ಕರ್ನಾಟಕ

karnataka

ETV Bharat / entertainment

ಬಿಗ್​ ಬಾಸ್ ಪ್ರೋಮೋ.. ರೂಪೇಶ್​ ರಾಜಣ್ಣ ನೀರಿನ ಪಾಠಕ್ಕೆ ಪ್ರಶಾಂತತೆ ಕಳೆದುಕೊಂಡ ಸಂಬರಗಿ - ಬಿಗ್​ ಬಾಸ್ ಇಂದಿನ ಎಪಿಸೋಡ್

ಕಲರ್ಸ್ ಕನ್ನಡ ವಾಹಿನಿ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್​ ಮಾಡಿದ್ದು, ಇದರಲ್ಲಿ ಪ್ರಶಾಂತ್​ ಸಂಬರಗಿ ಮತ್ತು ರೂಪೇಶ್​ ರಾಜಣ್ಣ ಅವರ ನಡುವೆ ನೀರಿನ ವಿಚಾರವಾಗಿ ಏರು ದನಿಯಲ್ಲಿ ಮಾತಿನ ಚಕಮಕಿ ನಡೆದಿದೆ.

bigg boss fight
ಬಿಗ್​ ಬಾಸ್ ಜಗಳ

By

Published : Sep 28, 2022, 12:25 PM IST

Updated : Sep 28, 2022, 12:33 PM IST

ಆಟ, ವಾದ ವಿವಾದ, ಜಗಳ, ಗುಂಪುಗಾರಿಕೆ, ದ್ವೇಷ, ಪ್ರೀತಿ, ಖುಷಿ ಎಲ್ಲ ರೀತಿಯ ಭಾವನೆಗಳನ್ನು ಹೊಂದಿರುವ ಜಾಗ ಅಂದ್ರೆ ಅದು ಬಿಗ್​ ಬಾಸ್. ಮನೆಯಲ್ಲಿ ಮೊದಲ ವಾರ ಆಟಗಳು ಜೋರಾಗಿವೆ ಜೊತೆಗೆ ಸ್ಪರ್ಧಿಗಳಲ್ಲಿ ಪರಸ್ಪರ ಭಾವನೆಗಳು ವ್ಯಕ್ತವಾಗುತ್ತಿವೆ. ಚಿಕ್ಕ ಚಿಕ್ಕ ವಿಷಯಗಳಲ್ಲೂ ಚರ್ಚೆ ಜೋರಾಗಿದೆ. ಈ ಬಾರಿ ಕೋಪ ಕಡಿಮೆ ಮಾಡುತ್ತೇನೆಂದು ಶಪಥ ಮಾಡಿ ಬಂದಿದ್ದ ಪ್ರಶಾಂತ್​ ಸಂಬರಗಿ ಮೊದಲ ವಾರದಲ್ಲೇ ದನಿ ಏರಿಸಿದ್ದಾರೆ. ಹೌದು, ರೂಪೇಶ್​ ರಾಜಣ್ಣ ಅವರ ನೀರಿನ ಪಾಠಕ್ಕೆ ಪ್ರಶಾಂತ್​ ಸಂಬರಗಿ ಗರಂ ಆಗಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್​ ಮಾಡಿದ್ದು, ಇದರಲ್ಲಿ ಪ್ರಶಾಂತ್​ ಸಂಬರಗಿ ಮತ್ತು ರೂಪೇಶ್​ ರಾಜಣ್ಣ ಅವರ ನಡುವೆ ನೀರಿನ ವಿಚಾರವಾಗಿ ಏರು ದನಿಯಲ್ಲಿ ಮಾತಿನ ಚಕಮಕಿ ನಡೆದಿದೆ. ನೀರನ್ನು ಮಿತವಾಗಿ ಬಳಸಿ ಎಂದು ರೂಪೇಶ್​ ರಾಜಣ್ಣ ಮಾತು ಆರಂಭಿಸಿದ್ದು, ಪ್ರಶಾಂತ್​ ಸಂಬರಗಿ ನೀತಿ ಪಾಠ ಹೇಳಿಕೊಡುವ ಅಗತ್ಯವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕ ವಿಷಯ ದೊಡ್ಡ ಮಟ್ಟದ ಚರ್ಚೆ ಆದಂತಿದ್ದು, ಸಂಪೂರ್ನ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

