ಕರ್ನಾಟಕ

karnataka

ETV Bharat / entertainment

ಪ್ರಭಾಸ್​ - ಕೃತಿ ಸನೋನ್ ಡೇಟಿಂಗ್​ ವದಂತಿ: ನಟಿಯ ಬಾಳಸಂಗಾತಿಯಾಗುವವರಲ್ಲಿ ಈ ಗುಣಗಳಿರಬೇಕಂತೆ - ಕೃತಿ ಸನೋನ್ ಮದುವೆ

ನಟಿ ಕೃತಿ ಸನೋನ್ ಲವ್​ ಲೈಫ್​ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

Prabhas Kriti Sanon
ಪ್ರಭಾಸ್​ - ಕೃತಿ ಸನೋನ್ ಡೇಟಿಂಗ್​ ವದಂತಿ

By ETV Bharat Karnataka Team

Published : Oct 6, 2023, 1:05 PM IST

Updated : Oct 6, 2023, 1:25 PM IST

ಕೃತಿ ಸನೋನ್ ಬಾಲಿವುಡ್‌ ಬಹುಬೇಡಿಕೆ ನಟಿಯರಲ್ಲೊಬ್ಬರು. ಮಿಮಿ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ನಟಿಗೆ ಇತ್ತೀಚೆಗಷ್ಟೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯೂ ಘೋಷಣೆ ಆಗಿದೆ. ಸದಾ ತಮ್ಮ ವೃತ್ತಿಜೀವನಕ್ಕೆ ಮಹತ್ವ ಕೊಡುವ ನಟಿಯ ಹೆಸರು ಆಗಾಗ್ಗೆ ಆದಿಪುರುಷ್​ ಸಹನಟ ಪ್ರಭಾಸ್ ಜೊತೆ ಕೇಳಿ ಬರುತ್ತದೆ. ಸಿನಿಮಾ ಆರಂಭವಾದಾಗಿನಿಂದಲೂ ಇವರಿಬ್ಬರ ಡೇಟಿಂಗ್ ವದಂತಿಗಳಿವೆ. ಇತ್ತೀಚೆಗಷ್ಟೇ ನಟಿ ರಿಲೇಶನ್​ಶಿಪ್​ ಬಗ್ಗೆ ಮಾತನಾಡಿದ್ದಾರೆ. ಬಾಳ ಸಂಗಾತಿಯಲ್ಲಿ ಇರಬೇಕಾದ ಗುಣಗಳ ಕುರಿತು ತಿಳಿಸಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಕೃತಿ ಸನೋನ್​​, ಸದ್ಯ ತಾವು ಯಾವುದೇ ರಿಲೇಶನ್​​ಶಿಪ್​ನಲ್ಲಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಭಾವಿ ಬಾಳಸಂಗಾತಿಯಲ್ಲಿ ಪ್ರೀತಿ, ಪ್ರಾಮಾಣಿಕತೆ, ಮಹತ್ವಾಕಾಂಕ್ಷೆಗಳಂತಹ ಗುಣಗಳನ್ನು ನಿರೀಕ್ಷಿಸುತ್ತೇನೆ, ಅವುಗಳನ್ನು ಗೌರವಿಸುವುದಾಗಿ ತಿಳಿಸಿದರು. ಏಕೆಂದರೆ ಆ ಗುಣಗಳು ತಮ್ಮನ್ನು ಪ್ರೇರೇಪಿಸುತ್ತವೆ ಎಂದು ತಿಳಿಸಿದರು. ಹಾಗೇ ತಮ್ಮ ಪಾರ್ಟ್​​ನರ್​​ ಸಕತ್​ ಹೈಟ್​ ಇರಬೇಕೆಂದೂ ಕೂಡ ತಿಳಿಸಿದ್ದಾರೆ. ನಟಿಯ ಎತ್ತರದ ಬಗ್ಗೆ ನಿಮಗೆ ವಿಶೇಷ ಪರಿಚಯ ಬೇಕಿಲ್ಲ. ಅದೇನೇ ಇದ್ದರೂ, ನಿಜವಾದ, ಒಳ್ಳೆ ವ್ಯಕ್ತಿಯನ್ನು ಬಾಳಸಂಗಾತಿಯಾಗಿ ಕಂಡುಕೊಳ್ಳುವುದು ನಟಿಯ ಪ್ರಾಥಮಿಕ ಬಯಕೆಯಾಗಿದೆ.

