ಒಟಿಟಿ ಸೀಸನ್ ಮುಗಿದ ಬೆನ್ನಲ್ಲೇ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ನ ಟಿವಿ ಸೀಸನ್ ಆರಂಭಗೊಂಡಿದೆ. ನಿನ್ನೆಯಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರವಾಗುತ್ತಿದೆ. ನಿನ್ನೆ ಬಲು ಉತ್ಸಾಹದಲ್ಲಿ ದೊಡ್ಮನೆಗೆ ಎಂಟ್ರಿ ಪಡೆದ ಸ್ಪರ್ಧಿಗಳ ದನಿ ಇಂದು ಏರಿದೆ. ಕಲರ್ಸ್ ಕನ್ನಡ ಇಂದಿನ ಶೋನ ಪ್ರೋಮೋ ರಿಲೀಸ್ ಮಾಡಿದ್ದು, ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.
ನಿನ್ನೆ ಸಂಜೆ 6 ಗಂಟೆಗೆ ಟಿವಿಯಲ್ಲಿ ಪ್ರಸಾರವಾದ ವರ್ಣರಂಜಿತ ಕಾರ್ಯಕ್ರಮದಲ್ಲಿ ನಟ, ನಿರೂಪಕ ಕಿಚ್ಚ ಸುದೀಪ್ ಒಟ್ಟು 18 ಜನರನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸಿಕೊಟ್ಟಿದ್ದಾರೆ. ನೂರು ದಿನಗಳ ಬಿಗ್ ಬಾಸ್ ಕನ್ನಡ ಸೀಸನ್ 9 ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಈ 9ನೇ ಸೀಸನ್‌ನ ವಿಶೇಷವೇನೆಂದರೆ 9 ಹೊಸ ಸ್ಪರ್ಧಿಗಳ ಜೊತೆ 9 ಅನುಭವಿ ಸ್ಪರ್ಧಿಗಳೂ ಕಣದಲ್ಲಿರುತ್ತಾರೆ. ಇದನ್ನು 'ಪ್ರವೀಣರು ಮತ್ತು ನವೀನರ ಹಣಾಹಣಿ' ಎಂದು ಚಾನಲ್ ಬಣ್ಣಿಸಿದೆ.
ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಕೆಲ ಸ್ಪರ್ಧಿಗಳು ವಾದ ವಿವಾದ ನಡೆಸಿರುವುದನ್ನು ಕಾಣಬಹುದು. ಕಳೆದ ಸೀಸನ್ನಂತೆ ಪ್ರಶಾಂತ್ ಸಂಬರಗಿ ಯಾವುದೋ ವಿಷಯಕ್ಕೆ ಜೋರಾಗಿ ಮಾತನಾಡಿದ್ದಾರೆ. ಆರ್ಯವರ್ಧನ್ ಗುರೂಜಿ, ದಿವ್ಯ ಉರುಡುಗ, ದರ್ಶ್ ಚಂದ್ರಪ್ಪ ಅವರ ಸದ್ದು ಕೂಡ ಜೋರಾಗಿಯೇ ಇದೆ. ನಿನ್ನೆ ತಾನೇ ಎಂಟ್ರಿ ಪಡೆದವರ ಮಧ್ಯೆ ಮಾತಿನ ಚಕಮಕಿ ಏರಿರುವುದು ಪ್ರೇಕ್ಷಕರ ಆಶ್ಚರ್ಯ, ಕುತೂಹಲಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಮನೆಯ ಸ್ಪರ್ಧಿಗಳು:
1) ನಟ, ಕಲಾ ನಿರ್ದೇಶಕ, ರಂಗಭೂಮಿ ಪ್ರತಿಭೆ ಅರುಣ್ ಸಾಗರ್.
2) ಅಶ್ವಿನಿ ನಕ್ಷತ್ರ ಧಾರವಾಹಿ ಖ್ಯಾತಿಯ ನಟಿ ಮಯೂರಿ.
3) ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್.
4) ಸಿನಿಮಾಗಳ ರಿವ್ಯೂ ಡಿಫರೆಂಟಾಗಿ ಕೊಡೋ ನವಾಝ್.
5) ಸೀನಸ್ 8ರ ಎರಡನೇ ರನ್ನರ್ ಅಪ್ ದಿವ್ಯಾ ಉರುಡುಗ.
6) ಕಿರುತೆರೆ ನಟ, ಉದ್ಯಮಿ ದರ್ಶ್ ಚಂದ್ರಪ್ಪ
7) ಪ್ರಶಾಂತ್ ಸಂಬರಗಿ ಮತ್ತೊಮ್ಮೆ ಮನೆಯೊಳಗೆ ಪ್ರವೇಶಿಸಿದ್ದಾರೆ.