ಟಾಲಿವುಡ್ ಬಹುಬೇಡಿಕೆ ನಟ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ಖ್ಯಾತಿಯ ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ: ದಿ ರೂಲ್' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಶೂಟಿಂಗ್ ಅಡ್ಡಕ್ಕೆ ಸೂಪರ್ ಹಿಟ್ 'ಆರ್ಆರ್ಆರ್' ತಾರೆ ಜೂನಿಯರ್ ಎನ್ಟಿಆರ್ ಎಂಟ್ರಿ ಕೊಟ್ಟಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದ 'ಪುಷ್ಪ : ದಿ ರೈಸ್' ಚಿತ್ರ 2021ರಲ್ಲಿ ಬಿಡುಗಡೆ ಅಗಿ ಧೂಳೆಬ್ಬಿಸಿತ್ತು. 'ಪುಷ್ಪ: ದಿ ರೈಸ್'ನ ಸೀಕ್ವೆಲ್ 'ಪುಷ್ಪ: ದಿ ರೂಲ್' ಈ ವರ್ಷ ತೆರೆಕಾಣಲಿರುವ ಬಹು ನಿರೀಕ್ಷಿತ ಚಿತ್ರ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಚಿತ್ರೀಕರಣ ಜೋರಾಗೆ ನಡೆಯುತ್ತಿದ್ದು ತಾರಾಗಣ ಈಗಾಗಲೇ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಇತ್ತೀಚೆಗೆ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕಾಣಿಸಿಕೊಂಡರು. ಅಲ್ಲು ಅರ್ಜುನ್ ಅವರ ಮುಂಬರುವ ಈ ಬಹುನಿರೀಕ್ಷಿತ ಚಿತ್ರ 'ಪುಷ್ಪ 2'ರ ಸೆಟ್ನಲ್ಲಿ ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡಿರುವುದು ಕಂಡು ಬಂದಿದೆ. ಪುಷ್ಪಾ ಸೆಟ್ನಿಂದ ಆರ್ಆರ್ಆರ್ ತಾರೆಯ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಜೂನಿಯರ್ ಎನ್ಟಿಆರ್ ಸೆಟ್ಗೆ ಏಕೆ ಭೇಟಿ ನೀಡಿದ್ದರು ಎಂಬುದು ಸ್ಪಷ್ಟವಾಗಿಲ್ಲ. 'ಪುಷ್ಪ: ದಿ ರೂಲ್'ನಲ್ಲಿ ನಟಿಸಲಿದ್ದಾರೋ ಅಥವಾ ಗೆಳೆಯ ಅಲ್ಲು ಅರ್ಜುನ್ ಅವರನ್ನು ಭೇಟಿ ಆಗಲು ಭೇಟಿ ಕೊಟ್ಟಿದ್ದಾರೋ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಸುಕುಮಾರ್ ನಿರ್ದೇಶನದ ಪುಷ್ಪ ಮೊದಲ ಭಾಗದಲ್ಲಿ ಅಲ್ಲು ಅರ್ಜುನ್ ಟ್ರಕ್ ಡ್ರೈವರ್ ಪಾತ್ರ ನಿರ್ವಹಿಸಿದ್ದಾರೆ. ಅವರು ಕೆಂಪು ಚಂದನವನ್ನು ಕಳ್ಳಸಾಗಣೆ ಮಾಡುವ ಪಾತ್ರ ನಿಭಾಯಿಸಿದ್ದಾರೆ. ಶ್ರೀವಲ್ಲಿ ಪಾತ್ರದಲ್ಲಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. 'ಪುಷ್ಪ 2' ಕಥೆ ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಸುತ್ತ ಸುತ್ತುತ್ತದೆ.