ಇನ್ನು, ಸ್ಪರ್ಧಿಗಳಲ್ಲಿ ಕೆಲವರು ಮೊದಲೇ ಪರಿಚಯಸ್ಥರು. ಆದರೆ ಮತ್ತೆ ಕೆಲವರು ಭೇಟಿಯಾಗಿದ್ದು, ಈ ಮನೆಯಲ್ಲಿಯೇ. ಹೀಗಾಗಿ ಒಬ್ಬರೊನ್ನಬ್ಬರು ಅರಿತುಕೊಳ್ಳಲು ಕೆಲವು ದಿನಗಳು ಬೇಕೇ ಬೇಕು. ಇದೇ ಕಾರಣಕ್ಕೆ ಬಿಗ್‌ ಬಾಸ್‌ ಎರಡು ದಿನ ಕಳೆದ ಬಳಿಕ ಮೂರನೇ ದಿನ ಬ್ಯಾಂಡ್‌ಗಳನ್ನು ನೀಡಲು ಆದೇಶಿಸಿದ್ದರು. ಈ ಬ್ಯಾಂಡ್​ಗಳನ್ನು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡುವಾಗ ಸ್ಪರ್ಧಿಗಳ ಕೈಯಲ್ಲಿ ಕೊಡಲಾಗಿತ್ತು.

ರಾಕೇಶ್ ಅಡಿಗ ಚಿಂತಾಕ್ರಾಂತ ಎಂಬ ಬ್ಯಾಂಡ್‌ ಅನ್ನು ಮಯೂರಿಗೆ ನೀಡಿದರು. ರೂಪೇಶ್ ರಾಜಣ್ಣ ಚಾಣಕ್ಯ ಕೈಪಟ್ಟಿ ಅನ್ನು ಆರ್ಯವರ್ಧನ್ ಗುರೂಜಿಗೆ ಕೊಟ್ಟರು. ಅನುಪಮಾ ಗೌಡ ವಿದೂಷಕ ಬ್ಯಾಂಡ್‌ ಅನ್ನು ಸದಾ ಎಲ್ಲರನ್ನೂ ನಕ್ಕು ನಗಿಸುತ್ತಿರುವ ಅರುಣ್ ಸಾಗರ್ ಅವರಿಗೆ ನೀಡಿದರು. ನೇಹಾ ಗೌಡ ಸಾಹಸಿ ಕೈಪಟ್ಟಿಯನ್ನ ಫಿಸಿಕಲ್‌ ಟಾಸ್ಕ್ ಅನ್ನು ಅಮೂಲ್ಯ ಗೌಡಗೆ ತೊಡಿಸಿದರು. ಆರ್ಯವರ್ಧನ್ ಪ್ರಶಾಂತ ಎಂಬ ಬ್ಯಾಂಡ್‌ ಅನ್ನು ರೂಪೇಶ್ ಶೆಟ್ಟಿಗೆ ಕೊಟ್ಟರು. ದರ್ಶ್ ಚಂದ್ರಪ್ಪ ಅವರಿಗೆ ದೊರೆತಿದ್ದ ನಾಯಕ ಬ್ಯಾಂಡ್‌ ಅನ್ನು ಅರುಣ್ ಸಾಗರ್ ಅವರಿಗೆ ಹಾಕಿದರು. ದಿವ್ಯಾ ಉರುಡುಗ ಅವರಿಗೆ ಸಿಕ್ಕ ದಯಾಳು ಎಂಬ ಕೈಪಟ್ಟಿ ಅನ್ನು ದರ್ಶ್ ಚಂದ್ರಪ್ಪ ಕೈಗೆ ಕಟ್ಟಿದರು. ಐಶ್ವರ್ಯಗೆ ಲಭಿಸಿದ್ದ ಟೀಚರ್ ಕೈಪಟ್ಟಿಯನ್ನ ತಮ್ಮ ಪಾರ್ಟ್ನರ್‌ ಆಗಿರುವ ದಿವ್ಯಾ ಉರುಡುಗಗೆ ಹಾಕಿದರು. ಇನ್ನೂ ಪ್ರಶಾಂತ್ ಸಂಬರಗಿ ಅವರಿಗೆ ಗೆಳೆಯ ಎಂಬ ಬ್ಯಾಂಡ್‌ ಸಿಕ್ಕಿತ್ತು, ಅದನ್ನು ಅವರು ಅರುಣ್ ಸಾಗರ್‌ಗೆ ಕೊಟ್ಟರು.

