ಕರ್ನಾಟಕ

karnataka

ETV Bharat / entertainment

ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದ ಕಬ್ಜ.. ಸೀಕ್ವೆಲ್​​ಗೆ ಕಥೆ ರೆಡಿಯೆಂದ ನಿರ್ದೇಶಕ - kabzaa 2

ಪ್ಯಾನ್​ ಇಂಡಿಯಾ ಕಬ್ಜ ಸಿನಿಮಾ ಮೊದಲ ದಿನವೇ 54 ಕೋಟಿ ರೂ. ಕಲೆಕ್ಷನ್​ ಮಾಡುವ ಮೂಲಕ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ.

kabzaa box office collection
ಕಬ್ಜ ಬಾಕ್ಸ್ ಆಫೀಸ್‌ ಕಲೆಕ್ಷನ್​

By

Published : Mar 18, 2023, 6:37 PM IST

ಕಬ್ಜ ಅಬ್ಬರಕ್ಕೆ ಚಿತ್ರರಂಗದ ನೆಲ ಕಂಪಿಸಿದೆ. ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ. 54 ಕೋಟಿ ರೂ. ಸ್ಯಾಂಡಲ್​ವುಡ್​ ನಿರ್ದೇಶಕ ಕಂ ನಿರ್ಮಾಪಕ ಆರ್.ಚಂದ್ರು ತೆಕ್ಕೆಗೆ ಬಂದು ಸೇರಿದೆ. ಇಂಥಹದ್ದೊಂದು ಬ್ಲಾಕ್ ಬಸ್ಟರ್ ಸಮಾಚಾರ ಸದ್ಯಕ್ಕೆ ಕರುನಾಡಲ್ಲಿ ಅಷ್ಟೇ ಅಲ್ಲ, ಅಖಂಡ ಭಾರತದಲ್ಲಿ ಸದ್ದು ಮಾಡುತ್ತಿದೆ.

ಮೊದಲ ದಿನವೇ 54 ಕೋಟಿ ರೂ. ಕಲೆಕ್ಷನ್​ ಮಾಡೋದು ಸುಲಭ ಅಲ್ಲ. ಈ ಸ್ಪರ್ಧಾತಕವಾದ ಯುಗದಲ್ಲಿ ಕಬ್ಜ ಈ ಸಾಧನೆ ಮಾಡಿದ್ದು, ಕನ್ನಡ ಚಿತ್ರರಂಗದ ಹಿರಿಮೆ ಹೆಚ್ಚಿದೆ. ಅನೇಕರು ಕಬ್ಜ ಮೊದಲ ದಿನನ ಕಲೆಕ್ಷನ್​​ ಸಂಖ್ಯೆಯನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಆದರೆ ಈ ಪ್ಯಾನ್ ಇಂಡಿಯಾ ಸಿನಿಮಾ ವಿಶ್ವದಾದ್ಯಂತ ತೆರೆಕಂಡಿರುವ ವಿಚಾರ ನಿಮ್ಮ ಗಮನಕ್ಕೆ ಇರಲಿ.

ಅಪ್ಪು ಜನ್ಮದಿನ ಹಿನ್ನೆಲೆ ನಿನ್ನೆ ವಿಶ್ವದ 4,000ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. ಬಿಡುಗಡೆಗೂ ಮೊದಲು ಸಿನಿ ರಸಿಕರಲ್ಲಿ ಕುತೂಹಲ ಹುಟ್ಟಿಸಿದ್ದ ಈ ಸಿನಿಮಾ ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಕಬ್ಜ ಬಾಕ್ಸ್ ಆಫೀಸ್‌ ಕಲೆಕ್ಷನ್​

ಕಬ್ಜ ಬಾಕ್ಸ್ ಆಫೀಸ್‌ ಕಲೆಕ್ಷನ್​:ಸದ್ಯದ ಲೆಕ್ಕಾಚಾರದ ಪ್ರಕಾರ, ಕಬ್ಜ ಕರ್ನಾಟಕದಲ್ಲಿ ಮೊದಲ ದಿನ 20 ಕೋಟಿ ರೂ., ಹಿಂದಿ ಪ್ರದೇಶದವರ ಕಾಣಿಕೆ 12 ಕೋಟಿ ರೂ., ತೆಲುಗು ರಾಜ್ಯಗಳಿಂದ 7 ಕೋಟಿ ರೂ., ತಮಿಳು ಪ್ರೇಕ್ಷಕರಿಂದ 5 ಕೋಟಿ ರೂ., ಮಲಯಾಳಂನಿಂದ 3 ಕೋಟಿ ರೂ., ಹೊರ ದೇಶಗಳಿಂದ 7 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಕಬ್ಜ ಮೊದಲ ದಿನ 54 ಕೋಟಿ ರೂ. ಸಂಗ್ರಹಿಸಿದೆ ಎಂಬ ಮಾಹಿತಿ ಇದೆ.

