ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಭೋಲಾಶಂಕರ್ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವಿಕರಿಸಿದೆ. ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 'ಭೋಲಾಶಂಕರ್' ಸೇರಿದಂತೆ ಬಹುನಿರೀಕ್ಷಿತ ಚಿತ್ರಗಳಾದ ಜೈಲರ್, ಗದರ್ 2, ಓಎಂಜಿ 2 ಕೂಡ ಇದೇ ವಾರ ತೆರೆಕಂಡ ಹಿನ್ನೆಲೆ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ಏರ್ಪಟ್ಟಿದೆ. 'ಭೋಲಾಶಂಕರ್' ಉತ್ತಮ ಪ್ರದರ್ಶನ ಕಾಣುತ್ತಿದೆಯಾದರೂ, ಸೌತ್ ಸಿನಿಮಾ ರಂಗದಲ್ಲಿ ಜೈಲರ್ ಹೆಚ್ಚು ಸದ್ದು ಮಾಡುತ್ತಿದೆ.
ಮೆಹರ್ ರಮೇಶ್ ನಿರ್ದೇಶನದ ಭೋಲಾ ಶಂಕರ್ ಸಿನಿಮಾದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ಮುಖ್ಯಪಾತ್ರದಲ್ಲಿ ಅಭಿನಯಿದ್ದಾರೆ. ಭಾರಿ ನಿರೀಕ್ಷೆಗಳೊಂದಿಗೆ ಬಿಡುಗಡೆ ಆದ ಈ ಸಿನಿಮಾ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಮೆಗಾಸ್ಟಾರ್ ಅಭಿಮಾನಿಗಳು, ಪ್ರೇಕ್ಷಕರು ಚಿತ್ರದ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ. ಆದ್ರೆ ಈ ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ 28 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ. ತೆಲುಗು ರಾಜ್ಯಗಳಲ್ಲೇ 15.51 ಕೋಟಿ ರೂ. ಸಂಪಾದನೆ ಮಾಡಿದೆ. ಆದ್ರೀಗ ಸಿನಿಮಾ ಸಂಬಂಧ ನೆಗೆಟಿವ್ ಟಾಕ್ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಕಲೆಕ್ಷನ್ ಕುಸಿತ ಕಾಣುವ ಸಾಧ್ಯತೆಗಳಿವೆ.
ಈ ಸಿನಿಮಾ 1990 ರ ಸಂದರ್ಭ ಬಂದಿದ್ದರೆ ಸೂಪರ್ ಹಿಟ್ ಆಗುತ್ತಿತ್ತು. 20 ವರ್ಷಗಳ ಹಿಂದೆ ಬರಬೇಕಾದ ಸಿನಿಮಾ ಈಗ ಬಂದಿದೆ ಎಂದು ಕೆಲ ವಿಕ್ಷಕರು ಟೀಕಿಸಿದ್ದಾರೆ. ಸೌತ್ ಸೂಪರ್ ಸ್ಟಾರ್ಳಾದ ರಜನಿಕಾಂತ್, ಕಮಲ್ ಹಾಸನ್ ಅವರಂತಹ ದೊಡ್ಡ ಸ್ಟಾರ್ಗಳು ತಮ್ಮ ವಯಸ್ಸಿಗೆ ತಕ್ಕ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರೂ, ಮೆಗಾಸ್ಟಾರ್ ಇನ್ನೂ ಹಿಂದೆ ಇದ್ದಾರೆ. ಹಳೇ ಡ್ಯಾನ್ಸ್, ರೊಮ್ಯಾನ್ಸ್ ಶೈಲಿಯನ್ನು ನಿಲ್ಲಿಸಬೇಕು. ಡ್ಯಾನ್ಸ್ ಮಾಡಬೇಕೆಂದರೆ ಹೊಸ ಕೊರಿಯಾಗ್ರಾಫರ್ಗಳನ್ನು ನೇಮಿಸಿಕೊಳ್ಳಲಲಿ ಎಂಬುದು ಹಲವರ ಅಭಿಪ್ರಾಯ.