ವಿನೋದ್ ಗೊಬ್ಬರಗಾಲ ಅವರಿಗೆ ಸಿಕ್ಕಿದ್ದ ಕಿಲಾಡಿ ಎಂಬ ಬ್ಯಾಂಡ್‌ನ್ನು ಅವರು ಪ್ರಶಾಂತ್ ಸಂಬರಗಿಗೆ ತೊಡಿಸಿದರು. ದೀಪಿಕಾ ದಾಸ್‌ ಅವರಿಗೆ ಸಿಕ್ಕಿದ್ದ ಧೈರ್ಯವಂತ ಬ್ಯಾಂಡ್‌ನ್ನು ಅವರು ಪ್ರಶಾಂತ್ ಸಂಬರಗಿಗೆ ನೀಡಿದರು. ರೂಪೇಶ್ ಶೆಟ್ಟಿ ಬಳಿಯಿದ್ದ ತ್ಯಾಗರಾಜ ಎಂಬ ಕೈಪಟ್ಟಿಯನ್ನ ಅವರು ರಾಕೇಶ್ ಅಡಿಗ ಅವರಿಗೆ ತೊಡಿಸಿದರು. ಕಾವ್ಯಶ್ರೀ ಗೌಡ ಅವರಿಗೆ ಸಿಕ್ಕ ಕಥೆಗಾರ ಎಂಬ ಬ್ಯಾಂಡ್‌ ಅನ್ನು ರೂಪೇಶ್ ರಾಜಣ್ಣ ಅವರಿಗೆ ನೀಡಿದರು. ಮಯೂರಿ ಅವರ ಬಳಿಯಿದ್ದ ಗೊಂಬೆ ಬ್ಯಾಂಡ್‌ನ್ನು ಅವರು ನೇಹಾ ಗೌಡಗೆ ನೀಡಿದರು. ಸಾನ್ಯ ಅಯ್ಯರ್ ಅವರ ಹತ್ತಿರವಿದ್ದ ಕಲಾವಿದ ಬ್ಯಾಂಡ್​ ಅನ್ನು ಪ್ರಶಾಂತ್ ಸಂಬರಗಿಗೆ ತೊಡಿಸಿದರು. ಆರ್ಯವರ್ಧನ್‌ ಗುರೂಜಿಗೆ ಸಿಕ್ಕ ನಂಬಿಕಸ್ತ ಎಂಬ ಬ್ಯಾಂಡ್‌ನ್ನು ಅರುಣ್ ಸಾಗರ್ ನೀಡಿದ್ದು, ಇದನ್ನು ಅಡುಗೆ ವಿಚಾರಕ್ಕಾಗಿ ನೀಡಿರುವುದಾಗಿ ಹೇಳಿದರು. ಇನ್ನೂ ನವಾಜ್ ಬಳಿಯಿದ್ದ ಸುರಸುಂದರಿ ಕೈಪಟ್ಟಿಯನ್ನ ಐಶ್ವರ್ಯ ಅವರಿಗೆ ಕೊಟ್ಟರು.

ಇನ್ನೂ ಮನೆಯಲ್ಲಿ ಎಲ್ಲರೂ ಉತ್ತಮ ರೀತಿಯಲ್ಲಿ ಆಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. 18 ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ನಡೆಯುತ್ತಿದೆ. ಮೊದಲ ವಾರದ ಕ್ಯಾಪ್ಟನ್ಸಿ ಆಯ್ಕೆ​ಗೆ ನಾನಾ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಆ ಪೈಕಿ ಒಂದು ಟಾಸ್ಕ್​ನಲ್ಲಿ ಆಡಿ ಗೆದ್ದು ತೋರಿಸಿದ್ದಾರೆ ದೀಪಿಕಾ.

ಇದನ್ನೂ ಓದಿ:ಬಿಗ್​​ ಬಾಸ್ ಮನೆಯಲ್ಲಿ ಹೊಸಬರು ಹಳಬರ ನಡುವೆ ಪಿರಮಿಡ್ ಆಟ.. ಗೆಲುವು ಯಾರಿಗೆ?

ವೀಕೆಂಡ್​ನಲ್ಲಿ ವಾರದ ಪಂಚಾಯಿತಿ ನಡೆಯಲಿದೆ. ಪ್ರತಿ ದಿನ ಸ್ಪರ್ಧಿಗಳು ಮಾಡಿದ ಸರಿ-ತಪ್ಪುಗಳನ್ನು ಇಟ್ಟುಕೊಂಡು ಕಿಚ್ಚ ಸುದೀಪ್​ ಅವರು ಎಲ್ಲರ ಜತೆ ಮಾತುಕಥೆ ನಡೆಸುತ್ತಾರೆ. ಮೊದಲ ವಾರ ಯಾರು ಎಲಿಮಿನೇಟ್​ ಆಗುತ್ತಾರೆ ಎಂಬುದನ್ನು ತಿಳಿಯುವ ಕೂತೂಹಲ ಹೆಚ್ಚಿದೆ.

Last Updated : Sep 28, 2022, 12:33 PM IST

ABOUT THE AUTHOR

...view details