ತಮ್ಮ ಚಿತ್ರದ ಮೂಲಕ ಮೊದಲ ದಿನ 54 ಕೋಟಿ ರೂ. ಗಳಿಸಿರುವ ರಿಯಲ್​ ಸ್ಟಾರ್​ ಉಪೇಂದ್ರ ಸದ್ಯಕ್ಕೆ ಗಂಧದಗುಡಿಯ ನಂಬರ್ ಓನ್ ನಟನಂತೆ ಅನೇಕರಿಗೆ ಕಾಣ್ತಿದ್ದಾರೆ. ಅಂತೆ ಕಂತೆ ಪ್ರಕಾರ ನೋಡಲು ಹೋದ್ರೆ ಯಶ್ ಮತ್ತು ರಿಷಬ್ ಶೆಟ್ಟಿ ಅವರನ್ನೂ ರಿಯಲ್ ಸ್ಟಾರ್ ಉಪ್ಪಿ ಸದ್ಯಕ್ಕೆ ಹಿಂದಿಕ್ಕಿದ್ದಾರೆ.

ಹೌದು, ಕೆ.ಜಿ.ಎಫ್ ಚಿತ್ರದ ಮೊದಲ ಭಾಗ ಮೊದಲ ದಿನ ಹಿಂದಿಯಲ್ಲಿ ಎರಡು ಕೋಟಿ ಗಳಿಸಿತ್ತು. ಎರಡನೇ ಭಾಗ ಕೇವಲ ಹಿಂದಿಯಲ್ಲಿಯೇ 53 ಕೋಟಿ ರೂ. ಗಳಿಸಿತ್ತು. ಕಾಂತಾರ ಮೊದಲ ದಿನ ಉತ್ತರ ಭಾರತದಲ್ಲಿ ಒಂದು ಕೋಟಿ ಇಪ್ಪತೇಳು ಲಕ್ಷ ರೂ. ಗಳಿಸಿತ್ತು. ಆದ್ರೆ ಕಬ್ಜ ಹಿಂದಿಯಲ್ಲಿ ಮೊದಲ ದಿನ ಗಳಿಸಿದ್ದು 12 ಕೋಟಿ ರೂ., ಹೀಗಾಗಿ ಕಬ್ಜ ಚಿತ್ರಕ್ಕೆ ಸದ್ಯಕ್ಕೆ ಅನೇಕರು ಮೊದಲ ಸ್ಥಾನ ನೀಡ್ತಿದ್ದಾರೆ. ಇನ್ನೂ ಎರಡನೇ ದಿನ ಕಬ್ಜ ನೋಡಲು ನೂಕು ನುಗ್ಗಲು ಮುಂದುವರೆದಿದೆ. ಇದಕ್ಕೆ ಕೈಗನ್ನಡಿಯೆಂಬಂತೆ ಕಬ್ಜ ವೀಕ್ಷಣೆಗೆ ಪರದೆಗಳ ಸಂಖ್ಯೆ ಕೂಡ ಹೆಚ್ಚಾಗಿದೆ.

ಇದನ್ನೂ ಓದಿ:ಅಂಡರ್ ವರ್ಲ್ಡ್ ಕಥೆ 'ಕಬ್ಜ' ಕಮಾಲ್: ಸೀಕ್ವೆಲ್​ ನಿರ್ಮಾಣಕ್ಕೆ ಪ್ರೇಕ್ಷಕರ ಒತ್ತಾಯ

ಇದೆಲ್ಲದರ ನಡುವೆ ಕಬ್ಜ ತೆರೆಗೆ ಬಂದ ನಂತರ ಕಬ್ಜ 2 ಯಾವಾಗ ಅನ್ನುವ ಪ್ರಶ್ನೆ ಕೂಡ ಹೆಚ್ಚಾಗಿದೆ. ಆರ್ ಚಂದ್ರು ಅವರ ಬಳಿ ಅನೇಕರು ಇದೇ ಪ್ರಶ್ನೆಯನ್ನು ಕೇಳಿಯೂ ಆಗಿದೆ. ಭಾರೀ ಒತ್ತಾಯದ ಮೇರೆಗೆ ನಿರ್ದೇಶಕ ಆರ್. ಚಂದ್ರು ಉತ್ತರವನ್ನೂ ಕೊಟ್ಟಿದ್ದಾರೆ. ಕಬ್ಜದ ಮುಂದುವರೆದ ಭಾಗದ ಕಥೆ ಸಿದ್ಧವಿದೆ ಎಂದು ನಸು ನಕ್ಕಿದ್ದಾರೆ. ಎರಡನೇ ಭಾಗದಲ್ಲಿ ಶಿವಣ್ಣನೇ ಅಧಿಪತಿ ಅನ್ನುವುದು ಈಗಾಗ್ಲೇ ಗೊತ್ತಾಗಿದೆ.

ಇದನ್ನೂ ಓದಿ:ಟಾಲಿವುಡ್ ಪವರ್ ಸ್ಟಾರ್​ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಾ ಕಬ್ಜ ನಿರ್ದೇಶಕ ಆರ್​ ಚಂದ್ರು?!

ABOUT THE AUTHOR

...view details