ಜನಾನ್ ಸಿನಿಮಾ ಸೆಪ್ಟೆಂಬರ್ 7 ರಂದು ತೆರೆಕಂಡು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ಅಂಕಿಅಂಶ ಅತ್ಯುತ್ತಮವಾಗಿದೆ. ಸ್ಟಾರ್ ಡೈರೆಕ್ಟರ್ ಪ್ಲಸ್ ಸೂಪರ್ ಸ್ಟಾರ್ಗಳನ್ನೊಳಗೊಂಡ ಈ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದ್ರೀಗ ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಅಸಮಧಾನಗೊಂಡಿದ್ದಾರೆಂಬ ಗುಮಾನಿ ಎದ್ದಿದೆ.
ನಯನತಾರಾ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ. ಇದೇ ಮೊದಲ ಬಾರಿಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಜವಾನ್ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಮೂಡಿ ಬಂದಿದೆ. ನಯನತಾರಾ ಪಾತ್ರಕ್ಕೆ, ನಟನೆಗೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಆದ್ರೆ ಈ ವಿಚಾರದಲ್ಲಿ ನಟಿಗೆ ಸಂತೃಪ್ತಿ ಇಲ್ಲ. ಇದಕ್ಕೆ ಬಾಲಿವುಡ್ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಕಾರಣ ಎಂದು ಹೇಳಲಾಗಿದೆ.
ದೀಪಿಕಾ ಅವರದ್ದು ಅತಿಥಿ ಪಾತ್ರವಾದರೂ ಅವರನ್ನು ಅತ್ಯಂತ ಪ್ರಮುಖ ಪಾತ್ರದಲ್ಲಿರುವಂತೆ ತೋರಿಸಲಾಗಿದೆ. ಇದೊಂದು ಶಾರುಖ್ ದೀಪಿಕಾ ಸಿನಿಮಾದಂತೆ ಕಾಣುತ್ತಿದೆ. ತಮ್ಮ ಪಾತ್ರದ ಮಹತ್ವ ಕಡಿಮೆ ಇದೆ ಎಂದು ನಯನತಾರಾ ಅಸಮಾಧಾನ ಹೊರಹಾಕಿದ್ದಾರೆಂದು ಹೇಳಲಾಗುತ್ತಿದೆ.
ಈ ಬಗ್ಗೆ ಚಿತ್ರದ ನಿರ್ದೇಶಕ ಅಟ್ಲೀ ಕುಮಾರ್ ಬಗ್ಗೆ ನಯನತಾರಾ ಅಸಮಧಾನಗೊಂಡಿದ್ದಾರೆ. ಮುಂದೆ ಅವರೊಂದಿಗೆ, ಬಾಲಿವುಡ್ನಲ್ಲಿ ಕೆಲಸ ಮಾಡುವುದಿಲ್ಲ ಎಂದೂ ಕೂಡ ಹೇಳಿದ್ದಾರಂತೆ. ವರದಿಗಳನ್ನು ನಂಬುವುದಾದರೆ, ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ಪಾತ್ರ ತಮ್ಮ ಪಾತ್ರವನ್ನು ಮರೆ ಮಾಡಿದೆ. ಅಷ್ಟರ ಮಟ್ಟಿಗೆ ದೀಪಿಕಾರ ಪಾತ್ರವನ್ನು ಚಿತ್ರಿಸಲಾಗಿದೆ. ಪಡುಕೋಣೆ ಅವರ ಸ್ಕ್ರೀನ್ ಟೈಮ್ ನೋಡಿದ್ರೆ ಇದನ್ನು ಅತಿಥಿ ಪಾತ್ರ ಎನ್ನಲು ಸಾಧ್ಯವಿಲ್ಲ ಎಂದು ದಕ್ಷಿಣ ಚಿತ್ರರಂಗದ ಚೆಲುವೆ ನಯನತಾರಾ ತಿಳಿಸಿದ್ದಾರಂತೆ.