್ರದ ಕಲೆಕ್ಷನ್ನಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ.
'ಲಿಯೋ' ಸಿನಿಮಾ ಥಿಯೇಟರ್ಗಳಿಗೆ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ದಳಪತಿ ಅಭಿಮಾನಿಗಳು ಅತಿ ಹೆಚ್ಚು ಸಿನಿಮಾ ವೀಕ್ಷಿಸುತ್ತಿದ್ದಾರೆ. ಆದರೆ, ಲೋಕೇಶ್ ಕನಕರಾಜ್ ಅವರ ಸಿನಿಮಾ ಎಂದರೆ ಜನರಲ್ಲಿ ಹೈ ಲೆವೆಲ್ ನಿರೀಕ್ಷೆಗಳಿರುತ್ತದೆ. ಲಿಯೋ ಸಿನಿಮಾದಲ್ಲಿ ಆ ನಿರೀಕ್ಷೆ ಹುಸಿಯಾಗಿದೆ ಅನ್ನೋದು ಕೆಲವರ ಅಭಿಪ್ರಾಯ. ಕಲೆಕ್ಷನ್ ನೋಡೋದಾದ್ರೆ, ಚಿತ್ರವು ಭಾರತದಲ್ಲಿ 250 ಕೋಟಿ ರೂಪಾಯಿಗಳನ್ನು ತಲುಪುವತ್ತ ಮುನ್ನುಗುತ್ತಿದೆ. ಆದರೆ ಜಾಗತಿಕವಾಗಿ ನೋಡುವುದಾದರೆ, ಚಿತ್ರವು 400 ಕೋಟಿ ರೂಪಾಯಿಗಳನ್ನು ಮೀರಿಸಿದೆ.
ಇದನ್ನೂ ಓದಿ:ಅಬ್ಬಬ್ಬಾ...ವಿಶ್ವಾದ್ಯಂತ 140 ಕೋಟಿ ರೂ. ಗಳಿಸಿದ 'ಲಿಯೋ': ದೇಶೀಯ ಗಲ್ಲಾಪಟ್ಟಿಗೆಯಲ್ಲೇ 60 ಕೋಟಿ ರೂ. ಕಲೆಕ್ಷನ್!
ಆರನೇ ದಿನದ ಕಲೆಕ್ಷನ್?:ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ ಪ್ರಕಾರ, ಲಿಯೋ ಬಿಡುಗಡೆಯಾದ ದಿನ (ಗುರುವಾರ) 64.8 ಕೋಟಿ ರೂ., ಶುಕ್ರವಾರ 35.25 ಕೋಟಿ ರೂ., ಶನಿವಾರ 39.8 ಕೋಟಿ ರೂ., ಭಾನುವಾರ 41.55 ಕೋಟಿ ರೂ. ಗಳಿಸಿದೆ. ಐದನೇ ದಿನವಾದ ಸೋಮವಾರ (ನಿನ್ನೆ) ಭಾರತದಾದ್ಯಂತ ಎಲ್ಲಾ ಭಾಷೆಗಳಲ್ಲಿ 35.19 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಆರನೇ ದಿನವಾದ ಇಂದು ಗಳಿಕೆಯಲ್ಲಿ ಕುಸಿತ ಕಾಣುವ ಸೂಚನೆಯಿದ್ದು, ಭಾರತದಲ್ಲಿ 30.63 ಕೋಟಿ ರೂ. ಗಳಿಸುವ ಸಾಧ್ಯತೆಯಿದೆ. ಸದ್ಯಕ್ಕೆ ಲಿಯೋ ದೇಶೀಯ ಮಾರುಕಟ್ಟೆಯಲ್ಲಿ ಎಲ್ಲಾ ಭಾಷೆಗಳನ್ನು ಒಳಗೊಂಡಂತೆ ಒಟ್ಟು 247.22 ಕೋಟಿ ರೂಪಾಯಿ ಬಾಚಿಕೊಂಡಿದೆ.
ಇನ್ನೂ ಜಾಗತಿಕವಾಗಿ ನೋಡುವುದಾದರೆ, ದಳಪತಿ ವಿಜಯ್ ಅವರ ಆಕ್ಷನ್ ಥ್ರಿಲ್ಲರ್ ಚಿತ್ರವು ಸೋಮವಾರ 400 ಕೋಟಿ ರೂಪಾಯಿ ಗಡಿ ದಾಟಿದೆ. ಚಿತ್ರದ ನಿರ್ಮಾಪಕರ ಪ್ರಕಾರ, ಲಿಯೋ ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ 450 ಕೋಟಿ ರೂಪಾಯಿ ಮೈಲಿಗಲ್ಲನ್ನು ತಲುಪುವ ಹಾದಿಯಲ್ಲಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಸಿನಿಮಾದಲ್ಲಿ ದಳಪತಿ ವಿಜಯ್ ಮುಖ್ಯಪಾತ್ರದಲ್ಲಿ ನಟಿಸಿದ್ದರೆ, ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದು ದತ್ ಅವರ ಮೊದಲ ತಮಿಳು ಚಿತ್ರ. 14 ವರ್ಷಗಳ ಬ್ರೇಕ್‌ನ ಬಳಿಕ ತ್ರಿಷಾ ಕೃಷ್ಣನ್ ಹಾಗೂ ವಿಜಯ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಮಾಸ್ಟರ್ ಸಿನಿಮಾದ ನಂತರ ಲೋಕೇಶ್ ಹಾಗೂ ವಿಜಯ್ 'ಲಿಯೋ'ಗಾಗಿ ಮತ್ತೆ ಒಂದಾಗಿದ್ದಾರೆ.
ಇದನ್ನೂ ಓದಿ:ಇಳಿಕೆ ಕಂಡ 'ಲಿಯೋ' ಕಲೆಕ್ಷನ್: ಮೊದಲ ದಿನ 64, ಎರಡನೇ ದಿನ 36 ಕೋಟಿ ರೂ.