ಕರ್ನಾಟಕ

karnataka

ETV Bharat / entertainment

Jersey Postponed: ಗೊತ್ತಿದ್ದೂ KGF-2 ಎದುರು ಬಂದ್ರು.. ಕೊನೆಗೆ ಮುಂದೂಡಿದ್ರು! - ಬೀಸ್ಟ್

KGF ಚಾಪ್ಟರ್ 2 ಸಿನಿಮಾ ಎದುರು ಬಿಡುಗಡೆಯಾಗಲಿದ್ದ ಜರ್ಸಿ ಚಿತ್ರ ಮುಂದೂಡಲ್ಪಟ್ಟಿದೆ. ಏಪ್ರಿಲ್ 22 ರಂದು ಬಿಡುಗಡೆ ಮಾಡುವುದಾಗಿ ಜರ್ಸಿ ತಂಡ ಪ್ರಕಟಿಸಿದೆ.

Jersey POSTPONED
Jersey POSTPONED

By

Published : Apr 11, 2022, 11:12 AM IST

ವಿಶ್ವದಾದ್ಯಂತ ಕ್ರೇಜ್ ಹುಟ್ಟಿಸಿರುವ ಕೆಜಿಎಫ್​ ಚಾಪ್ಟರ್ 2 ಸಿನಿಮಾ ಏಪ್ರಿಲ್ 14 ರಂದು ಗ್ರ್ಯಾಂಡ್ ಬಿಡುಗಡೆಗೆ ಸಿದ್ಧವಾಗಿದೆ. ಟಿಕೆಟ್ ಬುಕ್ಕಿಂಗ್​ನಲ್ಲಿ ದೇಶಾದ್ಯಂತ ಕ್ರೇಜ್ ಶುರುವಾಗಿದೆ. ಈ ಮಧ್ಯೆ ಕೆಜಿಎಫ್ ಎದುರು ಬಿಡುಗಡೆಗೆ ಸನ್ನದ್ಧವಾಗಿದ್ದ ಶಾಹಿದ್ ಕಪೂರ್ ಅಭಿನಯದ ಜರ್ಸಿ ಚಿತ್ರ ಕೊನೆಗೂ ಮುಂದೂಡಲ್ಪಟ್ಟಿದೆ. ಹೌದು, ಏಪ್ರಿಲ್ 14 ರಂದು ಜರ್ಸಿ ಬಿಡುಗಡೆ ಮಾಡಲು ತಂಡ ನಿರ್ಧರಿಸಿತ್ತು. ಆದ್ರೆ ಇದೀಗ ದಿಢೀರ್​​ನೇ ದಿನಾಂಕ ಮುಂದೂಡಿ ಏ.22 ರಂದು ರಿಲೀಸ್ ಮಾಡುವುದಾಗಿ ತಿಳಿಸಿದೆ. ಈ ಮೂಲಕ ಬಾಲಿವುಡ್​ ಅಂಗಳದಲ್ಲಿ ರಾಕಿಂಗ್ ಸ್ಟಾರ್ ​ಒನ್ ಮ್ಯಾನ್ ಶೋ ದಂಡಯಾತ್ರೆ ಮಾಡುವುದು ಪಕ್ಕಾ ಆಗಿದೆ.

ಏಪ್ರಿಲ್ 14 ರಂದು ಕೆಜಿಎಫ್​ 2 ಬಿಡುಗಡೆ ಮಾಡುವುದಾಗಿ ಚಿತ್ರ ತಂಡ 8 ತಿಂಗಳ ಮೊದಲೇ ಘೋಷಿಸಿತ್ತು. ಆ ಬಳಿಕ ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಚಿತ್ರ ತಂಡ ಕೂಡ ಕೆಜಿಎಫ್ ಎದುರು ಬರುವುದಾಗಿ ಪ್ರಕಟಿಸಿತ್ತು. ಆದ್ರೆ ಕಾರಣಾಂತರಗಳಿಂದ ಅಮಿರ್ ಖಾನ್ ಚಿತ್ರ ಬಿಡುಗಡೆ ಮುಂದೂಡಿದ್ದರು. ಈ ಬೆನ್ನಲ್ಲೇ ಜರ್ಸಿ ತಂಡ ಕೆಜಿಎಫ್ ಎದುರು ಬಿಡುಗಡೆ ಮಾಡುವ ಧೈರ್ಯ ತೋರಿ, ಬಾಕ್ಸ್ ಆಫೀಸ್​ ವಾರ್​ ಮುನ್ಸೂಚನೆ ನೀಡಿತ್ತು.

ಆದ್ರೆ ವಿಶ್ವದಾದ್ಯಂತ ರಾಕಿ ಬಾಯ್ ಹವಾ ಜೋರಾಗಿದೆ. ಎಲ್ಲೆಡೆ ಕೆಜಿಎಫ್​ ಸದ್ದು ಮಾಡುತ್ತಿದ್ದು, ಅಡ್ವಾನ್ಸ್ ಬುಕ್ಕಿಂಗ್​ನಲ್ಲಿ ದಾಖಲೆ ಬರೆಯುತ್ತಿದೆ. ಹಿಂದಿ ಟಿಕೆಟ್ ಬುಕ್ಕಿಂಗ್​ನಲ್ಲೂ ಹೊಸ ಮೈಲಿಗಲ್ಲು ನೆಡುವುದು ಪಕ್ಕಾ ಆಗಿದೆ. ಈ ಬೆನ್ನಲ್ಲೇ ಬಿಡುಗಡೆಗೆ ಮೂರು ದಿನ ಇರುವಾಗಲೇ ಜರ್ಸಿ ತನ್ನ ನಡೆ ಬದಲಿಸಿ, ಚಿತ್ರ ಬಿಡುಗಡೆಯನ್ನು ಏಪ್ರಿಲ್​ 22ಕ್ಕೆ ಮುಂದೂಡಿದೆ. ಶಾಹಿದ್ ಕಪೂರ್ ಹಾಗೂ ಮೃನಾಲ್ ಠಾಕೂರ್ ಅಭಿನಯದ ಜರ್ಸಿ ಚಿತ್ರ ಈಗಾಗಲೇ 3-4 ಬಾರಿ ಮುಂದೂಡಲ್ಪಟ್ಟಿತ್ತು. ಇದೀಗ ಕೆಜಿಎಫ್​ 2 ಜೊತೆಗಿನ ಗುದ್ದಾಟ ತಪ್ಪಿಸಲು ಮತ್ತೊಮ್ಮೆ ಮುಂದೂಡಿದೆ.

(ಇದನ್ನೂ ಓದಿ: ಟಿಕೆಟ್ ಬುಕ್ಕಿಂಗ್​ನಲ್ಲಿ RRR​​ ಸಿನಿಮಾ‌ ದಾಖಲೆ ಮುರಿದ ಕೆಜಿಎಫ್ ಚಾಪ್ಟರ್ 2?)

ABOUT THE AUTHOR

...view details