ನಟಿ ತಮ್ಮ ಬಾಳಸಂಗಾತಿಯಾಗುವವರಲ್ಲಿ ಇರಬೇಕಾದ ಗುಣಗಳ ಪೈಕಿ ಹೈಟ್​ ಅನ್ನು ಉಲ್ಲೇಖಿಸಿದ ಹಿನ್ನೆಲೆ, ಸೋಷಿಯಲ್​ ಮೀಡಿಯಾ ಬಳಕೆದಾರರು ಮತ್ತೆ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​ ಹೆಸರನ್ನು ಈ ವಿಷಯಕ್ಕೆ ಎಳೆದು ತಂದಿದ್ದಾರೆ. ಸೋಷಿಯಲ್​ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಮತ್ತೆ ಪ್ರಕೃತಿ (ಪ್ರಭಾಸ್ ಮತ್ತು ಕೃತಿಯನ್ನು ಅಭಿಮಾನಿಗಳು ಪ್ರೀತಿಯಿಂದ ಕರೆಯೋದು ಹೀಗೆ..) ಅನ್ನೋ ಹೆಸರು ಸಖತ್​ ಸದ್ದು ಮಾಡುತ್ತಿದೆ.

ಇದನ್ನೂ ಓದಿ:Dono: ಡೋನೊ ಚಿತ್ರತಂಡಕ್ಕೆ ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​ ಶುಭ ಹಾರೈಕೆ

ಆದಿಪುರುಷ್​ ಸಿನಿಮಾದಲ್ಲಿ ಮೊದಲ ಬಾರಿ ಒಟ್ಟಿಗೆ ಕೆಲಸ ಮಾಡಿರುವ ಕೃತಿ ಸನೋನ್​ ಮತ್ತು ಪ್ರಭಾಸ್​ ಅವರ ಎತ್ತರ ಕ್ರಮವಾಗಿ 5.9, 6.2 ಇದೆ. ಕೃತಿ ತಮ್ಮ ವೈಯಕ್ತಿಕ ಜೀವನದ ಕುರಿತು ಹೆಚ್ಚೇನೂ ಹೇಳದಿದ್ದರೂ, ಸಹೋದರಿ ನೂಪುರ್ ಸನೋನ್​​ ಒಮ್ಮೆ ಕೃತಿ ಅವರ ಸಂಬಂಧದ ಕುರಿತು ಬಹಿರಂಗಪಡಿಸಿದ್ದರು. ಕೃತಿ ಸನೋನ್​ ಈಗಾಗಲೇ ಎರಡು ಬಾರಿ ರಿಲೇಶನ್​ಶಿಪ್​ನಲ್ಲಿದ್ದರು, ಆದ್ರೆ ಅದು ಹೆಚ್ಚು ಸಮಯಕ್ಕೆ ಮುಂದುವರಿಯಲಿಲ್ಲ ಅನ್ನೋದು ಸಹೋದರಿಯ ಮಾತು.

ಇದನ್ನೂ ಓದಿ:ವಿಡಿಯೋ: ರಸ್ತೆ ಬದಿ ಹೃದಯಾಘಾತಕ್ಕೊಳಗಾದ ಅಪರಿಚಿತ: ಎದೆ ಒತ್ತಿ ಜೀವ ಉಳಿಸಿದ ನಟ ಗುರ್ಮೀತ್ ಚೌಧರಿ!

ಕೃತಿ ಸನೋನ್​​ ಕೊನೆಯದಾಗಿ ಆದಿಪುರುಷ್​ ಸಿನಿಮಾದಲ್ಲಿ ಕಾಣಿಸಿಕೊಂಡರು. ಓಂ ರಾವುತ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಸಿನಿಮಾ ಹಿನ್ನೆಡೆ ಕಂಡಿತು. ಮುಂದಿನ ದಿನಗಳಲ್ಲಿ ಶಾಹಿದ್ ಕಪೂರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಟೈಟಲ್​ ಫೈನಲ್​ ಆಗದ ರೊಮ್ಯಾಂಟಿಕ್ ಸಿನಿಮಾದಲ್ಲಿ ಹಿರಿಯ ನಟ ಧರ್ಮೇಂದ್ರ ಕೂಡ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ಇನ್ನೂ ಟೈಗರ್​ ಶ್ರಾಫ್​ ಜೊತೆ ನಟಿಸಿರುವ ಗಣ್​ಪತ್​ 1 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

Last Updated : Oct 6, 2023, 1:25 PM IST

ABOUT THE AUTHOR

...view details