ಕರ್ನಾಟಕ

karnataka

ETV Bharat / entertainment

ಸಿಟಿ ಆಫ್ ಮಾರ್ಕಮ್ ಬೀದಿಗೆ ಎಆರ್ ರೆಹಮಾನ್ ಹೆಸರು.. ಕೃತಜ್ಞತೆ ಸಲ್ಲಿಸಿದ ಸಂಗೀತ ಮಾಂತ್ರಿಕ

ತಮ್ಮ ಹೆಸರನ್ನು ಕೆನಾಡಾದ ಬೀದಿಯೊಂದಕ್ಕೆ ಇಟ್ಟಿರುವುದಕ್ಕೆ ಸಂಗೀತ ಮಾಂತ್ರಿಕ ಎಆರ್​ ರೆಹಮಾನ್​ ಅವರು ಮಾರ್ಕಮ್ ಮೇಯರ್ ಫ್ರಾಂಕ್ ಸ್ಕಾರ್ಪಿಟ್ಟಿ, ಭಾರತೀಯ ಕಾನ್ಸುಲೇಟ್ ಜನರಲ್ ಅಪೂರ್ವ ಶ್ರೀವಾಸ್ತವ್​ ಮತ್ತು ಕೆನಡಾದ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

AR Rahman name for City of Markham street
ಸಿಟಿ ಆಫ್ ಮಾರ್ಕಮ್ ಬೀದಿಗೆ ಎಆರ್ ರೆಹಮಾನ್ ಹೆಸರು

By

Published : Aug 29, 2022, 4:15 PM IST

ಕೆನಡಾ: ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರ ಹೆಸರನ್ನು ಸಿಟಿ ಆಫ್ ಮಾರ್ಕಮ್ ಬೀದಿಗೆ ಹೆಸರಿಸುವ ಮೂಲಕ ಗೌರವಿಸಲಾಗಿದೆ. ಮಾರ್ಕಮ್ ನಗರ ಮತ್ತು ಮೇಯರ್ ಫ್ರಾಂಕ್ ಸ್ಕಾರ್ಪಿಟ್ಟಿ ಮತ್ತು ಕೆನಡಾದ ಜನರಿಂದ ದೊರೆತಿರುವ ಈ ಮನ್ನಣೆ ಮತ್ತು ಗೌರವಕ್ಕೆ ಎಆರ್ ರೆಹಮಾನ್ ಕೃತಜ್ಞತೆ ಸಲ್ಲಿಸಿದ್ದಾರೆ.

'ನನ್ನ ಜೀವನದಲ್ಲಿ ಇದನ್ನು ನಾನು ಎಂದಿಗೂ ಊಹಿಸಿರಲಿಲ್ಲ. ಕೆನಡಾದ ಮಾರ್ಕಮ್ ಮೇಯರ್ ಫ್ರಾಂಕ್ ಸ್ಕಾರ್ಪಿಟ್ಟಿ ಮತ್ತು ಸಲಹೆಗಾರರು, ಭಾರತೀಯ ಕಾನ್ಸುಲೇಟ್ ಜನರಲ್ ಅಪೂರ್ವ ಶ್ರೀವಾಸ್ತವ್​ ಮತ್ತು ಕೆನಡಾದ ಜನರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಎ ಆರ್ ರೆಹಮಾನ್ ಹೆಸರು ನನ್ನದಲ್ಲ. ಕರುಣಾಮಯಿ ಎಂದರ್ಥ. ಕರುಣಾಮಯಿ ನಮ್ಮ ಸಾಮಾನ್ಯ ದೇವರ ಗುಣವಾಗಿದೆ. ಒಬ್ಬರು ಮಾತ್ರ ಕರುಣಾಮಯಿಯ ಸೇವಕರಾಗಬಹುದು. ಆದ್ದರಿಂದ ಆ ಹೆಸರು ಕೆನಡಾದಲ್ಲಿ ವಾಸಿಸುವ ಎಲ್ಲಾ ಜನರಿಗೆ ಶಾಂತಿ, ಸಮೃದ್ಧಿ, ಸಂತೋಷ ಮತ್ತು ಆರೋಗ್ಯವನ್ನು ತರಲಿ. ನಿಮೆಗೆಲ್ಲ ದೇವರ ಕೃಪೆ ಇರಲಿ' ಎಂದು ಪ್ರಾರ್ಥಿಸಿದ್ದಾರೆ.

ಸಿಟಿ ಆಫ್ ಮಾರ್ಕಮ್ ಬೀದಿಗೆ ಎಆರ್ ರೆಹಮಾನ್ ಹೆಸರು

'ಈ ಎಲ್ಲಾ ಪ್ರೀತಿಗಾಗಿ ನಾನು ಭಾರತದ ನನ್ನ ಸಹೋದರ ಸಹೋದರಿಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನೊಂದಿಗೆ ಕೆಲಸ ಮಾಡಿದ ಎಲ್ಲಾ ಸೃಜನಶೀಲ ವ್ಯಕ್ತಿಗಳು, ಚಿತ್ರರಂಗದ ನೂರು ವರ್ಷಗಳನ್ನು ಆಚರಿಸಲು ನನಗೆ ಸ್ಫೂರ್ತಿ ನೀಡಿದವವರಿಗೆ ಧನ್ಯವಾದಗಳು. ನಾನು ಸಾಗರದಲ್ಲಿನ ಸಣ್ಣ ಹನಿ ಅಷ್ಟೇ. ಈ ಗೌರವ ನನಗೆ ಇನ್ನೂ ಹೆಚ್ಚು ಜವಾಬ್ದಾರಿಯನ್ನು ನೀಡಿ, ಸುಸ್ತಾಗಬಾರದು, ನಿವೃತ್ತಿಯಾಗದೆ ಸ್ಫೂರ್ತಿದಾಯಕವಾಗಿರುವಂತೆ ಮಾಡಿದೆ. ಒಂದು ವೇಳೆ ನಾನು ದಣಿದಿದ್ದರೂ ಸಹ, ನನಗೆ ಮಾಡಲು ಇನ್ನೂ ಹೆಚ್ಚಿನ ಕೆಲಸಗಳಿವೆ. ಹೆಚ್ಚು ಜನರನ್ನು ಸಂಪರ್ಕಿಸಲು, ಹೆಚ್ಚು ಸೇತುವೆಗಳನ್ನು ದಾಟಬೇಕಿದೆ ಎಂದು ನೆನಪು ಮಾಡಿಕೊಳ್ಳುತ್ತೇನೆ' ಎಂದು ಎಆರ್ ರೆಹಮಾನ್ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ :ಐಎಂಎಫ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಡಾ. ಕೆ ಸುಬ್ರಮಣಿಯನ್ ನೇಮಕ

ABOUT THE AUTHOR

...view details