ವಿಜಯ್ ದೇವರಕೊಂಡ ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟ. ಸಮಂತಾ ರುತ್ ಪ್ರಭು ಟಾಲಿವುಡ್ನ ಟಾಪ್ ಹೀರೋಯಿನ್. ಈಗಾಗಲೇ ಸಾಕಷ್ಟು ಹೆಸರು ಸಂಪಾದಿಸಿರುವ ಸಮಂತಾ ಮತ್ತು ಅತಿ ಕಡಿಮೆ ಅವಧಿಯಲ್ಲಿ ಜನಪ್ರಿಯರಾದ ವಿಜಯ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಸಿನಿಮಾ 'ಕುಶಿ' ನಿನ್ನೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ಕಲೆಕ್ಷನ್ ಸಂಖ್ಯೆ ಉತ್ತಮವಾಗಿದೆ.
ಕುಶಿ ಸಿನಿಮಾಗೆ ಸಕಾರಾತ್ಮಕ ಸ್ಪಂದನೆ:ಲೈಗರ್ ಸಿನಿಮಾ ಮೂಲಕ ನಟ ವಿಜಯ್ ದೇವರಕೊಂಡ ಮತ್ತು ಶಾಕುಂತಲಂ ಸಿನಿಮಾ ಮೂಲಕ ನಟಿ ಸಮಂತಾ ರುತ್ ಪ್ರಭು ಕೊಂಚ ಹಿನ್ನೆಡೆ ಅನುಭವಿಸಿದ್ದರು. ಇದೀಗ ಕುಶಿ ಎಂಬ ಕಂಪ್ಲೀಟ್ ಲವ್ ಸ್ಟೋರಿ, ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಮೂಲಕ ಈ ಇಬ್ಬರೂ ಪ್ರೇಕ್ಷಕರ ಎದುರು ಬಂದಿದ್ದಾರೆ. ಶಿವ ನಿರ್ವಾಣ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡಿತ್ತು. ಅಮೆರಿಕದಲ್ಲಿ ನಡೆದ ಪ್ರೀಮಿಯರ್ ಶೋಗಳಲ್ಲೇ ಪಾಸಿಟಿವ್ ರೆಸ್ಪಾನ್ ಸ್ವೀಕರಿಸಿತ್ತು. ವಿಪ್ಲವ್ ಮತ್ತು ಆರಾಧ್ಯ ಪಾತ್ರಗಳಿಗೆ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಜೀವ ತುಂಬಿದ್ದು, ಅದ್ಭುವಾಗಿ ನಟಿಸಿದ್ದಾರೆ ಎಂದು ಸಿನಿಮಾ ನೋಡಿದ ಪ್ರೇಕ್ಷಕರು ತಿಳಿಸಿದ್ದಾರೆ. ಅಲ್ಲದೇ ಕಥಾವಸ್ತುವಿಗೂ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಕುಶಿ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್:ಮೊದಲ ದಿನ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿರುವ ಕುಶಿ ಸಿನಿಮಾ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 9.50 ರಿಂದ 10 ಕೋಟಿ ರೂ. ಕಲೆಕ್ಷನ್ ಮಾಡಿದೆ ಮತ್ತು ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಸುಮಾರು 13.50 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಸಿನಿ ತಜ್ಞರು ತಿಳಿಸಿದ್ದಾರೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಕುಶಿ 15.25 ಕೋಟಿ ರೂ. ಸಂಗ್ರಹ ಮಾಡಿದೆ. ಈ ಮೂಲಕ ಲೈಗರ್ ಮತ್ತು ಶಾಕುಂತಲಂ ಸಿನಿಮಾಗಳಿಂದ ಹಿನ್ನೆಡೆ ಅನುಭವಿಸಿದ್ದ ಸಮಂತಾ - ವಿಜಯ್ಗೆ ಗೆಲ್ಲುವ ಸೂಚನೆ ಸಿಕ್ಕಿದೆ. ಸಿನಿಮಾಗಿರುವ ಪಾಸಿವಿಟ್ ರೆಸ್ಪಾನ್ಸ್ ಹೀಗೆ ಮುಂದುವರಿದರೆ, ಖಂಡಿತ ಗೆಲ್ಲಿಲಿದೆ ಅನ್ನೋದು ಸಿನಿ ಪಂಡಿತರ ಅಭಿಪ್ರಾಯ. ಸಿನಿಮಾ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿ ನಿರ್ಮಾಣಗೊಂಡಿದೆ.