ಕರ್ನಾಟಕ

karnataka

ETV Bharat / entertainment

ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳು: ರಾಮ್ ಚರಣ್ ನಂಬರ್​ 1, ಎರಡನೇ ಸ್ಥಾನದಲ್ಲಿ ದೀಪಿಕಾ - ಐಎಂಡಿಬಿ

'IMDB' ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡಿದೆ.

IMDb Popular Indian Celebrities list
ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳು

By

Published : Mar 21, 2023, 5:51 PM IST

ಟಾಲಿವುಡ್​ ಸೂಪರ್​ ಸ್ಟಾರ್ ರಾಮ್ ಚರಣ್ ತೆಲುಗು ಮಾತನಾಡುವ ಎರಡೂ ರಾಜ್ಯಗಳಲ್ಲಿ ಹೆಚ್ಚು ಪ್ರೀತಿಸಲ್ಪಡುವ ತಾರೆಗಳ ಪೈಕಿ ಒಬ್ಬರು. ಆರ್​ಆರ್​ಆರ್​, ಆಸ್ಕರ್​ 2023 ಈ ಅಭಿಮಾನಿಗಳ ಸಂಖ್ಯೆ ಹಚ್ಚಳಕ್ಕೆ ನೆರವಾಗಿದೆ. ರಾಜ್ಯ, ದೇಶ ಮಾತ್ರವಲ್ಲ, ಸಾಗರೋತ್ತರ ಪ್ರದೇಶಗಳಲ್ಲಿಯೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ಸ್ ಗರಿ ಸಿಕ್ಕಾಗಿನಿಂದ ಆರ್​ಆರ್​ಆರ್​ ತಂಡ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿರದ ದಿನಗಳಿಲ್ಲ ನೋಡಿ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ಜನಪ್ರಿಯತೆ ಅನೇಕ ಪಟ್ಟು ಹೆಚ್ಚಾಗಿದೆ. 'IMDB'ಯ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿ ಅದಕ್ಕೆ ಸಾಕ್ಷಿ.

ಉಪಾಸನಾ ಜೊತೆ ನಟ ರಾಮ್​ಚರಣ್​

ಜಾಗತಿಕವಾಗಿ ಟ್ರೆಂಡಿಂಗ್‌ನಲ್ಲಿರುವ ಭಾರತೀಯ ತಾರೆಗಳ ಪಟ್ಟಿಯನ್ನು 'IMDB' ಬಿಡುಗಡೆ ಮಾಡುತ್ತದೆ. ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಸೇರಿದಂತೆ ಪ್ರಮುಖ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳು ಯಾರೆಲ್ಲಾ ಟ್ರೆಂಡಿಗ್​ನಲ್ಲಿದ್ದಾರೆ ಎಂಬುದನ್ನು ತಿಳಿಸುತ್ತದೆ. ಈ ವಾರದಲ್ಲಿ ನಟ ರಾಮ್ ಚರಣ್ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ದೀಪಿಕಾ ಪಡುಕೋಣೆ ಎರಡನೇ ಮತ್ತು ಅಲಿಯಾ ಭಟ್ ಮೂರನೇ ಸ್ಥಾನದಲ್ಲಿದ್ದಾರೆ.

ರಾಮ್ ಚರಣ್ ಪತ್ನಿ ಉಪಾಸನಾ ಇನ್​ಸ್ಟಾ ಸ್ಟೋರಿ

ನಟಿ ನಿಮ್ರತ್ ಕೌರ್ ನಾಲ್ಕನೇ ಸ್ಥಾನ ಪಡೆದುಕೊಂಡರೆ, ಪ್ರಿಯಾ ಬ್ಯಾನರ್ಜಿ 5ನೇ ಸ್ಥಾನದಲ್ಲಿದ್ದಾರೆ. ರಾಮ್ ಚರಣ್​ ಅವರ ಆರ್​ಆರ್​ಆರ್​ ಸಹನಟ ಜೂನಿಯರ್ ಎನ್​ಟಿಆರ್​ IMDbಯ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಈ ಪಟ್ಟಿಯಲ್ಲಿ ಶಾರುಖ್ ಖಾನ್, ಸುರ್ವೀನ್ ಚಾವ್ಲಾ, ರಾಶಿ ಖನ್ನಾ ಮತ್ತು ಐಶ್ವರ್ಯಾ ರೈ ಬಚ್ಚನ್ ಕೂಡ ಇದ್ದಾರೆ.

ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ನನ್ನ ಜೀವನದಲ್ಲಿಯೂ ಟ್ರೆಂಡಿಗ್​ ಆಗಿದ್ದಾರೆಂದು ಬರೆದು, ವಿಂಕ್ ಮತ್ತು ಸ್ಮೈಲಿ ಎಮೋಜಿ ಹಾಕಿದ್ದಾರೆ. 2012ರಲ್ಲಿ ದಾಂಪತ್ಯ ಜೀವನ ಆರಂಭಿಸಿರುವ ಈ ಜೋಡಿ 10 ವರ್ಷಗಳ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಆಸ್ಕರ್ 2023ರಲ್ಲಿ ಭಾಗವಹಿಸಿದ ನಂತರ ನಟ ರಾಮ್ ಚರಣ್ ತಮ್ಮ ಮುಂಬರುವ ಚಿತ್ರ RC15 ಶೂಟಿಂಗ್​​ ಸೆಟ್‌ಗೆ ಮರಳಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಮ್ ಚರಣ್ ಅವರು ಆರ್‌ಸಿ15 ಚಿತ್ರೀಕರಣಕ್ಕೆ ಹಿಂತಿರುಗುತ್ತಿದ್ದಂತೆ, ನಾಟು ನಾಟು ನೃತ್ಯ ಪ್ರದರ್ಶನದ ಮೂಲಕ ನೃತ್ಯ ನಿರ್ದೇಶಕ ಪ್ರಭುದೇವ ಅ್ಯಂಡ್​ ಟೀಮ್​ ಸರ್ಪ್ರೈಸ್​ ಕೊಟ್ಟಿದ್ದರು.

ಇದನ್ನೂ ಓದಿ:RRR ನಾಟು ನಾಟು ಕ್ರೇಜ್​​: ಮಸ್ಕ್ ಮೆಚ್ಚುಗೆ, ನೂರಾರು ಟೆಸ್ಲಾ ಕಾರುಗಳಲ್ಲಿ ಲೈಟ್​ ಶೋ

ರಾಮ್ ಚರಣ್ ಮತ್ತು ಜೂನಿಯರ್ ಎನ್​​ಟಿಆರ್ ಅಮೋಘ ಅಭಿನಯದ ಸೂಪರ್​ ಹಿಟ್​ ಸಿನಿಮಾ ಒಂದು ವರ್ಷ ಪೂರೈಸುವ ಹೊಸ್ತಿಲಿನಲ್ಲಿದ್ದರೂ, 'ಆರ್​ಆರ್​ಆರ್' ಕ್ರೇಜ್​​​ ಕಡಿಮೆ ಆಗಿಲ್ಲ. ಅಮೆರಿಕದ ನ್ಯೂಜೆರ್ಸಿ ನಗರದಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಗೆದ್ದ ನಾಟು ನಾಟು ಹಾಡು ಸಖತ್​ ಸದ್ದು ಮಾಡಿದೆ. ಟೆಸ್ಲಾ ಕಾರುಗಳನ್ನು ಒಂದೆಡೆ ನಿಲ್ಲಿಸಿ ಲೈಟ್ ಶೋ ಮಾಡಲಾಗಿದೆ. ನಾಟು ನಾಟು ಹಾಡಿನ ಬೀಟ್​ಗೆ ತಕ್ಕಂತೆ ಕಾರುಗಳ ಲೈಟ್​​ಗಳು ಬ್ಲಿಂಕ್​ ಆಗಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ ಸಖತ್​ ಸದ್ದು ಮಾಡುತ್ತಿದೆ.

ಇದನ್ನೂ ಓದಿ:ವಿಶ್ವಾದ್ಯಂತ RRR​ ನಾಯಕರ ಕ್ರೇಜ್: ಜೂ.ಎನ್​ಟಿಆರ್​ ನಂ.1, ಎರಡನೇ ಸ್ಥಾನದಲ್ಲಿ ರಾಮ್​ಚರಣ್​

ABOUT THE AUTHOR

...view details